ಪತ್ನಿ ಪ್ರಿಯಾಂಕಾ ಗುಪ್ತಾ ಹತ್ಯೆ ಪ್ರಕರಣದಲ್ಲಿ ಪೊಲೀಸ್ ಬಂಧನದಲ್ಲಿರುವ ಆರೋಪಿ ಸತೀಶ್ ಕುಮಾರ್ ಗುಪ್ತಾ ಬ್ಲೇಡ್ನಿಂದ ತನ್ನ ಕೈ ಕೊಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ನಡೆದಿದೆ.
ಗುಪ್ತಾನನ್ನು ವೆಂಕಟೇಶ್ವರ ಲೇಔಟ್ನಲ್ಲಿರುವ ಮನೆಗೆ ಭಾನುವಾರ ಬೆಳಿಗ್ಗೆ ಆತನನ್ನು ವಿಚಾರಣೆಗಾಗಿ ಕರೆದುಕೊಂಡು ಹೋಗಿದ್ದ ಸಂದರ್ಭ, ತನಿಖಾಧಿಕಾರಿಗಳ ಕಣ್ತಪ್ಪಿಸಿ ಬ್ಲೇಡ್ನ ತುಂಡನ್ನು ತೆಗೆದುಕೊಂಡು ಬಂದಿದ್ದ. ಹುಳಿಮಾವು ಠಾಣೆಯಲ್ಲಿ ಭಾನುವಾರ ತಡರಾತ್ರಿ ಆ ಬ್ಲೇಡ್ನ ತುಂಡಿನಿಂದ ತನ್ನ ಎಡಗೈ ನರವನ್ನು ಕತ್ತರಿಸಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಈ ಘಟನೆಯನ್ನು ಕೂಡಲೇ ಗಮನಿಸಿದ ಠಾಣೆಯ ಸಿಬ್ಬಂದಿ ಸತೀಶ್ ಕುಮಾರ್ನನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ. ಇನ್ಫೋಸಿಸ್ ಮಾನವ ಸಂಪನ್ಮೂಲ ವಿಭಾಗದಲ್ಲಿ ವ್ಯವಸ್ಥಾಪಕನಾಗಿದ್ದ ಸತೀಶ್ ಕುಮಾರ್ ಪತ್ನಿ ಪ್ರಿಯಾಂಕಾ ಗುಪ್ತಾ ಅವರ ಕತ್ತು ಹಿಸುಕಿ ಹತ್ಯೆಗೈದಿದ್ದ. ತೀವ್ರ ವಿಚಾರಣೆಯ ನಂತರ ಮೊಬೈಲ್ ಸಂಭಾಷಣೆಯ ಸಾಕ್ಷ್ಯದ ನೆಲೆಯಲ್ಲಿ ಸತೀಶ್ ಪೊಲೀಸ್ ಬಲೆಗೆ ಬಿದ್ದಿದ್ದ.