ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಮೊಯಿಲಿ 'ಕಾರು'ಬಾರು: ಸಂಸದರಿಗೆ ರಾಜ್ಯದ ಹಣ ಏಕೆ? (Veerappa moily | High court | PIL | Yeddyurappa | Congress)
Bookmark and Share Feedback Print
 
NRB
ರಾಜ್ಯ ಸರಕಾರದ ಸಂಚಿತ ನಿಧಿಯಿಂದ ಸಂಸದರಿಗೆ ಯಾವ ಆಧಾರದ ಮೇಲೆ ಹಣಕಾಸಿನ ನೆರವು ನೀಡಿದ್ದೀರಿ...ಈ ಬಗ್ಗೆ ಸ್ಪಷ್ಟ ಉತ್ತರ ಕೊಡಬೇಕು...ಇದು ಬುಧವಾರ ಹೈಕೋರ್ಟ್ ರಾಜ್ಯ ಸರಕಾರಕ್ಕೆ ಕೇಳಿದ ಪ್ರಶ್ನೆ.

ಪ್ರಕರಣದ ವಿವರ: ಹಾಲಿ ಸಚಿವರಾಗಿರುವ ವೀರಪ್ಪ ಮೊಯಿಲಿ ಅವರು ರಾಜ್ಯದಲ್ಲಿ ಮುಖ್ಯಮಂತ್ರಿಯಾಗಿದ್ದ ವೇಳೆ ಅಂಬಾಸಿಡರ್ ಕಾರು ಖರೀದಿಗೆ ಎಲ್ಲ ಸಂಸದರಿಗೂ ತಲಾ 5 ಲಕ್ಷ ರೂಪಾಯಿ, ಅವುಗಳ ನಿರ್ವಹಣೆಗೆ ಪ್ರತಿ ತಿಂಗಳು 3ಸಾವಿರು ರೂಪಾಯಿ ಹಾಗೂ ಸಂಸದರ ಕಚೇರಿ ನಿರ್ವಹಣೆಗೆ 10 ಸಾವಿರ ರೂಪಾಯಿಯನ್ನು ಈ ನಿಧಿಯಿಂದ ನೀಡಿದ್ದರು.

ರಾಜ್ಯ ಸರಕಾರದ ಸಂಚಿತ ನಿಧಿಯಿಂದ ಸಂಸದರಿಗೆ ಹಣ ನೀಡಬಾರದು ಎಂದು ಸಂವಿಧಾನದಲ್ಲಿ ತಿಳಿಸಲಾಗಿದೆ. ಆ ನಿಟ್ಟಿನಲ್ಲಿ ಸರಕಾರದ ಹಣ ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ದೂರಿ 2001ರಲ್ಲಿ ವಕೀಲ ಎಸ್.ವಾಸುದೇವ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸಿದ ವೇಳೆ ನ್ಯಾಯಪೀಠ ಈ ಪ್ರಶ್ನೆ ಕೇಳಿದೆ.

ಕೇಂದ್ರದಲ್ಲಿ ಸೇವೆ ಸಲ್ಲಿಸುವವರಿಗೆ ರಾಜ್ಯದ ಹಣ ಏಕೆ ಎಂಬ ಬಗ್ಗೆ ಒಂದು ವಾರದೊಳಗೆ ಉತ್ತರ ನೀಡುವಂತೆ ಅಡ್ವೊಕೇಟ್ ಜನರಲ್ ಅಶೋಕ್ ಹಾರ್ನಳ್ಳಿ ಅವರಿಗೆ ಮುಖ್ಯನ್ಯಾಯಮೂರ್ತಿ ಜೆ.ಎಸ್.ಕೇಹರ್ ನೇತೃತ್ವದ ಪೀಠ ಆದೇಶಿಸಿದೆ.

ಆದರೆ ವಾದದ ಸಂದರ್ಭದಲ್ಲಿ ಹಾರ್ನಳ್ಳಿ ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿ, ಜಿಲ್ಲಾಧಿಕಾರಿಗಳ ಬಳಕೆಗೆಂದು ಕಾರು ಖರೀದಿ ಮಾಡಲಾಗಿತ್ತು. ಸಂಸದರು ತಮ್ಮ ಕ್ಷೇತ್ರಕ್ಕೆ ಆಗಮಿಸಿದಾಗ ಆ ವಾಹನಗಳನ್ನು ಅವರಿಗೆ ನೀಡಲಾಗಿತ್ತು ಅಷ್ಟೇ ಎಂದರು. ಆದರೆ ಜಿಲ್ಲಾಧಿಕಾರಿಗಳ ಶ್ರೇಣಿಯನ್ನು ಸಂಸದರಿಗೆ ನೀಡಿರುವುದು ಸರಿಯಲ್ಲ, ಇದು ಸಂವಿಧಾನ ಬಾಹಿರ ಎಂದು ವಾಸುದೇವ ಪ್ರತಿವಾದಿಸಿದರು. ಬಳಿಕ ನ್ಯಾಯಾಧೀಶರು ವಿಚಾರಣೆಯನ್ನು ಆಗೋಸ್ಟ್ 31ಕ್ಕೆ ಮುಂದೂಡಿದರು.
ಸಂಬಂಧಿತ ಮಾಹಿತಿ ಹುಡುಕಿ