ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ನ್ಯಾಯಾಧೀಶರ ಆಸ್ತಿ ಸಮೀಕ್ಷೆ ಆಗಬೇಕು: ನಾಡಗೌಡ (Nadagoeda | JDU | Supreme court | High court)
Bookmark and Share Feedback Print
 
ಸ್ವಾತಂತ್ರ್ಯ ನಂತರ ದೇಶವನ್ನಾಳಿದ ಜನಪ್ರತಿನಿಗಳು ಹಾಗೂ ಹೈಕೋರ್ಟ್, ಸುಪ್ರೀಂಕೋರ್ಟ್ ನ್ಯಾಯಾಧೀಶರಾಗಿ ಸೇವೆ ಸಲ್ಲಿಸಿದವರ ಆಸ್ತಿ ಸಮೀಕ್ಷೆಯಾಗಬೇಕು ಎಂದು ಸಂಯುಕ್ತ ಜನತಾದಳದ ರಾಷ್ಟ್ರೀಯ ಉಪಾಧ್ಯಕ್ಷ ಡಾ.ಎಂ.ಪಿ.ನಾಡಗೌಡ ಒತ್ತಾಯಿಸಿದರು.

ಆಸ್ತಿಗಳ ಸಮೀಕ್ಷೆಯಿಂದ ಎಷ್ಟು ಆಸ್ತಿ ಮಾಡಿದ್ದಾರೆ ಎಂಬುದು ಬಹಿರಂಗವಾಗಲಿದೆ. ಮಿತಿಮೀರಿದ ಆಸ್ತಿಗಳಿಕೆಯನ್ನು ಸರಕಾರ ವಶಪಡಿಸಿಕೊಂಡಲ್ಲಿ ಮುಂದಿನ ಹತ್ತು ವರ್ಷಗಳ ಕಾಲ ಯಾವುದೇ ತೆರಿಗೆಗಳನ್ನು ವಿಧಿಸದೇ ಸುಗಮ ಆಡಳಿತ ನಡೆಸಬಹುದಾಗಿದೆ. ಮೊದಲು ಈ ಕೆಲಸ ಆಗಬೇಕು ಎಂದರು.

ಕೇಂದ್ರ ಸರಕಾರ ದೇಶದ ಸಾಮಾನ್ಯ ಜನರನ್ನು ಮರೆಯುತ್ತಿದೆ. ಪರಿಣಾಮವಾಗಿ ಅಗತ್ಯ ಆಹಾರ ಧಾನ್ಯಗಳ ಬೆಲೆ ಗಗನಕ್ಕೇರುತ್ತಿವೆ. ಬಡತನ ಸಮಸ್ಯೆ ಹೆಚ್ಚುತ್ತಿದೆ. ಬಡವರು ಆಹಾರವಿಲ್ಲದೆ ಸಾಯುವ ಸ್ಥಿತಿ ಬಂದೊದಗಿದೆ. ಕಾಶ್ಮೀರ ಸಮಸ್ಯೆ ಗಂಭೀರವಾಗಿದ್ದು, ಪರಿಹಾರ ಕಂಡು ಹಿಡಿಯುವ ಪ್ರಾಮಾಣಿಕ ಪ್ರಯತ್ನ ನಡೆದಿಲ್ಲ. ಈ ಕುರಿತು ಚರ್ಚಿಸಲು ಸರ್ವ ಪಕ್ಷಗಳ ಸಭೆ ಕರೆಯಬೇಕು. ಶಾಂತಿ ಸ್ಥಾಪಿಸುವ ಪ್ರಕ್ರಿಯೆಗಳು ನಡೆಯಬೇಕು ಎಂದು ತಿಳಿಸಿದರು.

ದೇಶದ 150 ಜಿಲ್ಲೆಗಳಲ್ಲಿ ನಕ್ಸಲ್ ಪ್ರಾಬಲ್ಯ ಹೆಚ್ಚಿದೆ. ಅಲ್ಲೆಲ್ಲ ಆಡಳಿತ ಕುಸಿದು ಅಮಾಯಕರು ಜೀವ ಕಳೆದುಕೊಳ್ಳುತ್ತಿದ್ದಾರೆ. ನಕ್ಸಲ್ ನಿಗ್ರಹಕ್ಕೆ ಕಠಿಣ ಕ್ರಮ ಅಗತ್ಯವಿದೆ. ದೇಶದಲ್ಲಿ ಜಾತಿವಾರು ಸಮೀಕ್ಷೆ ಆರಂಭಗೊಂಡಿರುವುದು ಶ್ಲಾಘನೀಯ. ಜಾತಿವಾರು ಸಮೀಕ್ಷೆಯಲ್ಲಿ ತಲೆವಾರು ಎಣಿಕೆ ಆಗಲಿ. ಇದರಿಂದ ಎಲ್ಲ ಜಾತಿ, ಜನಾಂಗಗಳ ನಿಜವಾದ ಅಂಕಿ, ಸಂಖ್ಯೆ ಲಭ್ಯವಾಗಿ, ಸಾಮಾಜಿಕ ನ್ಯಾಯ ಕಲ್ಪಿಸಲು ಅನುಕೂಲವಾಗಲಿದೆ ಎಂದರು.
ಸಂಬಂಧಿತ ಮಾಹಿತಿ ಹುಡುಕಿ