ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ರಾಸಲೀಲೆ: ಲೆನಿನ್ ವಿರುದ್ಧ ಕೋರ್ಟ್‌ನಲ್ಲಿ ದೂರು ದಾಖಲು (Nithyananda | Ranjitha | Rama nagar Court | Anjula jakson | Lenin)
Bookmark and Share Feedback Print
 
ನಿತ್ಯಾನಂದ ರಾಸಲೀಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಲೆನಿನ್ ಕರುಪ್ಪನ್ ವಿರುದ್ಧ ಪೊಲೀಸರು ಎಫ್ಐಆರ್ ದಾಖಲಿಸಿಕೊಳ್ಳದ ಹಿನ್ನೆಲೆಯಲ್ಲಿ ನಿತ್ಯಾನಂದನ ಭಕ್ತೆ ಅಂಜುಳ ಜಾಕ್ಸನ್ ಶನಿವಾರ ರಾಮನಗರ ಕೋರ್ಟ್‌ನಲ್ಲಿ ದೂರು ದಾಖಲಿಸಿದ್ದಾರೆ.

ತಾಜಾ ಸುದ್ದಿಗಳು ತಕ್ಷಣ ಲಭ್ಯವಾಗಲು ಟ್ವಿಟ್ಟರ್‌ನಲ್ಲಿ ನಮ್ಮನ್ನು ಫಾಲೋ ಮಾಡಿ

ಅಶ್ಲೀಲ ದೃಶ್ಯಗಳ ಚಿತ್ರೀಕರಣ, ಮಾಧ್ಯಮಗಳಿಗೆ ಹಂಚಿಕೆ ಆರೋಪ, ರಾತ್ರಿ ವೇಳೆ ಅತಿಕ್ರಮಣ ಪ್ರವೇಶ ಕುರಿತಂತೆ ಅಂಜುಳ ಇಂದು ರಾಮನಗರ ಕೋರ್ಟ್‌ನಲ್ಲಿ ಲೆನಿನ್ ವಿರುದ್ಧ ಖಾಸಗಿಯಾಗಿ ದೂರು ದಾಖಲಿಸಿದರು. ಲೆನಿನ್ ವಿರುದ್ಧ ಭಾರತೀಯ ದಂಡ ಸಂಹಿತೆ 456, 292ರ ಅಡಿಯಲ್ಲಿ ದೂರು ದಾಖಲಿಸಿದ್ದಾರೆ.

ನಿತ್ಯಾನಂದ ಸ್ವಾಮಿಯ ಕಾರಿನ ಚಾಲಕನಾಗಿದ್ದ ಲೆನಿನ್ ಕರುಪ್ಪನ್, ಸ್ವಾಮೀಜಿಯ ರಾಸಲೀಲೆ ಕುರಿತಂತೆ ಮಾಧ್ಯಮಗಳಿಗೆ ಸ್ಫೋಟಕ ವಿಷಯವನ್ನು ಬಹಿರಂಗಗೊಳಿಸಿದ್ದರು. ಇದರಿಂದಾಗಿ ನಿತ್ಯಾನಂದ ಜೈಲುವಾಸ ಅನುಭವಿಸಿ ಇದೀಗ ಬಂಧಮುಕ್ತರಾಗಿದ್ದಾರೆ. ಆದರೆ ಲೆನಿನ್ ಸ್ವಾಮಿ ತೇಜೋವಧೆ ಮಾಡಿರುವುದಾಗಿ ನಿತ್ಯಾನಂದನ ಭಕ್ತರು ದೂರಿದ್ದಾರೆ.

ಆ ಕಾರಣಕ್ಕಾಗಿ ಕಳೆದ 15 ದಿನಗಳ ಹಿಂದೆ ನಿತ್ಯಾನಂದ ಸ್ವಾಮೀಜಿಯ 40ಕ್ಕೂ ಅಧಿಕ ಭಕ್ತರು ರಾಮನಗರ ಪೊಲೀಸ್ ಠಾಣೆಯಲ್ಲಿ ಲೆನಿನ್ ವಿರುದ್ಧ ಎಫ್ಐಆರ್ ದಾಖಲಿಸುವಂತೆ ಖಾಸಗಿ ದೂರನ್ನು ದಾಖಲಿಸಿದ್ದರು. ಆದರೆ ಪೊಲೀಸರು ದೂರನ್ನು ದಾಖಲಿಸದ ಬಗ್ಗೆ ಅಸಮಾಧಾನಗೊಂಡಿದ್ದ ನಿತ್ಯಾನಂದನ ಭಕ್ತರು ಇತ್ತೀಚೆಗೆ ರಾಮನಗರದ ಪೊಲೀಸ್ ಠಾಣೆ ಎದುರು ಪ್ರತಿಭಟನೆ ಕೂಡ ನಡೆಸಿದ್ದರು.

ಇದೀಗ ನಿತ್ಯಾನಂದನ ಭಕ್ತೆ ಅಂಜುಳ ಜಾಕ್ಸನ್ ರಾಮನಗರ ಕೋರ್ಟ್‌ನಲ್ಲಿ ಲೆನಿನ್ ವಿರುದ್ಧ ದೂರನ್ನು ದಾಖಲಿಸುವ ಮೂಲಕ ಕಾನೂನು ಸಮರ ಆರಂಭಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ