ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಬಿಬಿಎಂಪಿ ಚೊಚ್ಚಲ 'ಜನಸ್ನೇಹಿ' ಬಜೆಟ್ ಮಂಡನೆ (BBMP | Budget 2010-11 | Meyor | Bangalore | BJP)
Bookmark and Share Feedback Print
 
ಬೆಂಗಳೂರು: ನಗರದ ಟ್ರಾಫಿಕ್ ಸಮಸ್ಯೆ ನಿವಾರಣೆಗೆ ಕ್ರಮ, ಇ-ತ್ಯಾಜ್ಯ ನಿರ್ವಹಣೆಗೆ ಕ್ರಮ, ಮೂಲಭೂತ ಸೌಕರ್ಯ ಅಭಿವೃದ್ಧಿಗೆ ಒತ್ತು ಸೇರಿದಂತೆ ಹಲವು ಯೋಜನೆಗಳನ್ನು ಒಳಗೊಂಡ ಎಂಟು ಸಾವಿರ ಕೋಟಿ ರೂಪಾಯಿಗಳ ಬೃಹತ್ ಗಾತ್ರದ ಬಿಬಿಎಂಪಿಯ 2010-11ನೇ ಸಾಲಿನ ಬಜೆಟ್ ಅನ್ನು ಪಾಲಿಕೆ ಸಭೆಯಲ್ಲಿ ಸೋಮವಾರ ಮಂಡಿಸಲಾಯಿತು.

ಬಿಬಿಎಂಪಿಯ ಆಡಳಿತ ಚುಕ್ಕಾಣಿಯನ್ನು ಬಿಜೆಪಿ ಹಿಡಿದ ನಂತರ ಮಂಡಿಸುತ್ತಿರುವ ಚೊಚ್ಚಲ ಬಜೆಟ್ ಇದಾಗಿದೆ. ಕೆಂಪೇಗೌಡ ಪೌರಸಭಾಂಗಣದಲ್ಲಿ ಇಂದು ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿ ಅಧ್ಯಕ್ಷ ಪಿ.ಎನ್.ಸದಾಶಿವ ಅವರು ಬಜೆಟ್ ಮಂಡಿಸಿದರು.

ಪಾಲಿಕೆ ವ್ಯಾಪ್ತಿಯಲ್ಲಿರುವ 10,14,000 ಆಸ್ತಿಗಳ ಸ್ವಯಂ ಆಸ್ತಿ ತೆರಿಗೆ ವ್ಯಾಪ್ತಿಯೊಳಗೆ ಸೇರ್ಪಡೆಯಾಗಿದ್ದು, ಬಾಕಿ 4.59 ಲಕ್ಷ ಆಸ್ತಿಯನ್ನು ತೆರಿಗೆ ವ್ಯಾಪ್ತಿ ಮೂಲಕ ಅಳವಡಿಸಿ ಪಾಲಿಕೆ ಸಶಕ್ತಗೊಳಿಸಲು ಉದ್ದೇಶಿಸಲಾಗಿದೆ.

ಬಜೆಟ್ ಮುಖ್ಯಾಂಶಗಳ
795 ಕೋಟಿ ರೂಪಾಯಿ ಆಸ್ತಿ ತೆರಿಗೆ ಸಂಗ್ರಹ

ನಗರದಲ್ಲಿ ಟ್ರೀ ಪಾರ್ಕ್ ನಿಮಾರ್ಣಕ್ಕೆ 49 ಕೋಟಿ ರೂ. ನಿಗದಿ

ಬೆಂಕಿ ಅನಾಹುತ ತಡೆಗೆ 1 ಕೋಟಿ ರೂಪಾಯಿ ನಿಗದಿ

ಪಾಲಿಕೆ ಆಸ್ಪತ್ರೆಗಳಲ್ಲಿ ಗರ್ಭಿಣಿ ಸ್ತ್ರೀಯರಿಗೆ ಸ್ಕ್ಯಾನಿಂಗ್ ಸೌಲಭ್ಯ

ಪಾಲಿಕೆ ಜಾಹೀರಾತು ಫಲಕಗಳಲ್ಲಿ ಕನ್ನಡಕ್ಕೆ ಆದ್ಯತೆ

ಸ್ಮಶಾನಗಳ ಅಭಿವೃದ್ಧಿಗೆ ಒಂದು ಕೋಟಿ ರೂಪಾಯಿ ಮೀಸಲು

ಸೊಳ್ಳೆ ನಿಯಂತ್ರಣಕ್ಕೆ ಒಂದು ಕೋಟಿ ರೂಪಾಯಿ ನಿಗದಿ

ವಿದ್ಯುತ್ ದೀಪ ಅಳವಡಿಕೆಗೆ ಎರಡು ಕೋಟಿ ರೂ.ಮೀಸಲು

ಸುಗಮ ಸಂಚಾರಕ್ಕಾಗಿ 50 ಗ್ರೇಟ್ ಸಪರೇಟರ್

ಭಾರೀ ವಾಹನಗಳಿಗೆ ವಿಶೇಷ ತೆರಿಗೆ

ಅಂಬೇಡ್ಕರ್ ಕ್ರೀಡಾಂಗಣದಲ್ಲಿ ರಾಜ್ ಪ್ರತಿಮೆ ಸ್ಥಾಪನೆಗೆ 25 ಲಕ್ಷ ರೂ.

ಬೀದಿ ನಾಯಿಗಳ ನಿರ್ವಹಣೆಗೆ ಐದು ಕೋಟಿ ರೂ. ಮೀಸಲು

ಕಸ ವಿಲೇವಾರಿ ಘಟಕ ಸ್ಥಾಪನೆ

ಪಾರಂಪರಿಕಾ ರಕ್ಷಣಾ ಕೋಶಗಳ ರಚನೆ
ಸಂಬಂಧಿತ ಮಾಹಿತಿ ಹುಡುಕಿ