ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಮಾಹಿತಿ ಕೊಡಿ: ಸರಕಾರಕ್ಕೆ ಹೈಕೋರ್ಟ್ ತಾಕೀತು (High court | H1N1 | Bangalore | Karnataka | Yeddyurappa)
Bookmark and Share Feedback Print
 
ರಾಜ್ಯದ ಹಲವೆಡೆ ಡೆಂಗ್ಯು, ಎಚ್1ಎನ್1, ಚಿಕೂನ್ ಗುನ್ಯಾದಂತಹ ಮಾರಕ ರೋಗಗಳು ಜನರನ್ನು ಕಾಡುತ್ತಿದ್ದು, ಈ ಬಗ್ಗೆ ಸರಕಾರ ಕೈಗೊಂಡ ಕ್ರಮಗಳ ಬಗ್ಗೆ ಸಮಗ್ರ ಮಾಹಿತಿ ನೀಡುವಂತೆ ಹೈಕೋರ್ಟ್ ಬುಧವಾರ ಸೂಚನೆ ನೀಡಿದೆ.

ಡೆಂಗ್ಯು ಜ್ವರದಿಂದ ಇತ್ತೀಚೆಗೆ ನಗರದಲ್ಲಿ ಸಾವನ್ನಪ್ಪಿದ ಯಶವಂತ ಕುಮಾರ್ ಎಂಬ ಬಾಲಕನ ತಾಯಿ ಚಂದ್ರಕಲಾ ಮಂಜುನಾಥ್ ಅವರು ಸಲ್ಲಿಸಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಜೆ.ಎಸ್.ಖೇಹರ್ ಅವರ ವಿಭಾಗೀಯ ಪೀಠ, ಈ ಬಗ್ಗೆ ಸರಕಾರ ಕೈಗೊಂಡಿರುವ ಕ್ರಮಗಳ ಬಗ್ಗೆ ವಿವರಣೆ ನೀಡುವಂತೆ ಸೂಚಿಸಿ ವಿಚಾರಣೆಯನ್ನು ಒಂದು ವಾರಗಳ ಕಾಲ ಮುಂದೂಡಿದೆ.

ನಗರದಲ್ಲಿ ಎಚ್1ಎನ್1, ಡೆಂಗ್ಯು ಹಾಗೂ ಚಿಕೂನ್ ಗುನ್ಯಾದಂತಹ ಮಾರಕ ರೋಗಗಳು ಹೆಚ್ಚಿದ್ದು, ಈ ರೋಗಕ್ಕೆ ನನ್ನ ಮಗನೂ ಬಲಿಯಾಗಿದ್ದಾನೆ. ಸೂಕ್ತ ಚಿಕಿತ್ಸೆ ದೊರೆಯದೆ ಆತ ಸಾವನ್ನಪ್ಪಿದ್ದ. ಈ ರೀತಿ ಬೇರೆ ಮಕ್ಕಳು ಸಾಯಬಾರದು ಎಂಬ ನಿಟ್ಟಿನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿರುವುದಾಗಿ ಚಂದ್ರಕಲಾ ಅರ್ಜಿಯಲ್ಲಿ ತಿಳಿಸಿದ್ದರು.

ಈ ಹಿಂದೆ ಅರ್ಜಿಯ ವಿಚಾರಣೆ ನಡೆಸಿದ್ದ ನ್ಯಾಯಾಲಯ ಸರಕಾರಕ್ಕೆ ನೋಟಿಸ್ ಜಾರಿ ಮಾಡಿತ್ತು. ಇಂದು ಮತ್ತೆ ವಿಚಾರಣೆ ನಡೆಸಿದ ವಿಭಾಗೀಯ ಪೀಠ, ಸಮಗ್ರ ಮಾಹಿತಿ ನೀಡುವಂತೆ ಸರಕಾರಕ್ಕೆ ತಾಕೀತು ಮಾಡಿದೆ.
ಸಂಬಂಧಿತ ಮಾಹಿತಿ ಹುಡುಕಿ