ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ವಿವಿಗಳು ಸಮಾಜಮುಖಿ ಚಿಂತನೆ ಬೆಳೆಸಬೇಕು: ಶಿವರಾಜ್ ಪಾಟೀಲ್ (Shivraj patil | Supreme court | Davana gere | Bangalore)
Bookmark and Share Feedback Print
 
ವಿಶ್ವವಿದ್ಯಾಲಯಗಳು ಪದವೀಧರರನ್ನು ಸೃಷ್ಟಿಸುವ ಕಾರ್ಖಾನೆಗಳಾಗದೆ ಮಾನವೀಯ ಮೌಲ್ಯ, ಸಮಾಜಮುಖಿ ಚಿಂತನೆ ಬೆಳೆಸುವ ಕೇಂದ್ರಗಳಾಗಬೇಕು ಎಂದು ಸುಪ್ರೀಂಕೋರ್ಟ್ ನಿವೃತ್ತ ನ್ಯಾಯಮೂರ್ತಿ ಶಿವರಾಜ್ ಪಾಟೀಲ್ ಆಶಯವ್ಯಕ್ತಪಡಿಸಿದರು.

ದಾವಣಗೆರೆ ವಿಶ್ವವಿದ್ಯಾಲಯದ ಪ್ರಥಮ ಸಂಸ್ಥಾಪನಾ ದಿನಾಚರಣೆ ಉದ್ಘಾಟಿಸಿ ಮಾನವ ಅಭಿವೃದ್ದಿ ಕುರಿತು ಉಪನ್ಯಾಸ ನೀಡಿದರು.ವಿದ್ಯಾರ್ಥಿ ಪರೀಕ್ಷೆ ಬರೆದು ಪದವಿ ಗಳಿಸುತ್ತಾನೆ ನಿಜ. ಆದರೆ ಆತ ಮೌಲ್ಯಗಳನ್ನು ಮೈಗೂಡಿಸಿಕೊಳ್ಳದೆ ಹೋದರೆ ವಿವಿಗಳು ಸೋತಂತೆ. ವಿವಿಯಿಂದ ಹೊರಬರುವ ವಿದ್ಯಾರ್ಥಿಗಳು ಸದ್ಗುಣಿಗಳು, ಚಾರಿತ್ರ್ಯವಂತರಾಗುವ ಜತೆಗೆ ಜವಾಬ್ದಾರಿಯುತ ನಾಗರಿಕರಾಗಬೇಕು ಎಂದರು.

ಭಾರತದಲ್ಲಿ ನದಿ, ಅರಣ್ಯ, ಖನಿಜ, ವಿಜ್ಞಾನ, ತಂತ್ರಜ್ಞಾನ, ಬುದ್ದಿಮತ್ತೆ ಎಲ್ಲವೂ ಇದೆ. ಆದರೆ ಇಲ್ಲಿರುವ ಜಾತಿ ವ್ಯವಸ್ಥೆ, ಅಪರಾಧ, ಭ್ರಷ್ಟಾಚಾರಗಳನ್ನು ಅಲ್ಲಗೆಳೆಯಲು ಸಾಧ್ಯವಿಲ್ಲ. ಈ ಅಂಶಗಳನ್ನು ಮೆಟ್ಟಿ ನಿಲ್ಲುವ ಜತೆಗೆ ಅಭಿವೃದ್ಧಿಗೆ ಪೂರಕವಾಗಿ ತೊಡಗಿಸಿಕೊಳ್ಳುವಿಕೆ, ಅಂತಃಕರಣ, ಸನ್ನಡತೆ ರೂಢಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಸಾಮಾಜಿಕ ವ್ಯವಸ್ಥೆಯಲ್ಲಿ ಉತ್ತಮರು ಯಾವುದೇ ಜವಾಬ್ದಾರಿ ಹೊರಲು ಮುಂದೆ ಬರುತ್ತಿಲ್ಲ. ಆದರೆ ಕೆಟ್ಟವರು ಬಂದು ಸ್ಥಾನ ಆಕ್ರಮಿಸಿಕೊಳ್ಳುತ್ತಾರೆ. ಪ್ರಜ್ಞಾವಂತ ಯುವಕರು ಇದರ ಆಗು ಹೋಗುಗಳ ಬಗ್ಗೆ ಆಲೋಚಿಸಬೇಕು. ನಮ್ಮ ಆಲೋಚನಾ ಶಕ್ತಿ, ದೃಷ್ಟಿಕೋನ, ನಿಲುವು ಎಲ್ಲವೂ ಬದಲಾಗಬೇಕು ಎಂದರು.
ಸಂಬಂಧಿತ ಮಾಹಿತಿ ಹುಡುಕಿ