ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » 'ಆ.15ರ ನಂತ್ರ ಹೊಸ ಯಡಿಯೂರಪ್ಪನನ್ನು ನೋಡುತ್ತೀರಿ' (Mysore | Yeddyurappa | BJP | Congress | Advani | Ishwarappa)
Bookmark and Share Feedback Print
 
PTI
ಆಗೋಸ್ಟ್ 15ರ ನಂತರ ಹೊಸ ಯಡಿಯೂರಪ್ಪನನ್ನು ನೋಡುತ್ತೀರಿ. 15 ದಿವಸ ರಾಜಧಾನಿಯಲ್ಲಿ, ಉಳಿದ 15 ದಿವಸ ತಾಲೂಕು, ಜಿಲ್ಲಾ ಕೇಂದ್ರಗಳಿಗೆ ಖುದ್ದಾಗಿ ಭೇಟಿ ನೀಡುತ್ತೇನೆ. ಆ ಮೂಲಕ ಪಕ್ಷ ಬೇಧ ಮರೆತು ಕಾರ್ಯನಿರ್ವಹಿಸುತ್ತೇನೆ. ಅಲ್ಲದೆ, ಕಾಂಗ್ರೆಸ್, ಜೆಡಿಎಸ್ ಪಕ್ಷಕ್ಕೆ ಪಾಠ ಕಲಿಸಲು ಸಂಕಲ್ಪ ಮಾಡಿದ್ದೇನೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದ್ದಾರೆ.

ತಾಜಾ ಸುದ್ದಿಗಳು ತಕ್ಷಣ ಲಭ್ಯವಾಗಲು ಟ್ವಿಟ್ಟರ್‌ನಲ್ಲಿ ನಮ್ಮನ್ನು ಫಾಲೋ ಮಾಡಿ

ಶನಿವಾರ ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ಬೃಹತ್ ಜನಜಾಗೃತಿ ಸಮಾವೇಶದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಆಡಳಿತದಲ್ಲಿ ಅಮೂಲಾಗ್ರ ಬದಲಾವಣೆ ತರುವ ಇಚ್ಚೆ ಹೊಂದಿದ್ದೇನೆ. ಈ ನಾಡಿನ ಅಭಿವೃದ್ದಿಯೇ ನನಗೆ ಮೂಲಮಂತ್ರವಾಗಿದೆ. ಯಾವುದೇ ಕಾರಣಕ್ಕೂ ರಾಜ್ಯದ ಜನರಿಗೆ ತೊಂದರೆಯಾಗಲು ಬಿಡುವುದಿಲ್ಲ ಎಂದು ಭರವಸೆ ನೀಡಿದರು.

ಮುಂದಿನ ಎರಡೂ ಮುಕ್ಕಾಲು ವರ್ಷದಲ್ಲಿ ರಾಜ್ಯವನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ಯುವುದೇ ನನ್ನ ಗುರಿ. ಆ ಮೂಲಕ ಕಾಂಗ್ರೆಸ್, ಜೆಡಿಎಸ್‌ಗೆ ಉತ್ತರ ಕೊಡುತ್ತೇವೆ. ಅದೇ ರೀತಿ ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಅಡ್ರೆಸ್ ಇಲ್ಲದಂತೆ ಆಗಬೇಕು, ಅದಕ್ಕೆ ನಿಮ್ಮೆಲ್ಲರ ಸಹಕಾರ ಬೇಕು ಎಂದು ಈ ಸಂದರ್ಭದಲ್ಲಿ ಹೇಳಿದರು.

ಜನ ಸೇವೆಗಾಗಿ ಪ್ರಾಣ ಮುಡಿಪಾಗಿದೆ: ನನ್ನ ಹೆಸರು ನಕ್ಸಲ್ ಹಿಟ್‌ಲಿಸ್ಟ್‌ನಲ್ಲಿ ಇದೆ ಎಂಬುದಾಗಿ ಪತ್ರಿಕೆಯೊಂದು ವರದಿ ಮಾಡಿದೆ. ಆದರೆ ನಾನು ಆ ಬಗ್ಗೆ ಚಿಂತಿಸೋಲ್ಲ. ಜನಸೇವೆಗಾಗಿ ನನ್ನ ಪ್ರಾಣ ಮುಡಿಪಾಗಿದೆ. ಜನಸೇವೆ ಮಾಡುತ್ತ ಪ್ರಾಣ ಕೊಡಲು ಹಿಂದೆ ಮುಂದೆ ನೋಡಲ್ಲ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಈ ಸಂದರ್ಭದಲ್ಲಿ ತಿಳಿಸಿದರು.

ಈ ನಾಡಿನ ಜನರನ್ನು ಬಲಿಗೊಡಲು ಬಿಡುವುದಿಲ್ಲ, ಒಬ್ಬ ಯಡಿಯೂರಪ್ಪ ಹೋದರೆ ಏನೂ ತೊಂದರೆ ಇಲ್ಲ. ಮುಖ್ಯವಾಗಿ ಜನರ, ರೈತರಿಗೆ ಒಳಿತಾಗಬೇಕು. ಹಾಗಾಗಿ ಯಾವುದೇ ತ್ಯಾಗಕ್ಕೂ ಸಿದ್ದ. ಮುಖ್ಯಮಂತ್ರಿ ಕುರ್ಚಿ ಬೇಕಾದ್ರೂ ತ್ಯಜಿಸಲು ಸಿದ್ದ ವಿನಃ ನಾಡಿನ ಜನರಿಗೆ ದ್ರೋಹ ಆಗಲು ಬಿಡುವುದಿಲ್ಲ ಎಂದು ಭರವಸೆ ನೀಡಿದರು.

ನಮ್ಮದು ಕೃಷಿ ಸಂಸ್ಕೃತಿ, ಈ ನಾಡಿನ ಜನರಿಗೆ ಪ್ರಾಮಾಣಿಕವಾಗಿ ದುಡಿದು ಅನ್ನ ಕೊಡುವವರು ರೈತರು. ನಿಮ್ಮ ಋಣ ತೀರಿಸಲು ಎಷ್ಟು ಯೋಜನೆ ಕೊಟ್ಟರೂ ಸಾಲದು. ನಿಮ್ಮ ಅಪೇಕ್ಷೆ ತಕ್ಕಂತೆ ಆಡಳಿತ ನಡೆಸುವ ದೃಢ ಸಂಕಲ್ಪದೊಂದಿಗೆ ಮುಂದುವರಿಯುತ್ತಿದ್ದೇನೆ. ಅದಕ್ಕೆ ನಿಮ್ಮೆಲ್ಲರ ಆಶೀರ್ವಾದ, ಸಹಕಾರ ಬೇಕು ಎಂದರು.

ನನ್ನ ರಾಜೀನಾಮೆ ಯಾಕೆ ಸಿದ್ದರಾಮಯ್ಯನವರೇ?: ಈ ನಾಡಿನ ಮಾಲೀಕರು ನೀವು...ಈ ಸರಕಾರ ರೈತರಿಗಾಗಿ, ನಾಡಿನ ಜನರಿಗಾಗಿ ಏನು ಮಾಡುತ್ತಿದೆ ಎಂಬುದನ್ನು ನಿಮಗೆ ತಿಳಿಸುವ ಸಲುವಾಗಿ ಈ ಸಮಾವೇಶ ನಡೆಸಲಾಗುತ್ತಿದೆ. ಆದರೆ ನಮ್ಮ ವಿರೋಧ ಪಕ್ಷದ ಸಿದ್ದರಾಮಯ್ಯನವರು, ದೇಶಪಾಂಡೆ ಮುಖ್ಯಮಂತ್ರಿಗಳು ರಾಜೀನಾಮೆ ಕೊಡಬೇಕೆಂದು ಒತ್ತಾಯಿಸುತ್ತಲೇ ಬಂದಿದ್ದಾರೆ. ನಾನು ಯಾಕೆ ರಾಜೀನಾಮೆ ನೀಡಬೇಕು ಎಂದು ಖಾರವಾಗಿ ಮುಖ್ಯಮಂತ್ರಿಗಳು ಪ್ರಶ್ನಿಸಿದರು.

ರಾಜ್ಯದ ರೈತರ, ಅಲ್ಪಸಂಖ್ಯಾತರ, ದೀನ, ದಲಿತರ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸಿದ್ದಕ್ಕಾಗಿ ರಾಜೀನಾಮೆ ಕೊಡಬೇಕಾ ಸಿದ್ದರಾಮಯ್ಯನವರೇ ಎಂದು ತಿರುಗೇಟು ನೀಡಿದರು. ನಾಡಿನ ಜನ ನಂಬಿಕೆದ್ರೋಹ, ವಿಶ್ವಾಸ ದ್ರೋಹ ಸಹಿಸೋದಿಲ್ಲ. ಕೊಟ್ಟ ಮಾತಿನಂತೆ ಅಧಿಕಾರ ಕೊಟ್ಟಿದ್ದರೆ. ಈ ಸ್ಥಿತಿ ಬರುತ್ತಿರಲಿಲ್ಲ ಸಿದ್ದರಾಮಯ್ಯನವರೇ, ನಾವು ರಾಜೀನಾಮೆ ಕೊಟ್ಟು ಜನರ ಆಶೀರ್ವಾದ ಪಡೆದು ಅಧಿಕಾರದ ಗದ್ದುಗೆ ಹಿಡಿದಿದ್ದೇವೆ. ಇದು ಪ್ರಜಾತಂತ್ರ ವ್ಯವಸ್ಥೆ ಎಂಬುದನ್ನು ಕಾಂಗ್ರೆಸ್ ಮುಖಂಡರು ಮರೆಯಬಾರುದು ಎಂದು ಎಚ್ಚರಿಸಿದರು.

ಅಧಿಕಾರ ವಹಿಸಿಕೊಂಡ ದಿನದಿಂದ ಸಾಕಷ್ಟು ಅಗ್ನಿ ಪರೀಕ್ಷೆಗಳನ್ನು ಎದುರಿಸಿದ್ದೇನೆ. ಅವೆಲ್ಲವನ್ನೂ ಸೈರಣೆಯಿಂದ ನಿಭಾಯಿಸಿ ಆಡಳಿತ ನೀಡಿದ್ದೇನೆ. ರಾಜ್ಯವನ್ನು ಭಿಕ್ಷುಕರ ನಾಡನ್ನಾಗಿ ಮಾಡಿದ್ದು ಕಾಂಗ್ರೆಸ್ ಪಕ್ಷ ಅದಕ್ಕಾಗಿ ಜನ ನಿಮ್ಮನ್ನು ತಿರಸ್ಕರಿಸಿ ಬಿಜೆಪಿಗೆ ಆಶೀರ್ವಾದ ಮಾಡಿದ್ದಾರೆ. ನಾನು ಹೆಚ್ಚು ಕಾಲಾವಕಾಶ ಕೇಳೋಲ್ಲ ಸಿದ್ದರಾಮಯ್ಯನವರೇ, ಎರಡು ಮುಕ್ಕಾಲು ವರ್ಷ ಅವಕಾಶ ಕೊಡಿ, ಜನ ನೆಮ್ಮದಿಯಿಂದ ಬದುಕುವ ಅವಕಾಶ ಮಾಡಿಕೊಡುತ್ತೇನೆ.

ರಾಜ್ಯದಲ್ಲಿನ ವಿದ್ಯುತ್ ಸಮಸ್ಯೆ, ನೆರೆ ಪರಿಹಾರ, ಅಕ್ರಮ ಗಣಿ ಎಲ್ಲ ವಿಚಾರಕ್ಕೂ ಕಾಂಗ್ರೆಸ್ಸಿಗರು ಮುಖ್ಯಮಂತ್ರಿಗಳು ರಾಜೀನಾಮೆ ನೀಡಬೇಕೆಂದು ಆಗ್ರಹಿಸುತ್ತಾರೆ. ನಾನು ಕೂಡ 30 ವರ್ಷಗಳ ಕಾಲ ವಿರೋಧ ಪಕ್ಷದಲ್ಲಿದ್ದೆ, ಪಾದಯಾತ್ರೆ, ಸಮಾವೇಶ ಮಾಡಿದ್ದೇನೆ. ಆದರೆ ನಿಮ್ಮ ಹಾಗೇ ಸೊಂಟದ ಕೆಳಗಿನ ಭಾಷೆ ಉಪಯೋಗಿಸಿ, ಕುಣಿದು ಕುಪ್ಪಳಿಸುತ್ತಾ ಪಾದಯಾತ್ರೆ ಮಾಡಿಲ್ಲ ಎಂದು ಸಿಎಂ ಆಕ್ರೋಶ ವ್ಯಕ್ತಪಡಿಸಿದರು.

ಸಮಾವೇಶದ ಹೆಚ್ಚಿನ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಆಂಧ್ರದಲ್ಲಿ ರಫ್ತು ನಿಷೇಧಕ್ಕೆ ಕಾಂಗ್ರೆಸ್ ಒತ್ತಾಯಿಸಿಲ್ಲವೇಕೆ?


ಸಿದ್ದು ತವರಲ್ಲಿ ಶಕ್ತಿ ಪ್ರದರ್ಶನ-ಸಿಎಂಗೆ ಆಡ್ವಾಣಿ ಶಹಬ್ಬಾಸ್‌ಗಿರಿ


ಕೈ ಪಾಳಯದಲ್ಲಿ ಇರೋದು ನಕಲಿ ಕಾಂಗ್ರೆಸ್ಸಿಗರು-ಅನಂತ್ ಕಿಡಿ
ಸಂಬಂಧಿತ ಮಾಹಿತಿ ಹುಡುಕಿ