ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಜನರಿಗೆ ವಿದ್ಯುತ್ ಬೇಕು, ಯಡಿಯೂರಪ್ಪ ಪ್ರಾಣ ಅಲ್ಲ: ಸಿದ್ದರಾಮಯ್ಯ (Siddaramaiah | BJP | Yeddyurappa | Congress | Ishwarappa, Reddy)
Bookmark and Share Feedback Print
 
ಬಿಜೆಪಿ ಜನಜಾಗೃತಿ ಸಮಾವೇಶಗಳಲ್ಲಿ ಬಿಜೆಪಿ ಮುಖಂಡರು ಸುಳ್ಳು ಹೇಳುವುದನ್ನು ನಿಲ್ಲಿಸಬೇಕು ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಆಗ್ರಹಿಸಿದ್ದು, ಬಿಜೆಪಿ ರಾಜ್ಯಾಧ್ಯಕ್ಷ ಈಶ್ವರಪ್ಪ ಸೇರಿದಂತೆ ಕೆಲವು ನಾಯಕರು ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದಾರೆ. ಸಂಸದ ಅನಂತ್ ಕುಮಾರ್ ಸರ್ಕಸ್‌ನ ಬಫೂನ್ ಆಗಿ ಹೋಗಿದ್ದಾರೆ ಎಂದು ಟೀಕಿಸಿದ್ದಾರೆ.

ತಾಜಾ ಸುದ್ದಿಗಳು ತಕ್ಷಣ ಲಭ್ಯವಾಗಲು ಟ್ವಿಟ್ಟರ್‌ನಲ್ಲಿ ನಮ್ಮನ್ನು ಫಾಲೋ ಮಾಡಿ

ಮೈಸೂರಿನಲ್ಲಿ ಶನಿವಾರ ನಡೆದ ಬಿಜೆಪಿ ಸಮಾವೇಶದಲ್ಲಿ ಈಶ್ವರಪ್ಪ ರಾಜ್ಯಪಾಲರ ಬಗ್ಗೆ ಬಳಸಿರುವ ಭಾಷೆ ಅವರ ಸಂಸ್ಕೃತಿಯನ್ನು ತೋರಿಸುವುದರ ಜೊತೆಗೆ ಸಂವಿಧಾನದಲ್ಲಿ ಅವರಿಗೆ ಗೌರವ ಇಲ್ಲದಿರುವುದನ್ನು ತೋರಿಸುತ್ತದೆ ಎಂದು ಪತ್ರಿಕಾಗೋಷ್ಠಿಯಲ್ಲಿ ಆಕ್ರೋಶ ವ್ಯಕ್ತಪಡಿಸಿದರು.

ಕಾಂಗ್ರೆಸ್‌ನಲ್ಲಿ ನಕಲಿ ನಾಯಕರೇ ತುಂಬಿದ್ದಾರೆ ಎಂದಿರುವ ಅನಂತ್ ಕುಮಾರ್, ಸರ್ಕಸ್‌ನ ಬಫೂನ್ ತರಹ ಆಡುತ್ತಿದ್ದಾರೆ. ಅವರ ಪಕ್ಷದಲ್ಲಿ, ಸರಕಾರದಲ್ಲಿ ಬೇರೆ ಪಕ್ಷದವರೇ ಇದ್ದಾರಲ್ಲ ಅವರಲ್ಲಿ ಅಸಲಿ ಯಾರು, ನಕಲಿ ಯಾರು ಎಂಬುದನ್ನು ಬಹಿರಂಗಪಡಿಸಲಿ ಎಂದರು.

ಕೇಂದ್ರದಲ್ಲಿ ಮಂತ್ರಿಯಾಗಿದ್ದಾಗ ಮಾಡಿದ ಪಾಪದ ಕಾರ್ಯಗಳಿಗೆ ಈಗಲೂ ತನಿಖೆ ಎದುರಿಸುತ್ತಿರುವ ಅನಂತ್ ಕುಮಾರ್ ಎಷ್ಟು ಪ್ರಾಮಾಣಿಕ ವ್ಯಕ್ತಿ ಎಂಬುದು ಜನರಿಗೆ ಗೊತ್ತಿದೆ ಎಂದು ವ್ಯಂಗ್ಯವಾಡಿದರು.

ಜನರಿಗೆ ಯಡಿಯೂರಪ್ಪನ ಪ್ರಾಣ ಬೇಕಾಗಿಲ್ಲ: ರಾಜ್ಯದಲ್ಲಿ ಈಗಿರುವ ವಿದ್ಯುತ್‌ನ ಕೆಟ್ಟ ಪರಿಸ್ಥಿತಿ ಬೇಸಿಗೆಯಲ್ಲೂ ಇರಲಿಲ್ಲ. ರಾಜ್ಯದ ಜನರಿಗೆ ಬೇಕಾಗಿರುವುದು ವಿದ್ಯುತ್ ಹೊರತು, ಯಡಿಯೂರಪ್ಪನ ಪ್ರಾಣ ಅಲ್ಲ ಎಂದು ಸಿದ್ದರಾಮಯ್ಯ ಮುಖ್ಯಮಂತ್ರಿಗಳ ಹೇಳಿಕೆಗೆ ತಿರುಗೇಟು ನೀಡಿದ್ದಾರೆ.

ಹೊರಗಡೆಯಿಂದ ಖರೀದಿಸಿ ವಿದ್ಯುತ್ ನೀಡಿ, ಇಲ್ಲದಿದ್ದರೆ ರಾಜೀನಾಮೆ ನೀಡಿ ಎಂದು ಮುಖ್ಯಮಂತ್ರಿಗಳಿಗೆ ಹೇಳಿದ್ದೇನೆ ಇದು ತಪ್ಪೇ ಎಂದು ಪ್ರಶ್ನಿಸಿದರು. ಈ ಸರಕಾರವನ್ನು ಅಸ್ಥಿರಗೊಳಿಸುವ ಪ್ರಯತ್ನ ಕಾಂಗ್ರೆಸ್ ಮಾಡಲ್ಲ. ಅದರ ಒಳ ಜಗಳದಿಂದ ಸರಕಾರ ಬಿದ್ದರೆ ನಾವು ಜವಾಬ್ದಾರರಲ್ಲ ಎಂದರು.

ಬಳ್ಳಾರಿಯಲ್ಲಿ ರೆಡ್ಡಿಗಳು ನೂರಾರು ಎಕರೆಯಲ್ಲಿ ಅರಮನೆ ಕಟ್ಟಿಕೊಂಡಿರುವುದೇ ಅಭಿವೃದ್ಧಿ. ಅದೇ ಅವರ ಸಾಧನೆ. ಅಲ್ಲಿ ಒಂದು ರಸ್ತೆಗಳೂ ಸರಿ ಇಲ್ಲ. ರಸ್ತೆಯಲ್ಲಿ ಓಡಾಡಿದರೆ ಧೂಳು ಮೆತ್ತಿಕೊಳ್ಳುತ್ತದೆ ಇದು ಅಲ್ಲಿನ ರಸ್ತೆಯ ಸ್ಥಿತಿ ಎಂದರು. ಬರೇ ಭಾಷಣದಲ್ಲಿ ಬಳ್ಳಾರಿಗೆ ಬಂದು ನೋಡಿ ಅಭಿವೃದ್ಧಿ ಮಾಡಿದ್ದೇವೆ ಎಂದು ಬೊಗಳೆ ಬಿಡುತ್ತಿದ್ದಾರೆ ಎಂದು ಕಿಡಿಕಾರಿದರು.
ಸಂಬಂಧಿತ ಮಾಹಿತಿ ಹುಡುಕಿ