ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಸಂಸತ್ ಗಣಿ ಚರ್ಚೆಯಲ್ಲಿ ಕಾಂಗ್ರೆಸ್ ಗೈರು ಯಾಕೆ?: ರೇವಣ್ಣ (Revanna | JDS | Congress | Parliment | Yeddyurappa | BJP)
Bookmark and Share Feedback Print
 
ಸಂಸತ್‌ನಲ್ಲಿ ಗಣಿಗಾರಿಕೆ ಬಗ್ಗೆ ಚರ್ಚೆ ನಡೆಯುವಾಗ ರಾಜ್ಯದ ಕಾಂಗ್ರೆಸ್ ಸಂಸದರು ಗೈರುಹಾಜರಾಗಿದ್ದೇಕೆ ಎಂಬುದನ್ನು ಜನರಿಗೆ ತಿಳಿಸಲಿ ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ರೇವಣ್ಣ ಆಗ್ರಹಿಸಿದ್ದಾರೆ.

ಸುದ್ದಿಗಾರರ ಜತೆ ಮಾತನಾಡಿದ ಅವರು, ಗಣಿಗಾರಿಕೆ ಬಗ್ಗೆ ಚರ್ಚೆ ನಡೆಯುವಾಗ ಬಿಎಸ್ಪಿ, ಸಿಪಿಐ, ಸಿಪಿಎಂ ಸೇರಿದಂತೆ ನಾನಾ ಪಕ್ಷಗಳು ದನಿಗೂಡಿಸಿವೆ. ಕೆಲ ರಾಜ್ಯದ ಕಾಂಗ್ರೆಸ್ ಸಂಸದರೂ ಅಕ್ರಮ ಗಣಿಗಾರಿಕೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆದರೆ ಪಾದಯಾತ್ರೆ ಮಾಡಿದ್ದ ರಾಜ್ಯದ ಕಾಂಗ್ರೆಸಿಗರು ಮಾತ್ರ ಅಲ್ಲಿ ನಾಪತ್ತೆಯಾಗಿದ್ದರು ಎಂದು ಆರೋಪಿಸಿದರು.

ಅಕ್ರಮ ಗಣಿಗಾರಿಕೆ ವಿರೋಧಿಸಿ, ಪಾದಯಾತ್ರೆ ಮಾಡಿದ್ದ ಕಾಂಗ್ರೆಸ್ ಮುಖಂಡರು, ಈಗ ದೆಹಲಿಯಲ್ಲಿ ಬೀಡು ಬಿಟ್ಟು, ಪಕ್ಷದ ಅಧ್ಯಕ್ಷಗಾದಿಗೆ ಹೋರಾಡುತ್ತಿದ್ದಾರೆ. ಮಾತೆತ್ತಿದರೆ ಗಣಿಗಾರಿಕೆ ಎನ್ನುತ್ತಿದ್ದವರಿಗೆ ಇತ್ತೀಚೆಗೆ ಉಸಿರೇ ನಿಂತು ಹೋಗಿರುವುದು ಅಚ್ಚರಿ ತಂದಿದೆ ಎಂದು ಟೀಕಿಸಿದರು.

ನೀವು ಪಾದಯಾತ್ರೆ ಮಾಡಿ, ನಾವು ಸಮಾವೇಶ ಮಾಡುತ್ತೇವೆ ಎಂದು ಕಾಂಗ್ರೆಸ್ ಮತ್ತು ಬಿಜೆಪಿ ಅನುಕೂಲಸಿಂಧು ರಾಜಕಾರಣ ಮಾಡುತ್ತಿರುವುದು ಜನರಿಗೆ ಗೊತ್ತಾಗಿದೆ. ಅಕ್ರಮ ಗಣಿಗಾರಿಕೆ ಕುರಿತಂತೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂಬುದು ಈ ಎರಡೂ ಪಕ್ಷಗಳ ಉದ್ದೇಶವಲ್ಲ ಎಂದರು.

ಅಕ್ರಮ ತಡೆಯಲು ಕೇಂದ್ರ ಸರಕಾರ ಗಣಿ ಪ್ರಾಧಿಕಾರ ರಚಿಸುವುದರಿಂದ ಸಮಸ್ಯೆ ಬಗೆಹರಿಯದು. ಅಕ್ರಮ ತಡೆಗೆ ರಾಜ್ಯದಲ್ಲಿ ತಂಡ ರಚಿಸುವುದಾಗಿ ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿರುವುದು ವಸೂಲಿಗಾರರಿಗೆ ಅನುಕೂಲವಾಗುತ್ತದೆ ಎಂದು ವ್ಯಂಗ್ಯವಾಡಿದರು. ಲೋಕಾಯುಕ್ತ ತನಿಖೆಯಿಂದ ಯಾವ ಪ್ರಯೋಜನವೂ ಆಗುವುದಿಲ್ಲ. ಸಿಬಿಐ ತನಿಖೆಗೆ ವಹಿಸಲು ಕೇಂದ್ರ ಸರಕಾರವೇ ಮುಂದಾಗಬೇಕು. ತನಗಿರುವ ಅಧಿಕಾರ ಬಳಸಿ, ರಾಜ್ಯದ ಸಂಪತ್ತನ್ನು ರಕ್ಷಿಸಬೇಕು ಎಂದರು.
ಸಂಬಂಧಿತ ಮಾಹಿತಿ ಹುಡುಕಿ