ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಸಾಧನೆ ಅರಿವಿಗೆ ಮಾಹಿತಿ ಕೇಂದ್ರ ಅಗತ್ಯ: ಅಗಾತ ಸಂಗ್ಮಾ (Sangma | Chithra durga | BJP | Congress | JDS)
Bookmark and Share Feedback Print
 
ಸರಕಾರದ ಯೋಜನೆಗಳ ಬಗ್ಗೆ ಜನತೆಗೆ ಅರಿವು ಮೂಡಿಸಲು ದೇಶದ ಎಲ್ಲ ಭಾಗಗಳಲ್ಲಿ ಮಾಹಿತಿ ಕೇಂದ್ರ ತೆರೆಯುವ ಅಗತ್ಯವಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಖಾತೆ ರಾಜ್ಯ ಸಚಿವೆ ಅಗಾತ ಸಂಗ್ಮಾ ಹೇಳಿದರು.

ಸಂಸದರ ಸ್ಥಳೀಯ ಪ್ರದೇಶಾಭಿವೃದ್ದಿ ಯೋಜನೆ ಹಾಗೂ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಸಹಾಯದಲ್ಲಿ ನಗರದ ಜಿ.ಪಂ. ಕಚೇರಿ ಆವರಣದಲ್ಲಿ ನೂತನವಾಗಿ ನಿರ್ಮಿಸಿರುವ ಮಾಹಿತಿ ಕೇಂದ್ರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಮಾಹಿತಿ, ಶಿಕ್ಷಣ, ಸಂವಹನ ಕ್ಷೇತ್ರಕ್ಕೆ ಕೇಂದ್ರ ಸರಕಾರ ಸಾಕಷ್ಟು ಹಣ ವ್ಯಯಿಸುತ್ತಿದೆ. ಆದರೂ ಜನಸಾಮಾನ್ಯರಿಗೆ ನಿರೀಕ್ಷಿತ ಮಟ್ಟಕ್ಕೆ ಸರಕಾರದ ಯೋಜನೆ, ಸೌಲಭ್ಯಗಳ ಮಾಹಿತಿ ತಲುಪುತ್ತಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಈ ಮಾಹಿತಿ ಕೇಂದ್ರ ಬಹು ಉಪಯೋಗಿಯಾಗಲಿದೆ. ಈ ಮಾದರಿಯನ್ನು ದೇಶದ ಎಲ್ಲ ಕಡೆ ವಿಸ್ತರಿಸಲಾಗುವುದು ಎಂದರು.

ಸಾಮಾನ್ಯ ಜನರು ಸರಕಾರದ ಯೋಜನೆಗಳ ಸಮಗ್ರ ಮಾಹಿತಿ ತಿಳಿಯಲು ಹಾಗೂ ಯೋಜನೆ ಲಾಭ ಪಡೆದುಕೊಳ್ಳಲು ಕೇಂದ್ರ ತೆರೆದಿರುವುದು ಒಳ್ಳೆಯದು. ಇದರಿಂದ ಜನಸಾಮಾನ್ಯರು ಯೋಜನೆಗಳ ಮಾಹಿತಿ ಪಡೆದು ಅಭಿವೃದ್ದಿ ಕಡೆ ವಾಲುವರು ಎಂದು ತಿಳಿಸಿದರು.

ದೇಶ, ವಿದೇಶಗಳಲ್ಲಿ ಕಲಿತು, ಕೆಲಸ ಮಾಡಿ ಅನುಭವ ಹೊಂದಿರುವ ಸಂಸದ ಜನಾರ್ದನ ಸ್ವಾಮಿ ತಮ್ಮ ಜ್ಞಾನವನ್ನು ಜಿಲ್ಲೆಯ ಅಭಿವೃದ್ದಿ, ಜನತೆಯ ಸಹಾಯಕ್ಕೆ ವಿಸ್ತರಿಸಿರುವುದು ಹೆಮ್ಮೆಯ ಸಂಗತಿ. ಜತೆಗೆ ಚಿತ್ರದುರ್ಗದಲ್ಲಿ ಸ್ಥಾಪಿಸಿರುವ ಮಾಹಿತಿ ಕೇಂದ್ರ ದೇಶಕ್ಕೆ ಮಾದರಿಯಾಗಿ ನಿಲ್ಲಬಲ್ಲದು. ಈ ಮಾಹಿತಿ ಕೇಂದ್ರದ ಯಶಸ್ಸು ಅಧಿಕಾರಿಗಳು, ಜನತೆ ಮೇಲಿದೆ ಎಂದು ಅಭಿಪ್ರಾಯಪಟ್ಟರು.
ಸಂಬಂಧಿತ ಮಾಹಿತಿ ಹುಡುಕಿ