ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ವಿವೇಕಾನಂದ ಶಾಲೆ-ಹಿಂದಿ ಶಿಕ್ಷಕನ ಕಾಮಚೇಷ್ಠೆ! (molesting students | Bangalore | child rights commission | Ramakrishna Mission)
ಉದ್ಯಾನನಗರಿಯಲ್ಲಿನ ಸರಕಾರಿ ಅನುದಾನಿತ ಪ್ರತಿಷ್ಠಿತ ಖಾಸಗಿ ಶಾಲೆಯೊಂದರ ಶಿಕ್ಷಕ ವಿದ್ಯಾರ್ಥಿನಿಯರಿಗೆ ಕಳೆದ ಮೂರು ವರ್ಷಗಳಿಂದ ಲೈಂಗಿಕ ಕಿರುಕುಳ ನೀಡುತ್ತಿರುವ ವಿಷಯ ಬೆಳಕಿಗೆ ಬಂದಿದೆ.
ಲೈಂಗಿಕ ಕಿರುಕುಳ ನೀಡುತ್ತಿರುವ ಶಿಕ್ಷಕನ ವಿರುದ್ಧ ಮಕ್ಕಳ ಹಕ್ಕುಗಳ ಆಯೋಗಕ್ಕೆ ದೂರು ನೀಡಲಾಗಿದೆ. ನಗರದ ಬನಶಂಕರಿಯಲ್ಲಿರುವ ರಾಮಕೃಷ್ಣ ಮಿಷನ್‌ನ ಸ್ವಾಮಿ ವಿವೇಕಾನಂದ ವಿದ್ಯಾಶಾಲೆಯಲ್ಲಿನ ಶಿಕ್ಷಕನ ಲೈಂಗಿಕ ಕಿರುಕುಳ ವಿಷಯ ಬಹಿರಂಗಗೊಂಡಿರುವುದು ಸಂಸ್ಥೆಯನ್ನು ಇಕ್ಕಟ್ಟಿಗೆ ಸಿಲುಕಿಸಿದೆ.
ವಿವೇಕಾನಂದ ಶಾಲೆಯ ಹಿಂದಿ ಶಿಕ್ಷಕ ವಿ.ಎಸ್.ರಾಥೋಡ್, ಕಳೆದ ಮೂರು ವರ್ಷಗಳಿಂದ ಅಶ್ಲೀಲ ಪದ ಬಳಸಿ ಮಾತನಾಡುವುದು, ಲೈಂಗಿಕ ಕಿರುಕುಳ ನೀಡುತ್ತಿರುವುದಾಗಿ ಹತ್ತನೇ ತರಗತಿಯ ವಿದ್ಯಾರ್ಥಿನಿಯೊಬ್ಬಳು ಮಕ್ಕಳು ಹಕ್ಕು ಆಯೋಗಕ್ಕೆ ತಿಳಿಸಿದ್ದಾಳೆ. ಆದರೆ ಶಾಲೆಯ ಕಾಮುಕ ಶಿಕ್ಷಕನ ನಡವಳಿಕೆ ಬಗ್ಗೆ ವಿದ್ಯಾರ್ಥಿನಿ ಪೋಷಕರಿಗಾಗಲಿ ಅಥವಾ ಹೆಸ್ಟ್‌ಮಾಸ್ಟರ್‌ಗೆ ದೂರು ಸಲ್ಲಿಸಿರಲಿಲ್ಲವಾಗಿತ್ತು. ಆತ ಯಾವ ವಿಷಯ ಬಾಯಿಬಿಡದಂತೆ ಬೆದರಿಕೆ ಒಡ್ಡಿದ್ದ.
ಏತನ್ಮಧ್ಯೆ ಕಾಮುಕ ಶಿಕ್ಷಕನ ಲಂಪಟತನ ಬಗ್ಗೆ ಆಯೋಗಕ್ಕೆ ಕಳೆದ ವಾರ ಅನಾಮಧೇಯ ಪತ್ರವೊಂದು ಬಂದಿತ್ತು. ಈ ಬಗ್ಗೆ ಆಯೋಗ ತನಿಖೆ ನಡೆಸಿದಾಗ ಆಘಾತಕಾರಿ ಅಂಶ ಬಹಿರಂಗಗೊಂಡಿತ್ತು.
'ರಾಥೋಡ್ ತನ್ನನ್ನು ಕೆಟ್ಟ ರೀತಿಯಲ್ಲಿ ದೇಹವನ್ನು ಸ್ಪರ್ಶಿಸುತ್ತಿದ್ದರು. ನಾನು ಅದನ್ನು ಯಾವ ರೀತಿ ವಿವರಿಸಲಿ...ಅವರು ಶಿಕ್ಷಕರ ರೀತಿ ವರ್ತಿಸುತ್ತಿರಲಿಲ್ಲ. ತನ್ನ ಕೈಗಳನ್ನು ಮುಟ್ಟಿ ಹಿಂದಕ್ಕೆ ಎಳೆದು ಅಶ್ಲೀಲ ಪದ ಬಳಸುತ್ತಿರುವುದಾಗಿ' ಆಕೆ ದೂರಿದ್ದಾಳೆ. ರಾಥೋಡ್ ತನ್ನ ಕೈಯನ್ನು ಹಿಂದಕ್ಕೆ ಬಿಗಿದಪ್ಪ, ದಿಲ್ ಕಿ ದಡಕನ್ ಎಂದು ಹೇಳಿ, ಕುಚ್..ಕುಚ್ ಹೋತಾ ಹೈ ಎಂದು ಕೇಳುತ್ತಿದ್ದರು ಎಂದು ವಿವರಿಸಿದ್ದಾಳೆ.
ಅದೇ ರೀತಿ ಮತ್ತೊಬ್ಬಳು ವಿದ್ಯಾರ್ಥಿನಿ ರಾಥೋಡ್ ವಿರುದ್ಧ ಆರೋಪಿಸಿದ್ದು, ತಾನು ಶಾಲೆಯಿಂದ ಮನೆಯಿಂದ ಹೋಗುತ್ತಿರುವ ಸಂದರ್ಭದಲ್ಲಿ ತನ್ನ ಎದೆಗೆ ಮತ್ತು ಹಿಂಭಾಗಕ್ಕೆ ಕೈಯಿಂದ ತಟ್ಟಿ ಅಶ್ಲೀಲವಾಗಿ ಮಾತನಾಡುತ್ತಿರುವುದಾಗಿ ಶಿಕ್ಷಕನ ಕಾಮಚೇಷ್ಠೆಯ ವಿವರ ನೀಡಿದ್ದಾಳೆ.
ಪ್ರಕರಣದ ಬಗ್ಗೆ ಸಿಎನ್ಎನ್-ಐಬಿಎನ್ ಶಾಲೆಯ ಅಧಿಕಾರಿಗಳನ್ನು ಪ್ರಶ್ನಿಸಿದಾಗ, ಆರಂಭಿಕವಾಗಿ ಈ ಆರೋಪವನ್ನು ಸಾರಸಗಟಾಗಿ ತಳ್ಳಿಹಾಕಿದ್ದರು. ಆದರೆ ನಂತರ ಕಳೆದ 25 ವರ್ಷಗಳಿಂದ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿರುವ ರಾಥೋಡ್ ಈ ರೀತಿ ಮಾಡಿದ್ದಾರೆ ಎಂಬ ಆರೋಪ ಆಘಾತ ತಂದಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದರು. ಆರೋಪ ಕುರಿತಂತೆ ತನಿಖೆಗೆ ಆದೇಶಿಸಲಾಗಿದೆ ಎಂದು ಶಾಲಾ ಆಡಳಿತ ಮಂಡಳಿ ತಿಳಿಸಿದೆ.