ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ನಾಗರ ಹಾವಿಗೆ ಹಾಲೆರೆಯುವವರು ಅಜ್ಞಾನಿಗಳು: ಮುರುಘಾ ಶರಣರು (Murugha mutt | Nagarahahu | Chithra durga | Naga panchami)
Bookmark and Share Feedback Print
 
ಹಾವು ಹಾಲು ಕುಡಿಯುತ್ತದೋ ಇಲ್ಲವೋ ಎನ್ನುವುದು ಗೊತ್ತಿಲ್ಲದೆ ಹುತ್ತ, ನಾಗರ ಕಲ್ಲಿಗೆ ಹಾಲು ಎರೆಯುವ ಮೂಲಕ ಅಪವ್ಯಯ ಮಾಡುತ್ತಿದ್ದಾರೆ ಎಂದು ಶ್ರೀ ಶಿವಮೂರ್ತಿ ಮುರುಘಾ ಶರಣರು ಅಭಿಪ್ರಾಯವ್ಯಕ್ತಪಡಿಸಿದ್ದಾರೆ.

ಮುರುಘಾಮಠ ಸೇರಿದಂತೆ ನಾನಾ ಸಂಘಟನೆಗಳ ಸಂಯುಕ್ತ ಆಶ್ರಯದಲ್ಲಿ ನಾಗರ ಪಂಚಮಿ ಪ್ರಯುಕ್ತ ನಗರದ ಗಾಂಧಿನಗರದ ಸರಕಾರಿ ಶಾಲೆಯಲ್ಲಿ ಹಾಲು ಕುಡಿಸುವ ಹಬ್ಬ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದರು. ಸಮಾರಂಭದಲ್ಲಿ ಹುತ್ತ, ನಾಗರಕಲ್ಲಿಗೆ ಹಾಲು ಎರೆಯುವ ಬದಲಿಗೆ ಮಕ್ಕಳಿಗೆ ಹಾಲು ಕುಡಿಸಲಾಯಿತು.

ಹಾವಿನ ಆಹಾರ ಕಪ್ಪೆ, ಹಲ್ಲಿಯೇ ಹೊರತು ಹಾಲಲ್ಲ. ಹೀಗಿರುವಾಗ ಹಾಲು ಸುರಿದು ಹಾಳು ಮಾಡಬಾರದು. ಅಂಧ ಸಂಪ್ರದಾಯ ಬಿಟ್ಟು ಸತ್ಯವಾದವುಗಳನ್ನು ಆಚರಿಸಬೇಕು ಎಂದು ಕಿವಿಮಾತು ಹೇಳಿದರು.

ನಾಗರ ಪಂಚಮಿಯಂದು ಜನತೆ ನೈವೇದ್ಯದ ರೂಪದಲ್ಲಿ ಆಹಾರ ಪದಾರ್ಥಗಳನ್ನು ಹುತ್ತ, ನಾಗರಕಲ್ಲಿಗೆ ಹಾಕಿ ಬರುತ್ತಾರೆ. ನಮ್ಮಂತಹ ಸ್ವಾಮೀಜಿಗಳು, ವೈಚಾರಿಕ ಹಿನ್ನೆಲೆಯ ಬಸವಕೇಂದ್ರ ಮತ್ತಿತರ ಸಂಘಟನೆಗಳು ಪೌಷ್ಟಿಕಾಂಶ ಆಹಾರ ಹಾಳು ಮಾಡದೇ ಮಕ್ಕಳಿಗೆ ಕುಡಿಸುವ ಕಾರ್ಯಕ್ರಮವನ್ನು ಎರಡು ದಶಕಗಳಿಂದ ಮಾಡಿಕೊಂಡು ಬರುತ್ತಿದ್ದೇವೆ ಎಂದರು.
ಸಂಬಂಧಿತ ಮಾಹಿತಿ ಹುಡುಕಿ