ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಶಾಸಕ ನರಸಿಂಹ ಸ್ವಾಮಿ ಯು-ಟರ್ನ್; ರಾಜೀನಾಮೆಯಿಲ್ಲ (J Narasimhaswamy | RL Jalappa | BJP | Doddaballapura)
Bookmark and Share Feedback Print
 
ವೈಯಕ್ತಿಕ ಕಾರಣಗಳಿಂದಾಗಿ ರಾಜೀನಾಮೆ ನೀಡುವುದಾಗಿ ಹೇಳಿದ್ದ ಬಿಜೆಪಿ ಶಾಸಕ ಹಾಗೂ ರಾಜ್ಯ ಕೊಳಚೆ ನಿರ್ಮೂಲನಾ ಮಂಡಳಿ ಅಧ್ಯಕ್ಷ ಜೆ. ನರಸಿಂಹಸ್ವಾಮಿ ವರಸೆ ಬದಲಾಯಿಸಿದ್ದಾರೆ. ಮುಖ್ಯಮಂತ್ರಿಯವರನ್ನು ಭೇಟಿ ಮಾಡಿದ ನಂತರ ಪ್ರತಿಕ್ರಿಯೆ ನೀಡಿರುವ ಅವರು, ರಾಜೀನಾಮೆ ನೀಡುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಕಾಂಗ್ರೆಸ್ ಹಿರಿಯ ನಾಯಕ ಆರ್.ಎಲ್. ಜಾಲಪ್ಪ ಅವರ ಪುತ್ರರಾಗಿರುವ ನರಸಿಂಹ ಸ್ವಾಮಿ ಎರಡು ವರ್ಷಗಳ ಹಿಂದಷ್ಟೇ ಕಾಂಗ್ರೆಸ್‌ನಿಂದ ಬಿಜೆಪಿಗೆ ವಲಸೆ ಬಂದಿದ್ದರು. ಯಾವುದೇ ಕಾರಣ ನೀಡದೆ ತಾನು ರಾಜೀನಾಮೆಗೆ ಮುಂದಾಗುತ್ತಿರುವುದಾಗಿ ನಿನ್ನೆಯಷ್ಟೇ ಹೇಳಿದ್ದರು.

ಆದರೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರನ್ನು ಭೇಟಿ ಮಾಡಿದ ನಂತರ ಶಾಸಕ ತನ್ನ ನಿಲುವು ಬದಲಾಯಿಸಿದ್ದಾರೆ. ಮುಖ್ಯಮಂತ್ರಿಯವರು ಸಾಕಷ್ಟು ಭರವಸೆಗಳನ್ನು ನೀಡಿರುವುದರಿಂದ ನಿರ್ಧಾರ ಬದಲಾಯಿಸಿದ್ದೇನೆ ಎಂದು ನರಸಿಂಹಸ್ವಾಮಿ ತಿಳಿಸಿದ್ದಾರೆ.

ಈ ಕುರಿತು ಪ್ರತಿಕ್ರಿಯೆ ನೀಡಿರುವ ಯಡಿಯೂರಪ್ಪ, ಶಾಸಕರು ರಾಜೀನಾಮೆ ನೀಡುತ್ತಿಲ್ಲ; ಅವರಲ್ಲಿ ಕೆಲವು ಅಸಮಾಧಾನಗಳಿದ್ದವು. ಅವುಗಳನ್ನು ಪರಿಹರಿಸುವ ಭರವಸೆ ನೀಡಲಾಗಿದೆ. ಅವರ ದೊಡ್ಡಬಳ್ಳಾಪುರ ಕ್ಷೇತ್ರದ ಸಮಸ್ಯೆಗಳಿಗೆ ಗಮನ ಹರಿಸಲಾಗುತ್ತದೆ ಎಂದಿದ್ದಾರೆ.

ಶಾಸಕ ನರಸಿಂಹಸ್ವಾಮಿಯವರು ಮರಳಿ ಮಾತೃಪಕ್ಷಕ್ಕೆ ಮರಳಲಿದ್ದಾರೆ ಎಂದು ಗುಳ್ಳೆದ್ದಿತ್ತು. ಇದಕ್ಕೆ ಮತ್ತಷ್ಟು ಪುಷ್ಠಿ ದೊರಕಿದ್ದು ಅವರ ತಂದೆ ಜಾಲಪ್ಪ ಮತ್ತು ಸಿದ್ದರಾಮಯ್ಯ ಅವರ ಭೇಟಿ. ಇಷ್ಟಾದರೂ ಕಾಂಗ್ರೆಸ್ ಸೇರ್ಪಡೆ ಸಾಧ್ಯತೆಯನ್ನು ಸ್ವತಃ ಶಾಸಕರೇ ತಳ್ಳಿ ಹಾಕಿದ್ದರು.

ಈ ಸಂಬಂಧ ಪ್ರತಿಕ್ರಿಯಿಸಿದ್ದ ಜಾಲಪ್ಪ, ಮಗನ ಯಾವುದೇ ವಿಚಾರಗಳಲ್ಲೂ ನಾನಿಲ್ಲ. ಆತ ಸ್ವತಂತ್ರ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದ್ದಾನೆ. ಆತ ನನ್ನ ಜತೆಗಿಲ್ಲ ಎಂದಿದ್ದರು. ಅಲ್ಲದೆ ಅಕ್ರಮ ಗಣಿಗಾರಿಕೆಯಲ್ಲಿ ತನ್ನ ಹೆಸರು ಪ್ರಸ್ತಾಪವಾಗಿರುವುದಕ್ಕೆ ಮಗ ರಾಜೀನಾಮೆಗೆ ಮುಂದಾಗಿದ್ದಾನೆ ಎಂಬ ವರದಿಗಳನ್ನೂ ತಳ್ಳಿ ಹಾಕಿದ್ದರು.
ಸಂಬಂಧಿತ ಮಾಹಿತಿ ಹುಡುಕಿ