ಸರಣಿ ಸ್ಫೋಟ ಕುರಿತಂತೆ ಮದನಿಯನ್ನು ತೀವ್ರ ವಿಚಾರಣೆಗೊಳಪಡಿಸಿದ ಪೊಲೀಸ್ ಅಧಿಕಾರಿಗಳಿಗೆ ಉತ್ತರಿಸಿದ್ದು, ಬೆಂಗಳೂರು ಸ್ಫೋಟದ ಬಗ್ಗೆ ಪ್ರಮುಖ ಆರೋಪಿ ಟಿ.ನಾಸಿರ್ ಜೊತೆಯೂ ಮಾತುಕತೆ ನಡೆಸಿರುವುದನ್ನು ಒಪ್ಪಿಕೊಂಡಿದ್ದಾನೆ.
ನಾಸೀರ್ ತನ್ನನ್ನು ಭೇಟಿಯಾದ ಸಂದರ್ಭದಲ್ಲಿ ಉದ್ಯಾನನಗರಿಯಲ್ಲಿ ಸ್ಫೋಟ ನಡೆಸುವ ಕುರಿತು ಚರ್ಚಿಸಿದ್ದೆ ಎಂದು ಮದನಿ ತಿಳಿಸಿರುವುದಾಗಿ ಬಿದರಿ ವಿವರಿಸಿದ್ದಾರೆ. ಅಲ್ಲದೇ ಮದನಿಯ ಬಂಧನದ ಅವಧಿ ಗುರುವಾರ ಮುಕ್ತಾಯಗೊಳ್ಳಲಿದೆ. ಮದನಿಯನ್ನು ನಾಳೆ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು. ಪ್ರಕರಣದ ಬಗ್ಗೆ ಮತ್ತಷ್ಟು ತನಿಖೆಯ ಅಗತ್ಯವಿದ್ದರೆ ಪೊಲೀಸ್ ವಶಕ್ಕೆ ಒಪ್ಪಿಸಲು ಕೋರ್ಟ್‌ಗೆ ಮನವಿ ಮಾಡಿಕೊಳ್ಳಲಾಗುವುದು ಎಂದರು.
ಆದರೆ ನಗರದ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಸ್ಫೋಟದ ಬಗ್ಗೆ ತನಗೆ ಮಾಹಿತಿ ಇಲ್ಲ ಎಂದು ಮದನಿ ತಿಳಿಸಿದ್ದಾನೆ. ಅಂತೂ ತನಗೆ ಬೆಂಗಳೂರು ಸ್ಫೋಟದ ಬಗ್ಗೆ ಏನೂ ಗೊತ್ತಿಲ್ಲ. ತನ್ನ ವಿರುದ್ಧ ವ್ಯವಸ್ಥಿತ ಷಡ್ಯಂತ್ರ ರೂಪಿಸಿ ಪ್ರಕರಣದಲ್ಲಿ ಸಿಲುಕಿಸಿದ್ದರು ಎಂದು ಮದನಿ ಪತ್ರಿಕಾಗೋಷ್ಠಿಯಲ್ಲಿ ಆರೋಪಿಸಿದ್ದ. ಇದೀಗ ಸ್ಫೋಟದ ರೂವಾರಿ ತಾನೇ ಎಂದು ಒಪ್ಪಿಕೊಳ್ಳುವ ಮೂಲಕ ಮದನಿ ಮುಖವಾಡ ಬಯಲಾಗಿದೆ.