ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಬಾಂಬ್ ಬೆದರಿಕೆ ಕರೆ-ಯುವಕ ಪೊಲೀಸ್ ಬಲೆಗೆ (Mangala express | Maharastra | Police | Wasim)
Bookmark and Share Feedback Print
 
ನಿಜಾಮುದ್ದೀನ್-ಎರ್ನಾಕುಲಂ ಮಂಗಳಾ ಎಕ್ಸ್‌ಪ್ರೆಸ್ ರೈಲಿನಲ್ಲಿ ಬಾಂಬ್ ಇಡಲಾಗಿದೆ ಎಂದು ಹುಸಿ ಕರೆ ಮಾಡಿ ಕಳೆದ ಶುಕ್ರವಾರ ಬೆದರಿಕೆಯೊಡ್ಡಿದ ಆರೋಪದನ್ವಯ ಯುವಕನೊಬ್ಬನನ್ನು ಪೊಲೀಸರು ಗುರುವಾರ ವಶಕ್ಕೆ ತೆಗೆದುಕೊಂಡಿದ್ದಾರೆ.

ಮಹಾರಾಷ್ಟ್ರದ ರತ್ನಾಗಿರಿ ಜಿಲ್ಲೆಯ ವಾಸಿಂ ಅಜೀಜ್ ಖಾಜಿ (25) ಪೊಲೀಸರ ವಶದಲ್ಲಿರುವ ವ್ಯಕ್ತಿಯಾಗಿದ್ದಾನೆ. ಈತನನ್ನು ಕಾರವಾರ ಪೊಲೀಸರ ತಂಡ ಹುಬ್ಬಳ್ಳಿಯಲ್ಲಿ ವಶಕ್ಕೆ ತೆಗೆದುಕೊಂಡಿದೆ. ಬಲ್ಲ ಮೂಲಗಳ ಪ್ರಕಾರ ಈತ ಖಾಸಗಿ ಕಂಪನಿಯೊಂದರಲ್ಲಿ ಮಾರಾಟ ಪ್ರತಿನಿಧಿಯಾಗಿ ಆಗಿ ಕೆಲಸ ಮಾಡುತ್ತಿದ್ದು ಉತ್ತರ ಕನ್ನಡ ಜಿಲ್ಲೆಯೊಂದಿಗೆ ನಿಕಟ ಸಂಪರ್ಕ ಹೊಂದಿದವ ನೆಂದು ಹೇಳಲಾಗಿದೆ.

ಕಳೆದ ಶುಕ್ರವಾರ ಈತ ಇಲ್ಲಿನ ಪೊಲೀಸ್ ಕಂಟ್ರೊಲ್ ರೂ.ಗೆ ರಾತ್ರಿ ಕರೆ ಮಾಡಿ ರೈಲಿನಲ್ಲಿ ಬಾಂಬ್ ಇಡಲಾಗಿದೆ ಎಂದು ಬೆದರಿಸಿದ್ದ. ಈ ಹಿನ್ನೆಲೆಯಲ್ಲಿ ಮಂಗಳಾ ಎಕ್ಸ್‌ಪ್ರೆಸ್ ರೈಲನ್ನು ಸಮೀಪದ ಅಸ್ನೋಟಿ ನಿಲ್ದಾಣದಲ್ಲಿ ರಾತ್ರಿ 10.30ರಿಂದ ಬೆಳಗಿನ ಜಾವ 2.30ರವರೆಗೆ ತಡೆ ಹಿಡಿದು ತಪಾಸಣೆ ನಡೆಸಲಾಗಿತ್ತು. ನಂತರ ಯಾವುದೇ ಬಾಂಬ್ ದೊರೆಯದ್ದರಿಂದ ಸಂಚಾರ ಮುಂದುವರಿಸಲು ಅನುಮತಿ ನೀಡಲಾಗಿತ್ತು. ಕರೆ ಮಾಡಿದ ಮೊಬೈಲ್ ಸಂಖ್ಯೆಯನ್ನಾಧರಿಸಿ ಶಹರ ಠಾಣೆ ಪೊಲೀಸರು ತನಿಖೆ ಕೈಗೊಂಡಾಗ ಖಾಜಿ ಸಿಕ್ಕಿಬಿದ್ದಿದ್ದಾನೆ.

ವಾಸಿಂ ಯಾವುದೇ ಭಯೋತ್ಪಾದಕ ಸಂಘಟನೆಗಳ ಜತೆ ಸಂಬಂಧ ಹೊಂದಿಲ್ಲ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಖಾಜಿ ಒತ್ತಡದಲ್ಲಿ ಸಾರಾಯಿ ಕುಡಿದು ಪೊಲೀಸ್ ಕಂಟ್ರೊಲ್ ರೂಂಗೆ ದೂರವಾಣಿ ಕರೆ ಮಾಡಿರುವುದಾಗಿ ತಿಳಿಸಿದ್ದಾನೆ. ಭಟ್ಕಳ, ಕಾರವಾರ, ಅಂಕೋಲಾ, ಯಲ್ಲಾಪುರ, ಗೋವಾ, ಬೆಳಗಾವಿ ಎಲ್ಲ ಕಡೆ ತಾನು ತಿರುಗಾಡಿದ್ದು, ಈ ಭೇಟಿ ಉದ್ಯೋಗದ ಸಂಬಂಧವಾಗಿತ್ತೇ ಹೊರತು ಯಾವುದೇ ವಿಚ್ಛಿದ್ರಕಾರಿ ದಾಳಿ ನಡೆಸಲು ಅಲ್ಲ ಎಂದು ಪೊಲೀಸ್ ತನಿಖೆ ವೇಳೆ ತಿಳಿಸಿದ್ದಾನೆ. ಕಾರವಾರ ಶಹರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ