ಕಡೂರು ವಿಧಾನಸಭೆ ಕ್ಷೇತ್ರದ ಉಪ ಚುನಾವಣೆಗೆ ನಾಮಪತ್ರ ಸಲ್ಲಿಕೆ ಕಾರ್ಯ ಆ.18ರಿಂದ ಆರಂಭಗೊಳ್ಳಲಿದ್ದು, ಆ.25 ಕೊನೆ ದಿನವಾಗಿರುತ್ತದೆ ಎಂದು ಚುನಾವಣೆ ಆಯೋಗ ತಿಳಿಸಿದೆ.
ಆ.26ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದೆ. ನಾಮಪತ್ರ ಹಿಂಪಡೆಯಲು ಆ.28 ಅಂತಿಮ ದಿನ. ಚುನಾವಣೆ ಸೆ.13ರಂದು ಬೆಳಗ್ಗೆ 7ರಿಂದ ಸಂಜೆ 5ರವರೆಗೆ ನಡೆಯಲಿದೆ. ಸೆ.16ರಂದು ಮತ ಎಣಿಕೆ. ಚುನಾವಣೆಗೆ ಅರ್ಹ ಮತದಾರರ ಪಟ್ಟಿ ತಯಾರಿಸಲಾಗಿದ್ದು, ಆ. 6ರಂದು ಪ್ರಕಟಿಸಿರುವ ಮತದಾರರ ಪಟ್ಟಿಯನ್ನು ಚುನಾವಣೆಯಲ್ಲಿ ಬಳಸಲಾಗುತ್ತದೆ.
ಮತದಾರರ ಗುರುತಿನ ಚೀಟಿ ಚುನಾವಣೆಗೆ ಪ್ರಮುಖ ದಾಖಲೆಯಾಗಿದ್ದು, ಇತರ ನಿಗದಿತ ದಾಖಲೆಗಳನ್ನು ಬಳಸಿ ಮತದಾನಕ್ಕೆ ಅವಕಾಶ ನೀಡಲು ಚುನಾವಣಾ ಆಯೋಗ ನಿರ್ಧರಿಸಿದೆ. ಜಿಲ್ಲೆಯಲ್ಲಿ ಮಾದರಿ ನೀತಿ ಸಂಹಿತೆ ಜಾರಿಯಾಗಲಿದ್ದು, ಎಲ್ಲ ಅಭ್ಯರ್ಥಿಗಳು, ರಾಜಕೀಯ ಪಕ್ಷಗಳು, ರಾಜ್ಯ ಮತ್ತು ಕೇಂದ್ರ ಸರಕಾರಕ್ಕೆ ಅನ್ವಯಿಸಲಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ.