ಘಟನೆಯಲ್ಲಿ ಮೆಹರುನ್ನಿಸಾ (24) ದೇಹದ ಭಾಗ ಶೇ.35ರಷ್ಟು ಸುಟ್ಟು ಹೋಗಿದ್ದು, ಈಕೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಸಂದರ್ಭದಲ್ಲಿಯೇ ಗಂಡು ಮಗುವಿಗೆ ಜನನ ನೀಡಿದ್ದಾಳೆ. ಇದೀಗ ಪ್ರಕರಣಕ್ಕೆ ಸಂಬಂಧಿಸಿದಂತೆ ಗಂಡ ಪೊಲೀಸರ ಅತಿಥಿಯಾಗಿದ್ದಾನೆ.
ಮೆಹರುನ್ನಿಸಾ ಅಗೋರಿ ರಾಮನ್ ಕಿಶನ್ ಎಂಬಾತನನ್ನು ಮೂರು ವರ್ಷಗಳ ಹಿಂದೆ ವಿವಾಹವಾಗಿದ್ದಳು. ಮದುವೆಯ ನಂತರ ಕಿಶನ್ ಇಸ್ಲಾಮ್ ಧರ್ಮಕ್ಕೆ ಮತಾಂತರಗೊಂಡು ತನ್ನ ಹೆಸರನ್ನು ಸೈಯದ್ ಅಬ್ದುರ್ ರೆಹಮಾನ್ ಎಂದು ಬದಲಾಯಿಸಿಕೊಂಡಿದ್ದ ಎಂದು ಪೊಲೀಸರಿಗೆ ನೀಡಿರುವ ದೂರಿನಲ್ಲಿ ವಿವರಿಸಿದ್ದಾಳೆ.
ಆದರೆ ಕಿಶನ್(ರೆಹಮಾನ್) ಮತ್ತೆ ಹಿಂದೂ ಧರ್ಮಕ್ಕೆ ಮತಾಂತರಗೊಳ್ಳುವ ಇಚ್ಛೆ ವ್ಯಕ್ತಪಡಿಸಿದ್ದ, ಅದಕ್ಕೆ ಮೆಹರುನ್ನಿಸಾ ವಿರೋಧ ವ್ಯಕ್ತಪಡಿಸಿದ್ದಳು. ಇದರಿಂದ ಆಕ್ರೋಶಗೊಂಡ ಕಿಶನ್ ಹೆಂಡತಿಗೆ ಬೆಂಕಿ ಹಚ್ಚಿದ್ದ. ಹಿಂದೂ ಧರ್ಮಕ್ಕೆ ಮತಾಂತರಗೊಳ್ಳಲು ವಿರೋಧ ವ್ಯಕ್ತಪಡಿಸಿದ್ದರಿಂದ ಮೆಹರುನ್ನಿಸಾಗೆ ವಿಚ್ಚೇದನ ನೀಡಲು ತಿಳಿಸಿದ್ದ. ಈ ಸಂದರ್ಭದಲ್ಲಿ ಆಕೆ ಗರ್ಭಿಣಿಯಾಗಿದ್ದದ್ದಳು.
ತಾನು ಗರ್ಭಿಣಿಯಾಗುವವರೆಗೂ ಕಿಶನ್ ತನ್ನ ಜೊತೆ ತುಂಬಾ ಉತ್ತಮ ರೀತಿಯಲ್ಲೇ ಜೀವನ ನಡೆಸುತ್ತಿದ್ದರು. ಅವರ ಮನೆಯವರೇ ತನ್ನ ಗಂಡನ ಬ್ರೈನ್ ವಾಶ್ ಮಾಡಿರುವುದಾಗಿ ಮೆಹರುನ್ನಿಸಾ ದೂರಿನಲ್ಲಿ ತಿಳಿಸಿದ್ದಾಳೆ. ಅಷ್ಟೇ ಅಲ್ಲ ಮೆಹರುನ್ನಿಸಾ ಕೆಲಸಕ್ಕೆ ಹೋಗುತ್ತಿರುವ ಬಗ್ಗೆಯೂ ಕಿಶನ್‌ಗೆ ಅಸಮಾಧಾನ ಇತ್ತು ಎಂದು ದೂರಿದ್ದಾಳೆ. ಕೆಲಸ ಬಿಡುವಂತೆಯೂ ಕಿಶನ್ ಒತ್ತಾಯಿಸಿದ್ದ. ಆದರೆ ತನ್ನ ಕುಟುಂಬ ನಿರ್ವಹಣೆಗೆ ಕೆಲಸ ಅಗತ್ಯವಾಗಿರುವುದರಿಂದ ಕೆಲಸ ಬಿಡಲು ಒಪ್ಪಿಲ್ಲ ಎಂದು ಮೆಹರುನ್ನಿಸಾ ವಿವರಣೆ ನೀಡಿದ್ದಾಳೆ.
ಈ ಎಲ್ಲಾ ಜಟಾಪಟಿ ನಡುವೆ ಕಿಶನ್ ಭಾನುವಾರ ಮೆಹರುನ್ನಿಸಾಗೆ ಬೆಂಕಿ ಹಚ್ಚಿ ಅಲ್ಲಿಂದ ಕಾಲ್ಕಿತ್ತಿತ್ತ. ಬೆಂಕಿ ಹೊತ್ತಿಕೊಂಡಾಗ ಮೆಹರುನ್ನಿಸಾ ಚೀರಾಡತೊಡಗಿದ್ದಳು, ಕೂಗನ್ನು ಕೇಳಿಸಿಕೊಂಡು ನೆರೆಹೊರೆಯ ಮನೆಯವರು ಓಡಿ ಬಂದು ಆಕೆಯನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿದ್ದರು.
ಇದೀಗ ಮೆಹರುನ್ನಿಸಾ ಆಸ್ಪತ್ರೆಯಲ್ಲಿ ಚೇತರಿಸಿಕೊಳ್ಳುತ್ತಿರುವುದಾಗಿ ತಿಳಿಸಿದ್ದಾಳೆ. ರೆಹಮಾನ್ ತನಗೆ ದೈಹಿಕವಾಗಿ ಕಿರುಕುಳ ನೀಡುತ್ತಿದ್ದ. ಆ ಬಗ್ಗೆ ನನ್ನಲ್ಲಿ ಪುರಾವೆ ಇದೆ. ತನಗಾಗಿ ಆತ ಒಂದು ರೂಪಾಯಿಯನ್ನೂ ಖರ್ಚು ಮಾಡಿಲ್ಲ. ರೆಹಮಾನ್ ತನಗೆ ಮೋಸ ಮಾಡಿದ್ದು ಆತನ ನಿಜಬಣ್ಣ ಬಯಲಾಗಬೇಕು ಎಂದು ಮೆಹರುನ್ನಿಸಾ ತಿಳಿಸಿದ್ದಾಳೆ.