ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಭಿಕ್ಷುಕರ ಕಾಲೋನಿ-ಅನಾರೋಗ್ಯಕ್ಕೆ ಬಲಿಯಾದವರ ಸಂಖ್ಯೆ 18 (Bangalore | Magadi | Social welfare | Health)
Bookmark and Share Feedback Print
 
ನಗರದ ಮಾಗಡಿ ರಸ್ತೆ ಸಮೀಪದ ಕೊಟ್ಟಿಗೆಪಾಳ್ಯದಲ್ಲಿರುವ ನಿರಾಶ್ರಿತರ ಪುನರ್ವಸತಿ ಕೇಂದ್ರದಲ್ಲಿ ಅನಾರೋಗ್ಯ, ನೈರ್ಮಲ್ಯ ಸಮಸ್ಯೆಯಿಂದ ಕಳೆದ ಮೂರು ದಿನಗಳಲ್ಲಿ ಸಾವನ್ನಪ್ಪಿದವರ ಸಂಖ್ಯೆ ಗುರುವಾರ 18ಕ್ಕೆ ಏರಿದೆ.

ಇಲ್ಲಿನ ಬೆಗ್ಗರ್ಸ್ ಕಾಲೋನಿಯಲ್ಲಿ ಮರಣ ಮೃದಂಗ ಬಾರಿಸುವ ಮೂಲಕ ಕಳೆದ ಮೂರು ದಿನಗಳಲ್ಲಿ 18ಮಂದಿ ಬಲಿಯಾಗಿದ್ದಾರೆ. ಸಾವಿಗೆ ಅನಾರೋಗ್ಯವೇ ಕಾರಣ ಎಂದು ಶಂಕಿಸಲಾಗಿದೆ. ಗುರುವಾರ ಕೂಡ ಆರು ಮಂದಿ ಭಿಕ್ಷುಕರು ಸಾವನ್ನಪ್ಪಿದ್ದಾರೆ.

ಸುಮಾರು 25 ಮಂದಿ ಅಸ್ವಸ್ಥ ಭಿಕ್ಷುಕರನ್ನು ಇಂದಿರಾ ನಗರದ ಆಸ್ಪತ್ರೆಗೆ ದಾಖಲಿಸಲಾಗಿದೆ. ಇಲ್ಲಿನ ಪುನರ್ ವಸತಿ ಕೇಂದ್ರದಲ್ಲಿ ಸುಮಾರು 2,500ಮಂದಿ ನಿರಾಶ್ರಿತರಿದ್ದಾರೆ. ಹೆಚ್ಚಿನವರು ಭಿಕ್ಷುಕರಾಗಿದ್ದಾರೆ. ಆದರೆ ಇದರಲ್ಲಿ ಬಂಧು-ಬಳಗ ಇದ್ದವರನ್ನೂ ಕೂಡ ತಂದು ನಿರಾಶ್ರಿತರ ಶಿಬಿರದಲ್ಲಿ ಕೂಡಿಹಾಕಲಾಗಿದೆ ಎಂದು ಇಲ್ಲಿನ ನಿರಾಶ್ರಿತರು ಆರೋಪಿಸಿದ್ದಾರೆ.

ತಾನು ಮಗಳ ಮನೆಗೆ ತೆರಳಲು ಬಸ್ ನಿಲ್ದಾಣದಿಂದ ರೈಲ್ವೆ ನಿಲ್ದಾಣಕ್ಕೆ ಹೋಗುತ್ತಿರುವ ಸಂದರ್ಭದಲ್ಲಿ ತನ್ನನ್ನು ಬಲವಂತವಾಗಿ ನಿರಾಶ್ರಿತರ ಶಿಬಿರಕ್ಕೆ ತರಲಾಗಿದೆ ಎಂದು ಅಜ್ಜಿಯೊಬ್ಬಳು ದೂರಿದ್ದಾಳೆ.
ಸಂಬಂಧಿತ ಮಾಹಿತಿ ಹುಡುಕಿ