ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ವಂದೇ ಮಾತರಂ ಮುಸ್ಲಿಮರಲ್ಲಿ ತಪ್ಪು ಅಭಿಪ್ರಾಯವಿದೆ: ಮುಮ್ತಾಜ್ (Vandhe matharam | Ali Khan | BJP | Congress | Yeddyurappa)
Bookmark and Share Feedback Print
 
'ವಂದೇ ಮಾತರಂ' ಗೀತೆಯ ಬಗ್ಗೆ ಅಲ್ಪಸಂಖ್ಯಾತರಲ್ಲಿ ತಪ್ಪು ಅಭಿಪ್ರಾಯ ಮೂಡಿಸಿದ್ದು, ವಾಸ್ತವವಾಗಿ ಅದು ದೇಶಪ್ರೇಮಿಗಳ ದೇಶಭಕ್ತಿಗೀತೆ ಎಂದು ರಾಜ್ಯ ವಕ್ಫ್ ಖಾತೆ ಸಚಿವ ಮುಮ್ತಾಜ್ ಅಲಿ ಖಾನ್ ಅಭಿಪ್ರಾಯವ್ಯಕ್ತಪಡಿಸಿದ್ದಾರೆ.

ತಾಲೂಕಿನ ನೊಣವಿನ ಕೆರೆಯಲ್ಲಿ ವಕ್ಫ್ ಮಂಡಳಿ ಹಾಗೂ ಜಾಮೀಯ ಮಸೀದಿ ಕಮಿಟಿ ವತಿಯಿಂದ ಹಮ್ಮಿಕೊಂಡಿದ್ದ 38 ಲಕ್ಷ ರೂ. ವೆಚ್ಚದ ಜಾಮೀಯ ಮಸೀದಿ ಸಮುದಾಯ ಭವನ ಕಟ್ಟಡ ಶಂಕುಸ್ಥಾಪನಾ ಸಮಾರಂಭದಲ್ಲಿ ಅವರು ಮಾತನಾಡಿದರು.

ಪ್ರತಿಯೊಬ್ಬರಲ್ಲೂ ರಾಷ್ಟ್ರದ ಬಗ್ಗೆ ಅಭಿಮಾನ ಮತ್ತು ಭಕ್ತಿ ಇರಬೇಕು. ವಂದೇ ಮಾತರಂ ದೇಶಭಕ್ತಿ ಗೀತೆ. ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಮಹಾನ್ ದೇಶಭಕ್ತರು ಕಟ್ಟಿದ ಹಾಡು ಅದು. ಆದರೆ ಕೆಲವು ಸ್ವಾರ್ಥ ಜನರು ವಿನಾಕಾರಣ ಜನರಲ್ಲಿ ಗೀತೆಯ ಬಗ್ಗೆ ತಪ್ಪು ಮಾಹಿತಿ ನೀಡಿ ವಿವಾದ ಸೃಷ್ಟಿಸಿದ್ದಾರೆ. ಕೀಳರಿಮೆ ಇಟ್ಟುಕೊಳ್ಳದೇ ಅಲ್ಪಸಂಖ್ಯಾತರು ವಂದೇ ಮಾತರಂ ಹಾಡಬೇಕು ಎಂದರು.

ಹಿಂದಿನ ಸರಕಾರಗಳು ಕೇವಲ ಮತಕ್ಕಾಗಿ ಅಲ್ಪಸಂಖ್ಯಾತರನ್ನು ಒಲೈಸುವ ಯತ್ನ ನಡೆಸಿದ್ದವು. ಸಮುದಾಯದ ಅಭಿವೃದ್ದಿ ಹಾಗೂ ಕಲ್ಯಾಣವನ್ನು ಎಂದೂ ಬಯಸಿಲ್ಲ. ವಾರ್ಷಿಕವಾಗಿ 15-20 ಕೋಟಿ ರೂ.ಹಣವನ್ನು ಕೊಟ್ಟು ಪ್ರಚಾರ ಗಿಟ್ಟಿಸಿಕೊಳ್ಳುತ್ತಿದ್ದರು. ಆದರೆ ರಾಜ್ಯದ ಬಿಜೆಪಿ ಸರಕಾರ ತನ್ನ ಬಜೆಟ್‌ನಲ್ಲಿ ಅಲ್ಪ-ಸಂಖ್ಯಾತರ ಅಭಿವೃದ್ಧಿಗಾಗಿ ನಾನಾ ಯೋಜನೆಗಳನ್ನು ರೂಪಿಸಿದೆ ಎಂದು ಹೇಳಿದರು.

ಶಿಕ್ಷಣ, ವಸತಿ, ಆರೋಗ್ಯ, ಸಮುದಾಯ ಅಭಿವೃದ್ದಿ, ಉದ್ಯೋಗ, ಮಕ್ಕಳು ಮತ್ತು ಸ್ತ್ರೀ ಶಿಕ್ಷಣ ಹಾಗೂ ಭದ್ರತೆಗಾಗಿ ವಿಶೇಷ ಆದ್ಯತೆ ನೀಡುವ ಜತೆಗೆ 267 ಕೋಟಿ ರೂ.ಗಳನ್ನು ಅಲ್ಪ-ಸಂಖ್ಯಾತರ ಅಭಿವೃದ್ಧಿಗಾಗಿ ನೀಡಿದೆ. 60 ವರ್ಷಗಳ ಕಾಲ ನಮ್ಮನ್ನಾಳಿದ ಸರಕಾರಗಳು ಏನೇನು ಸವಲತ್ತಗಳನ್ನು ನೀಡಿವೆ ಎಂಬುದನ್ನು ಅವಲೋಕಿಸಬೇಕು. ಅಲ್ಪಸಂಖ್ಯಾತರ ಸಮುದಾಯಕ್ಕಾಗಿಯೇ ಮೊರಾರ್ಜಿ ವಸತಿ ಶಾಲೆಯನ್ನು ಆರಂಭಿಸಲಾಗುತ್ತಿದೆ ಎಂದರು.
ಸಂಬಂಧಿತ ಮಾಹಿತಿ ಹುಡುಕಿ