ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಬೆಂಗಳೂರು ಸ್ಫೋಟ ಆರೋಪಿ ಮದನಿ ಮಡಿಕೇರಿಗೆ (Abdul Nasser Madani | Lashkar-e-Toiba | Peoples Democratic Party | Bangalore blast)
Bookmark and Share Feedback Print
 
ಲಷ್ಕರ್ ಇ ತೋಯ್ಬಾ ಭಯೋತ್ಪಾದಕ ಸಂಘಟನೆಯೊಂದಿಗೆ ಸಂಬಂಧ ಹೊಂದಿದ್ದಾನೆ ಎಂದು ಶಂಕಿಸಲಾಗಿರುವ ಪಿಡಿಪಿ ನಾಯಕ ಅಬ್ದುಲ್ ನಾಸಿರ್ ಮದನಿಯನ್ನು ಬೆಂಗಳೂರು ಪೊಲೀಸರು ಬಿಗಿ ಭದ್ರತೆಯೊಂದಿಗೆ ಮಡಿಕೇರಿಗೆ ಕರೆದುಕೊಂಡು ಹೋಗಿದ್ದಾರೆ.

2008ರ ಬೆಂಗಳೂರು ಸ್ಫೋಟದ ಪ್ರಮುಖ ಟಿ. ನಜೀರ್ ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಹೊಸತೋಟ ಎಂಬಲ್ಲಿ ತಂಗಿದ್ದಾಗ, ಅಲ್ಲಿಗೆ ಹೋಗಿ ಆತನನ್ನು ಮದನಿ ಭೇಟಿಯಾಗಿದ್ದಾನೆ ಎಂಬ ಶಂಕೆಗಳ ಹಿನ್ನೆಲೆಯಲ್ಲಿ ಆರೋಪಿಯನ್ನು ಮಡಿಕೇರಿಗೆ ಕರೆದೊಯ್ಯಲಾಗಿದೆ.

ಇದನ್ನೂ ಓದಿ: ಈ 'ಸೆಕ್ಯುಲರ್' ಅಬ್ದುಲ್ ನಾಸಿರ್ ಮದನಿ ಯಾರು ಗೊತ್ತಾ?

ನಜೀರ್ ಕೃಷಿ ಚಟುವಟಿಕೆ ನೆಪದಲ್ಲಿ ಕೇರಳದ ಹಲವು ಯುವಕರನ್ನು ಜತೆಗಿಟ್ಟುಕೊಂಡು ಹೊಸತೋಟ ಎಂಬಲ್ಲಿನ ಮಾದಪುರದಲ್ಲಿ ಬಾಂಬ್ ತಯಾರಿಸುತ್ತಿದ್ದ ಎಂಬುದು ಪೊಲೀಸರ ವಾದ. ಈ ಹೊತ್ತಿಗೆ ಮದನಿ ಕೂಡ ಅಲ್ಲಿಗೆ ಭೇಟಿ ನೀಡಿ, ನಜೀರ್ ಜತೆ ಚರ್ಚೆ ನಡೆಸಿದ್ದ ಎಂಬ ವರದಿಗಳ ಹಿನ್ನೆಲೆಯಲ್ಲಿ ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.

ಬೆಂಗಳೂರು ಸ್ಫೋಟದ ನಕಾಶೆ ರೂಪಿಸಿದ್ದೇ ನಜೀರ್. ಈತ ಮಾದಪುರ ಎಂಬಲ್ಲಿ ತೋಟದ ಮನೆಯೊಂದರಲ್ಲಿ ಹಲವು ಸಮಯ ತಂಗಿದ್ದ. ಈ ಸಂಬಂಧ ಆತನ 13 ಮಂದಿ ಸಹಚರರ ವಿರುದ್ಧ ಶುಂಠಿಕೊಪ್ಪ ಪೊಲೀಸ್ ಠಾಣೆಯಲ್ಲಿ ದೂರು ಕೂಡ ದಾಖಲಾಗಿದೆ. ಮೇ ತಿಂಗಳ 15ರಂದು ಇವರ ವಿರುದ್ಧ ಪ್ರಕರಣ ದಾಖಲಾಗಿತ್ತು.

ಶುಂಠಿ ಕೃಷಿ ನೆಪದಲ್ಲಿ ಸ್ವಲ್ಪ ಜಾಗವನ್ನು ಗುತ್ತಿಗೆಗೆ ಪಡೆದುಕೊಂಡಿದ್ದ ನಜೀರ್, ಹಲವು ಮುಸ್ಲಿಂ ನಾಯಕರೊಂದಿಗೆ ಇಲ್ಲಿ ಸಭೆ ನಡೆಸಿದ್ದ. ಸ್ಫೋಟ ನಡೆಯುವ ಕೆಲ ದಿನಗಳ ಹಿಂದಷ್ಟೇ ಇಲ್ಲಿಗೆ ಮದನಿ ಕೂಡ ಭೇಟಿ ನೀಡಿದ್ದಾನೆ. ಈ ಕುರಿತು ಖಚಿತ ಮಾಹಿತಿ ನೀಡುವ ಆತನ ಸರಕಾರಿ ಅಂಗರಕ್ಷಕನ ಕೈಯಲ್ಲಿರುವ ಹಾಜರಿ ಪುಸ್ತಕವನ್ನು ಪರಿಶೀಲಿಸುವ ಆದೇಶವನ್ನು ನೀಡಬೇಕು ಎಂದು ಪೊಲೀಸರು ನ್ಯಾಯಾಲಯವನ್ನು ಕೇಳಿಕೊಳ್ಳಲಿದ್ದಾರೆ. ಈ ಲಾಗ್ ಪುಸ್ತಕದಲ್ಲಿ ಮದನಿಯ ಸಂಪೂರ್ಣ ದಿನಚರಿಯನ್ನು ಬರೆದಿಡಲಾಗುತ್ತದೆ ಎಂದು ಮೂಲಗಳು ಹೇಳಿವೆ.

ಕರ್ನಾಟಕ ಹೈಕೋರ್ಟ್ ನಿರೀಕ್ಷಣಾ ಜಾಮೀನು ನಿರಾಕರಿಸಿದ ನಂತರ ಕರ್ನಾಟಕ ಪೊಲೀಸರು ಹರಸಾಹಸ ನಡೆಸಿ ಮದನಿಯನ್ನು ಆಗಸ್ಟ್ 17ರಂದು ಬಂಧಿಸಿದ್ದರು. ನಂತರ ಆತನನ್ನು ಮಡಿವಾಳ ಠಾಣೆ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ