ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಬೆಳಗಾವಿ ಗಡಿ: ಪ್ರಧಾನಿ ಮಧ್ಯಪ್ರವೇಶಕ್ಕೆ ಗಡ್ಕರಿ ಒತ್ತಾಯ (Belagavi border Row | Nitin Gadkari | BJP | Karnataka | Maharashtra)
Bookmark and Share Feedback Print
 
PTI
ಕರ್ನಾಟಕ-ಮಹಾರಾಷ್ಟ್ರ ಗಡಿ ವಿವಾದ ಬಗೆಹರಿಸಲು ಪ್ರಧಾನಿ ಮನಮೋಹನ್ ಸಿಂಗ್ ಅವರೇ ಮಧ್ಯಪ್ರವೇಶ ಮಾಡಬೇಕು ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ಗಡ್ಕರಿ ಹೇಳಿದ್ದಾರೆ.

ಖಾಸಗಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಬೆಳಗಾವಿಗೆ ಆಗಮಿಸಿದ್ದ ವೇಳೆ ತಮ್ಮನ್ನು ಭೇಟಿಯಾದ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕರ್ನಾಟಕ-ಮಹಾರಾಷ್ಟ್ರ ಗಡಿ ವಿವಾದ ನ್ಯಾಯಸಮ್ಮತವಾಗಿ ಬಗೆಹರಿಯಬೇಕು ಎಂದು ಆಶಿಸಿದರು.

ವಿವಾದ ಸುಪ್ರೀಂ ಕೋರ್ಟಿನಲ್ಲಿ ಇರುವುದರಿಂದ ಹೆಚ್ಚಿಗೆ ಮಾತನಾಡಲಾಗದು. ಪ್ರಧಾನಿಯವರೇ ಮಧ್ಯಪ್ರವೇಶಿಸಿ ನ್ಯಾಯಸಮ್ಮತ ಪರಿಹಾರ ಕಂಡು ಹಿಡಿಯಬೇಕು. ಇದು ತೀರಾ ಅಗತ್ಯವಾಗಿದ್ದು, ಕನ್ನಡ-ಮರಾಠಿ ಭಾಷಿಕರ ನಡುವೆ ಉತ್ತಮ ಬಾಂಧವ್ಯ ಬೆಳೆಯಲು ನೆರವಾಗುತ್ತದೆ ಎಂದರು.

ಕೇಂದ್ರ ಸರಕಾರಕ್ಕೆ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ಇಚ್ಛೆ ಇದ್ದರೆ ಕೂಡಲೇ ಕಾರ್ಯ ಪ್ರವೃತ್ತವಾಗಬೇಕು. ಪ್ರಧಾನಿ ಮಧ್ಯಸ್ಥಿಕೆ ವಹಿಸಿ ಎರಡೂ ರಾಜ್ಯಗಳ ಮುಖ್ಯಮಂತ್ರಿಗಳ ಸಭೆ ಕರೆದು ಪರಿಹಾರ ಕಂಡು ಹಿಡಿಯಬೇಕು ಎಂದು ಸಲಹೆ ನೀಡಿದರು.

ಗಡಿ ವಿಷಯವಾಗಿ ಬಿಜೆಪಿಯಲ್ಲಿ ದ್ವಂದ್ವ ನಿಲುವು ಇಲ್ಲ. ಈ ಹಿಂದೆ ಕರ್ನಾಟಕ ಮತ್ತು ಮಹಾರಾಷ್ಟ್ರದಲ್ಲಿ ಕಾಂಗ್ರೆಸ್ ಸರಕಾರಗಳು ಇದ್ದಾಗ ಶಾಸಕರು ಮತ್ತು ಸಂಸದರು ತಮ್ಮ ತಮ್ಮ ರಾಜ್ಯಗಳ ಹಿತಾಸಕ್ತಿ ಪರವಾಗಿ ವಾದಿಸಿದ್ದಾರೆ. ಬಿಜೆಪಿ ಶಾಸಕರೂ ಇದಕ್ಕೆ ಹೊರತಾಗಿಲ್ಲ. ಕರ್ನಾಟಕ ಮತ್ತು ಮಹಾರಾಷ್ಟ್ರ ಬಿಜೆಪಿ ಶಾಸಕರು ತಾವು ಪ್ರತಿನಿಸುವ ರಾಜ್ಯಗಳ ಪರ ನಿಲುವು ತಾಳಿದ್ದಾರೆ. ಆಯಾ ಸರಕಾರಗಳನ್ನು ಬೆಂಬಲಿಸಿದ್ದಾರೆ. ಇದು ಸ್ವಾಭಾವಿಕ ಎಂದು ತಿಳಿಸಿದರು.

ಗಣಿ ವಿವಾದ ವಿಷಯದಲ್ಲಿ ಲೋಕಾಯುಕ್ತ ನ್ಯಾ.ಸಂತೋಷ ಹೆಗ್ಡೆಯವರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಅವರು, ಹೆಗ್ಡೆಯವರ ನೇತೃತ್ವದಲ್ಲಿ ರಚನೆಯಾಗಿರುವ ಸಮಿತಿಯು ತನಿಖೆ ನಡೆಸಿ ವರದಿ ನೀಡಿದ ನಂತರವಷ್ಟೇ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ ಎಂದರು.
ಸಂಬಂಧಿತ ಮಾಹಿತಿ ಹುಡುಕಿ