ಭಿಕ್ಷುಕರ ಸರಣಿ ಸಾವಿನ ಹಿನ್ನೆಲೆಯಲ್ಲಿ ತಾನು ನೀಡಿರುವ ಸೂಚನೆಗಳ ಬಗ್ಗೆ ಸಚಿವ ಡಿ.ಸುಧಾಕರ್ ಸರಿಯಾಗಿ ಗಮನ ನೀಡದ ಹಿನ್ನೆಲೆಯಲ್ಲಿ ಅವರ ಖಾತೆ ಬದಲಾಯಿಸಿದ್ದೇನೆ. ಈ ಬಗ್ಗೆ ಸಚಿವರು ಬೇಸರಗೊಂಡಿಲ್ಲ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸ್ಪಷ್ಟಪಡಿಸಿದ್ದಾರೆ.
ಈ ಕುರಿತು ಕೆಲವರು ಅನಗತ್ಯ ಗೊಂದಲ ಸೃಷ್ಟಿಸಲು ಯತ್ನಿಸಿದರು. ಇದಕ್ಕ ಅವಕಾಶ ನೀಡುವುದು ಬೇಡ ಎಂಬ ಕಾರಣಕ್ಕೆ ಖಾತೆ ಬದಲಿಸುವ ತೀರ್ಮಾನ ಕೈಗೊಂಡಿದ್ದೇನೆ ಎಂದು ಉತ್ತರಿಸಿದರು.
ಇದೇ ರೀತಿ ಕೆಲಸ ಮಾಡದ ಸಚಿವರ ವಿರುದ್ಧ ಕ್ರಮ ಕೈಗೊಳ್ಳುತ್ತೀರಾ? ಡೆಂಗ್ಯು ಜ್ವರದಿಂದ ಜನರು ಸಾಯುತ್ತಿದ್ದಾರಲ್ಲಾ, ಇದರ ವಿರುದ್ಧ ಯಾವ ಕ್ರಮ ಕೈಗೊಳ್ಳುತ್ತೀರಿ ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದರ ಅರು, ಎಲ್ಲ ಸಚಿವರೂ ಉತ್ತಮವಾಗಿಯೇ ಕೆಲಸ ಮಾಡುತ್ತಿದ್ದಾರೆ ಎಂದರು.