ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ತಪ್ಪು ಮಾಡಿದ ಎಲ್ಲ ಸಚಿವರ ವಿರುದ್ಧ ಕ್ರಮ ಕೈಗೊಳ್ಳಿ: ಹೊರಟ್ಟಿ (Horatty | JDS | Yeddyurappa | Sudhakar | Havery | Congress)
Bookmark and Share Feedback Print
 
ಕರ್ತವ್ಯ ನಿರ್ವಹಿಸಲು ವಿಫಲರಾದ ಸಚಿವ ಡಿ. ಸುಧಾಕರ್ ಅವರ ಖಾತೆ ಬದಲಿಸಿದಂತೆ, ಇದೇ ರೀತಿಯ ತಪ್ಪು ಮಾಡಿದ ಉಳಿದ ಸಚಿವರ ವಿರುದ್ಧ ಇಂತಹ ಕ್ರಮ ಏಕೆ ಕೈಗೊಳ್ಳುತ್ತಿಲ್ಲ? ಈ ಕುರಿತು ಮುಖ್ಯಮಂತ್ರಿ ವಾಸ್ತವಾಂಶವನ್ನು ಜನರಿಗೆ ತಿಳಿಸಬೇಕು ಎಂದು ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ಒತ್ತಾಯಿಸಿದರು.

ನಗರದಲ್ಲಿ ಆಯೋಜಿಸಿದ್ದ ಜಿಲ್ಲಾ ಜೆಡಿಎಸ್ ಕಾರ್ಯಕರ್ತರ ಸಮಾವೇಶದಲ್ಲಿ ಪಾಲ್ಗೊಳ್ಳಲು ಆಗಮಿಸಿದ್ದ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಭಿಕ್ಷುಕರ ಸರಣಿ ಸಾವಿನ ಘಟನೆಯ ನೈತಿಕ ಹೊಣೆಯನ್ನು ಸಮಾಜ ಕಲ್ಯಾಣ ಇಲಾಖೆ ಸಚಿವರಾಗಿದ್ದ ಸುಧಾಕರ ಹೊತ್ತುಕೊಳ್ಳಬೇಕು. ತಮ್ಮ ಖಾತೆ ವಿಷಯದಲ್ಲಿ ಕೆಲ ಲೋಪಗಳಾದಾಗ ಈ ರೀತಿ ನಡೆದುಕೊಳ್ಳುಬೇಕಾದುದು ಸಚಿವರ ಕರ್ತವ್ಯ. ಆದರೆ, ಸುಧಾಕರ ವಿಷಯದಲ್ಲಿ ಈ ರೀತಿ ಯಾವುದೂ ನಡೆದಿಲ್ಲ. ಮುಖ್ಯಮಂತ್ರಿಯವರು ಏಕಾಏಕಿ ಅವರ ಖಾತೆಯನ್ನು ಬದಲು ಮಾಡಿದ್ದಾರೆ. ಇದು ಜನರನ್ನು ಸಮಾಧಾನ ಪಡಿಸಲೋ ಅಥವಾ ಮಂತ್ರಿಗಳು ತಪ್ಪು ಮಾಡಿದ್ದಾರೆ ಎನ್ನುವ ಉದ್ದೇಶಕ್ಕೋ ಎಂದು ಪ್ರಶ್ನಿಸಿದ್ದಾರೆ.

ಬಿಜೆಪಿ ಸರಕಾರದ ಸಚಿವ ಸಂಪುಟದಲ್ಲಿ ಸುಧಾಕರ ಅವರೊಬ್ಬರೇ ತಪ್ಪು ಮಾಡಿಲ್ಲ. ಈ ರೀತಿ ಬಹಳಷ್ಟು ಸಚಿವರು ತಪ್ಪು ಮಾಡಿದ್ದಾರೆ. ಅವರ ವಿಷಯದಲ್ಲಿಯೂ ಮುಖ್ಯಮಂತ್ರಿಯವರು ಈ ರೀತಿಯ ಕ್ರಮ ಯಾಕೆ ಕೈಗೊಳ್ಳಲಿಲ್ಲ ಎಂದರು.

ಜಾತಿ ಮತ್ತು ಜನ ಬೆಂಬಲವಿಲ್ಲದ ಸುಧಾಕರ ಅವರ ಖಾತೆ ಬದಲಾವಣೆ ಮಾಡಲಾಗಿದೆ. ಅದೇ ರೀತಿ ಹಾವೇರಿ ಗೋಲಿಬಾರ್ ಘಟನೆ ನಂತರ ಸಿಎಂ ಉದಾಸಿ, ಭಂಗಿಗಳ ಮಲಾಭಿಷೇಕ ಘಟನೆಗೆ ಬಸವರಾಜ ಬೊಮ್ಮಾಯಿ ಮತ್ತು ಓವರ್‌ಟೇಕ್ ಮಾಡಿದ ಉದ್ಯಮಿ ಮೇಲೆ ಗೂಂಡಾಗಿರಿ ಪ್ರದರ್ಶಿಸಿದ್ದ ಬಚ್ಚೇಗೌಡರ ವಿರುದ್ಧ ಈ ರೀತಿಯ ಕ್ರಮ ಕೈಗೊಳ್ಳಲಿಲ್ಲ ಯಾಕೆ? ಒಂದು ಕಣ್ಣಿಗೆ ಸುಣ್ಣ, ಮತ್ತೊಂದು ಕಣ್ಣಿಗೆ ಬೆಣ್ಣೆ ಎನ್ನುವ ತಾರತಮ್ಯ ನೀತಿಯನ್ನು ಬಿಜೆಪಿ ಅನುಸರಿಸುತ್ತಿದೆ ಎಂದು ಆರೋಪಿಸಿದರು.
ಸಂಬಂಧಿತ ಮಾಹಿತಿ ಹುಡುಕಿ