ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಧರ್ಮಸ್ಥಳ- ಜೀಣೋದ್ದಾರಕ್ಕೆ 3 ಕೋಟಿ ರೂ.ಯೋಜನೆ: ಹೆಗ್ಗಡೆ (Dharmasthala | Veerendra Heggade | Manjunath swamy)
Bookmark and Share Feedback Print
 
ಶ್ರೀಕ್ಷೇತ್ರ ಧರ್ಮಸ್ಥಳ ಶ್ರೀ ಮಂಜುನಾಥ ಸ್ವಾಮಿ ದೇವಳದ ಒಳಗಿನ ಸುತ್ತುಪೌಳಿ ಸುಮಾರು ಮೂರು ಕೋಟಿ ರೂ. ವೆಚ್ಚದಲ್ಲಿ ಜೀರ್ಣೋದ್ದಾರಗೊಳ್ಳುತ್ತಿದೆ ಎಂದು ಧರ್ಮಾಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ತಿಳಿಸಿದ್ದಾರೆ.

ಸುದ್ದಿಗಾರರ ಜತೆ ಮಾತನಾಡಿದ ಅವರು, ಸುಮಾರು 400 ವರ್ಷ ಹಿಂದೆ ಮಣ್ಣು ಹಾಗೂ ಕೆಂಪು ಕಲ್ಲು ಬಳಸಿ ಸುಣ್ಣ ಹಾಗೂ ಮುಳಿ ಹುಲ್ಲಿನ ಗಾರೆ ಬಳಸಿ ಕಟ್ಟಲಾಗಿದ್ದ ಸುತ್ತು ಪೌಳಿಯ ಜೀರ್ಣೋದ್ಧಾರ ಕಾರ್ಯ ಪ್ರಗತಿಯಲ್ಲಿದೆ. ಎರಡು ವರ್ಷಗಳಿಂದ ಕಲ್ಲಿನ ಕೆತ್ತನೆ ಕೆಲಸ ಭರದಿಂದ ನಡೆಯುತ್ತಿದ್ದು, ಇದೀಗ ಕಲ್ಲನ್ನು ಜೋಡಿಸುವ ಕೆಲಸ ನಡೆಯುತ್ತಿದೆ ಎಂದರು.

ಪೌಳಿ ನಿರ್ಮಾಣಕ್ಕೆ ಶೇ.40ರಷ್ಟು ಕಲ್ಲನ್ನು ಉಪಯೋಗಿಸಲಾಗಿದ್ದು, ಸುಮಾರು ಒಂದು ಕೋಟಿ ವೆಚ್ಚ ತಗುಲಿದೆ. ಇನ್ನುಳಿದ ಶೇ. 60 ಸಾಗುವಾನಿ ಮರವನ್ನು ಉಪಯೋಗಿಸಿ ಸುತ್ತುಪೌಳಿ ನಿರ್ಮಾಣಗೊಳ್ಳಲಿದೆ. ಮರಕ್ಕೆ ಅಂದಾಜು 2 ಕೋಟಿ ರೂ. ವೆಚ್ಚ ತಗುಲಿದೆ. ಮರದಲ್ಲಿ ನಾನಾ ಕಲಾತ್ಮಕ ವಿನ್ಯಾಸದ ಚಿತ್ರಿಕೆಗಳು ಮೂಡಿಬರಲಿದ್ದು, ಆ.27ರಿಂದ ಮರದ ಜೋಡಣೆ ಕೆಲಸ ನಡೆಯಲಿದೆ. ಮೂರು ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳ್ಳಲಿದೆ. ಕಲ್ಲಿನ ಕೆಲಸವನ್ನು ತಮಿಳುನಾಡಿನ ದಕ್ಷಿಣಾಮೂರ್ತಿ ಎಂಬುವವರು ನಿರ್ವಹಿಸುತ್ತಿದ್ದಾರೆ ಎಂದು ವಿವರಿಸಿದರು.

ಜೀರ್ಣೋದ್ದಾರಗೊಳ್ಳುತ್ತಿರುವ ಸುತ್ತುಪೌಳಿಯಲ್ಲಿ ಶ್ರೀ ಅಣ್ಣಪ್ಪ ಸ್ವಾಮಿ, ಇಷ್ಟ ದೇವತೆ, ಬ್ರಹ್ಮಸ್ಥಾನದ ಗುಡಿಗಳಿದ್ದು, ಜೀರ್ಣೋದ್ದಾರ ಹಿನ್ನೆಲೆಯಲ್ಲಿ ಬಾಲಾಲಯದಲ್ಲಿ ಸ್ಥಾಪಿಸಲಾಗಿದೆ. ಮುಂದಿನ ಜನವರಿಯಲ್ಲಿ ಉತ್ತರಾಯಣ ಕಾಲದಲ್ಲಿ ಪ್ರತಿಷ್ಟೆ ಕಾರ್ಯಗಳು ಜರುಗಲಿದೆ ಎಂದು ಹೇಳಿದರು. ಜೀರ್ಣೋದ್ಧಾರ ಕಾರ್ಯದಲ್ಲಿ ಊರವರು ಕೂಡ ಶ್ರಮದಾನದ ಮೂಲಕ ಪಾಲ್ಗೊಳ್ಳುತ್ತಿದ್ದು ಬೆಳಗ್ಗೆ 9ರಿಂದ ರಾತ್ರಿ 12 ಗಂಟೆ ತನಕ ಕೆಲಸ ನಡೆಯುತ್ತಿದೆ ಎಂದು ಅವರು ತಿಳಿಸಿದರು.
ಸಂಬಂಧಿತ ಮಾಹಿತಿ ಹುಡುಕಿ