ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ರೈತ ಸಂಘದಲ್ಲೂ ಸ್ವಾರ್ಥ ಮನೆ ಮಾಡಿದೆ: ದೊರೆಸ್ವಾಮಿ (Doreswamy | Raitha sangha | Kuvempu | Congress)
Bookmark and Share Feedback Print
 
ಮೌಲ್ಯಯುತ ವಿಚಾರಗಳನ್ನು ಮರೆತಿರುವ ರಾಜಕೀಯ ಪಕ್ಷಗಳನ್ನು ಬದಿಗೊತ್ತಿ ರೈತಸಂಘಟನೆ ದೇಶದ ತೃತೀಯ ಶಕ್ತಿಯಾಗಿ ರೂಪುಗೊಳ್ಳಬೇಕೆಂದು ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ ಆಶಯ ವ್ಯಕ್ತಪಡಿಸಿದರು.

ನಗರದ ಕುವೆಂಪು ರಂಗಮಂದಿರದಲ್ಲಿ ಎನ್.ಡಿ.ಸುಂದರೇಶ್ ಹುಟ್ಟು ಹಬ್ಬದ ಶುಭ ಸಂದರ್ಭದಲ್ಲಿ ರೈತ ಸಹ್ಯಾದ್ರಿ ಎನ್.ಡಿ.ಸುಂದರೇಶ್ ಪುಸ್ತಕ ಬಿಡುಗಡೆ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ರಾಜಕೀಯ ಪಕ್ಷಗಳಿಗೆ ನೀತಿ ನೆಲೆಗಟ್ಟು ಎನ್ನುವುದನ್ನೇ ಮರೆತಿವೆ. ಇಲ್ಲಿ ಸಾರ್ವಜನಿಕ ಸೇವೆ ಗೌಣ, ಸ್ವಾರ್ಥ, ಸ್ವಜನ ಪಕ್ಷಪಾತ ಮನೆ ಮಾಡಿದೆ. ಆದಾಯ- ಆಸ್ತಿ ಸಂಪಾದಿಸುವುದೇ ರಾಜಕೀಯ ಎನ್ನುವಂತಹ ಪರಿಸ್ಥಿತಿ ನಿರ್ಮಿಸಿದ್ದಾರೆ. ಪ್ರಜಾಪ್ರಭುತ್ವದಲ್ಲಿ ಪ್ರಜೆಗಳೇ ಪ್ರಭುಗಳು ಎನ್ನುತ್ತೇವೆ. ಆದರೆ ಈಗ ಕುಂಭಕರ್ಣ ಪ್ರಜಾಪ್ರಭುತ್ವ ಸೃಷ್ಟಿಸಿಕೊಂಡಿದ್ದೇವೆ. ಮತದಾರ ಪ್ರಭುಗಳು ಮಲಗಿದ್ದಾರೆ. ಪ್ರಭುಗಳು ಕೇವಲ ಮತಕ್ಕೆ ಸೀಮಿತವಾಗಿದ್ದಾರೆ. ಭ್ರಷ್ಟರನ್ನು ಕೆಳಗಿಳಿಸಬಹುದಾದ ಪ್ರಭುಗಳು ಪರಮಾಧಿಕಾರ ಮರೆತು ಹೋಗಿದೆ ಎಂದು ವಿಷಾಧ ವ್ಯಕ್ತಪಡಿಸಿದರು.

ರೈತರ ರಕ್ಷಣೆ, ಅಭಿವೃದ್ಧಿಯ ಮಹತ್ವಾಕಾಂಕ್ಷೆಯೊಂದಿಗೆ ಹುಟ್ಟಿ ಬಂದ ರೈತಸಂಘದಲ್ಲೂ ಸ್ವಾರ್ಥ ಮನೆ ಮಾಡಿದೆ. ಸಂಘದ ಮೂಲಕ ಪ್ರಚಾರಕ್ಕೆ ಬಂದವರು ಆನಂತರದಲ್ಲಿ ಆಸ್ತಿ ಸಂಪಾದನೆಯಲ್ಲಿ ತೊಡಗಿಸಿಕೊಂಡಿದ್ದಾರೆ. ರೈತಸಂಘದಲ್ಲಿದ್ದುಕೊಂಡೇ ಪಕ್ಷ ರಾಜಕೀಯದಲ್ಲಿ ತೊಡಗಿಸಿಕೊಂಡು ಎಡಬಿಡಂಗಿತನ ಪ್ರದರ್ಶಿಸುತ್ತಿದ್ದಾರೆ. ರಾಜಕೀಯ ಬಿಟ್ಟು ರೈತಸಂಘ ಕಟ್ಟಬೇಕೆಂದು ಸಲಹೆ ನೀಡಿದರು.

ರೈತಸಂಘದಲ್ಲಿರುವ ವಾತಾವರಣ ಅಸಹ್ಯ ಹುಟ್ಟಿಸುವಂತಿದೆ. ಸಂಘ ಒಡೆದ ಮನೆಯಾಗಿದ್ದು ಕೂಡಿ ಕೆಲಸ ಮಾಡುವ ಬುದ್ದಿ ಒಬ್ಬರಲ್ಲೂ ಕಂಡುಬರುತ್ತಿಲ್ಲ. ಬಡವರನ್ನು ಮುಂದೆ ಬಿಟ್ಟು ಲಾಠಿ ಏಟಿಗೆ ಗುರಿ ಮಾಡುವಂತಹವರು ಸಂಘದಲ್ಲಿರಬಾರದು. ಸರಕಾರಕ್ಕೂ ರೈತರ ಬಗ್ಗೆ ಕಾಳಜಿ ಇಲ್ಲವಾಗಿದೆ. ಸಣ್ಣ ರೈತರರಿಂದ ಭೂಮಿ ಕಸಿದುಕೊಂಡು ಬೀದಿಪಾಲು ಮಾಡುತ್ತಿದ್ದಾರೆ. ಪರಿಸ್ಥಿತಿ ಇದೇ ರೀತಿ ಮುಂದುವರಿದಲ್ಲಿ ಭಿಕ್ಷಾಪಾತ್ರೆ ಹಿಡಿದು ದೇಶಾಂತರ ಹೋಗಬೇಕಾಗುತ್ತದೆ ಎಂದು ಎಚ್ಚರಿಸಿದರು.
ಸಂಬಂಧಿತ ಮಾಹಿತಿ ಹುಡುಕಿ