ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ದೇವೇಗೌಡರಿಗೆ ಈಶ್ವರಪ್ಪ ಲೆಕ್ಕಕ್ಕೆ ಇಲ್ಲ: ಕುಮಾರಸ್ವಾಮಿ (Deve gowda | Ishwarappa | BJP | Congress | JDS,)
Bookmark and Share Feedback Print
 
ರಾಜ್ಯರಾಜಕಾರಣದಲ್ಲಿ ಆಡಳಿತ ಮತ್ತು ಪ್ರತಿಪಕ್ಷಗಳ ಮುಖಂಡರ ನಡುವಿನ ವಾಗ್ದಾಳಿ ಮುಂದುವರಿದಿದ್ದು, ಬಿಜೆಪಿ ರಾಜ್ಯಾಧ್ಯಕ್ಷ ಕೆ.ಎಸ್.ಈಶ್ವರಪ್ಪ ಮಾಜಿ ಪ್ರಧಾನಿ ದೇವೇಗೌಡರ ಉಗುರಿಗೂ ಸಮವಲ್ಲ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತಿರುಗೇಟು ನೀಡಿದ್ದಾರೆ.

ಈಶ್ವರಪ್ಪ ಕೂಡ ಹಿರಿಯರು, ಅನುಭವಿಗಳು ಆದರೆ ಅವರು ಪ್ರತಿಯೊಂದಕ್ಕೂ ತಾಳ್ಮೆ ಕಳೆದುಕೊಂಡು ಮಾತನಾಡುತ್ತಾರೆ. ಇವರೇನು ಕೊಮೇನಿ ಆಡಳಿತ ನಡೆಸುತ್ತಿದ್ದಾರೆಯೇ? ಇವರ ಬೂಟಾಟಿಕೆಯ ಬೆದರಿಕೆಗಳಿಗೆಲ್ಲ ಬೆದರುವ ಪ್ರಶ್ನೆಯೇ ಇಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಹರಪನಹಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗೋ ಹತ್ಯೆ ನಿಷೇಧ ಕಾಯ್ದೆ ಜಾರಿಗೆ ವಿರೋಧ ವ್ಯಕ್ತಪಡಿಸಿರುವ ದೇವೇಗೌಡರನ್ನೇ ಮುದಿ ಎತ್ತು ಎಂದು ಈಶ್ವರಪ್ಪ ಟೀಕಿಸಿದ್ದಾರೆ. ಆದರೆ ಈಶ್ವರಪ್ಪ ಅವರಿಗಿಂತ ಹತ್ತು ಪಟ್ಟು ಶಕ್ತಿ ದೇವೇಗೌಡರಿಗಿದೆ ಎಂಬುದನ್ನು ಮೊದಲು ತಿಳಿದುಕೊಳ್ಳಲಿ ಎಂದು ತಿರುಗೇಟು ನೀಡಿದರು.

ದೇವೇಗೌಡರು ನೈತಿಕತೆ ಇಟ್ಟುಕೊಂಡು ಹೋರಾಟ ನಡೆಸುತ್ತಾರೆ. ಆದರೆ ಇವರು ಕೈಕತ್ತರಿಸಿ, ನಾಲಿಗೆ ಸೀಳಿ ಎಂಬಂತಹ ಉದ್ರೇಕಕಾರಿ ಹೇಳಿಕೆಯನ್ನು ಬಹಿರಂಗವಾಗಿ ನೀಡುತ್ತಾರೆ. ಆ ನಿಟ್ಟಿನಲ್ಲಿ ಮುಖ್ಯಮಂತ್ರಿಗಳು ಈಶ್ವರಪ್ಪನನ್ನು ಕೂಡಲೇ ಜೈಲಿಗೆ ಹಾಕಬೇಕಿತ್ತು ಎಂದರು.

ಹಾಲು ಕೊಡುವ ಹಸುಗಳನ್ನು ಕಡಿಯಿರಿ ಅಂತ ದೇವೇಗೌಡರು ಹೇಳಿಲ್ಲ, ಮುದಿ ದನಗಳನ್ನು ಕೇಶವಕೃಪಾ ಮತ್ತು ಮುಖ್ಯಮಂತ್ರಿಗಳ ಮನೆ ಎದುರು ತಂದು ಬಿಡುವುದಾಗಿ ಹೇಳಿದ್ದರು. ಅದರಲ್ಲಿ ತಪ್ಪೇನು? ಮುದಿ ದನಗಳನ್ನು ಏನು ಮಾಡಬೇಕೆಂದು ಸರಕಾರ ಮೊದಲು ಪರಿಹಾರ ಸೂಚಿಸಲಿ ಎಂದರು.
ಸಂಬಂಧಿತ ಮಾಹಿತಿ ಹುಡುಕಿ