ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಅದಿರು ರಫ್ತು ತಡೆಗೆ 7 ಸ್ಕ್ವಾಡ್ ;24 ಗಂಟೆ ತಪಾಸಣೆ: ಸಿಎಂ (Yeddyurappa | BJP | Congress | Illigal mining | Lokayuktha)
Bookmark and Share Feedback Print
 
ರಾಜ್ಯದಲ್ಲಿ ಅದಿರು ರಫ್ತು ನಿಷೇಧಿಸಿದ್ದರೂ ಕೂಡ ಅಕ್ರಮವಾಗಿ ಸಾಗಾಣಿಕೆಯಾಗುತ್ತಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಅದಿರು ರಫ್ತು ತಡೆಗಾಗಿ ರಾಜ್ಯದ 13 ಚೆಕ್‌ಪೋಸ್ಟ್‌ಗಳಲ್ಲಿ ದಿನದ 24 ಗಂಟೆಯೂ ತಪಾಸಣೆ ನಡೆಸಲು ಏಳು ವಿಶೇಷ ಸ್ಕ್ವಾಡ್‌ಗಳನ್ನು ನೇಮಕ ಮಾಡಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮಂಗಳವಾರ ತಿಳಿಸಿದ್ದಾರೆ.

ತಾಜಾ ಸುದ್ದಿಗಳು ತಕ್ಷಣ ಲಭ್ಯವಾಗಲು ಟ್ವಿಟ್ಟರ್‌ನಲ್ಲಿ ನಮ್ಮನ್ನು ಫಾಲೋ ಮಾಡಿ

ಅದಿರು ಸಾಗಾಣಿಕೆ ನಿಷೇಧಿಸಿದ್ದರೂ ರಾಜ್ಯದಿಂದ ಅಕ್ರಮವಾಗಿ ಹೊರ ರಾಜ್ಯಗಳಿಗೆ ಅದಿರು ಸಾಗಾಣೆಯಾಗುತ್ತಿದೆ ಎಂಬ ಲೋಕಾಯುಕ್ತರ ಹೇಳಿಕೆ ಹಾಗೂ ಗಣಿಗಾರಿಕೆ ಬಗ್ಗೆ ಹೈಕೋರ್ಟ್ ತರಾಟೆಗೆ ತೆಗೆದುಕೊಂಡಿರು ಹಿನ್ನೆಲೆಯಲ್ಲಿ ಇಂದು ಬೆಳಿಗ್ಗೆ ಚಾಲುಕ್ಯ ಸರ್ಕಲ್ ಸಮೀಪದ ಶಕ್ತಿಕೇಂದ್ರದಲ್ಲಿ ಗಣಿ, ಅರಣ್ಯ ಇಲಾಖೆ, ಗೃಹ ಸಚಿವ ವಿ.ಎಸ್.ಆಚಾರ್ಯ, ಪ್ರವಾಸೋದ್ಯಮ ಸಚಿವ ಜನಾರ್ದನ ರೆಡ್ಡಿ ಅವರ ಜೊತೆ ಸಭೆ ನಡೆಸಿದರು.

ಸಭೆಯ ನಂತರ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಮುಖ್ಯಮಂತ್ರಿಗಳು, ಮುಂದಿನ ದಿನಗಳಲ್ಲಿ ರಾಜ್ಯದ ಎಲ್ಲಾ ಗಣಿ ಕಂಪನಿಗಳ ಮೇಲೆ ನಿಗಾ ಇಡಲಾಗುವುದು. ಅಷ್ಟೇ ಅಲ್ಲ ರಾಜ್ಯದಲ್ಲಿ ಒಂದಿಂಚೂ ಅಕ್ರಮ ಗಣಿಗಾರಿಕೆ ನಡೆಯಲು ಬಿಡಲ್ಲ ಎಂದು ತಿಳಿಸಿದರು.

ಅದಿರು ರಫ್ತು ನಿಷೇಧ ಇದ್ದರೂ ಅಕ್ರಮವಾಗಿ ಸಾಗಾಣಿಕೆಯಾಗುತ್ತಿದೆ ಎಂಬ ದೂರಿನಲ್ಲಿ ಪರಿಣಾಮವಾಗಿ ರಾಜ್ಯದ ಮಂಗಳೂರು, ಕಾರವಾರ, ಚಿತ್ರದುರ್ಗ, ಹೊಸಪೇಟೆ, ಬಳ್ಳಾರಿ, ಗದಗ ಸೇರಿದಂತೆ ಪ್ರಮುಖ 13 ಚೆಕ್‌ಪೋಸ್ಟ್‌ಗಳಲ್ಲಿ 24 ಗಂಟೆಯೂ ಅದಿರು ಸಾಗಾಣೆ ಲೈಸೆನ್ಸ್‌ನ ನೈಜತೆ ತಿಳಿಯಲು ತಪಾಸಣೆ ನಡೆಸಲು ಅಧಿಕಾರಿಗಳ ನೇಮಕ ಮಾಡಲಾಗಿದೆ ಎಂದು ವಿವರಿಸಿದರು.

ಅಲ್ಲದೇ ಬಳ್ಳಾರಿಯಲ್ಲಿ 59 ಗಣಿ ಕಂಪನಿಗಳು ಅಕ್ರಮವಾಗಿ ಗಣಿಗಾರಿಕೆ ನಡೆಸುತ್ತಿವೆ ಎಂದು ಲೋಕಾಯುಕ್ತರು ವರದಿ ನೀಡಿದ್ದಾರೆ. ಆ ಬಗ್ಗೆಯೂ ಕಠಿಣ ಕ್ರಮ ಕೈಗೊಳ್ಳಲಾಗುವುದು. ಆಂಧ್ರ ಮತ್ತು ಬಳ್ಳಾರಿ ಗಡಿಭಾಗದಲ್ಲಿ ಸಿಸಿ ಟಿವಿ ಅಳವಳಡಿಸಲಾಗುವುದು. ಇದರಿಂದಾಗಿ ಅಕ್ರಮವಾಗಿ ಅದಿರು ರಫ್ತು ಸಾಗಾಣೆ ಪತ್ತೆ ಹಚ್ಚಲು ನಿರ್ಧರಿಸಲಾಗಿದೆ ಎಂದರು.

ಒತ್ತುವರಿ ಮಾಡಿರುವ ಗಣಿ ಕಂಪನಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಎಷ್ಟೇ ಪ್ರಭಾವಿ ವ್ಯಕ್ತಿಗಳೇ ಇರಲಿ, ಅಕ್ರಮ ಕಂಡು ಬಂದಲ್ಲಿ ದಾಳಿ ನಡೆಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿಗಳು ಈ ಸಂದರ್ಭದಲ್ಲಿ ಹೇಳಿದರು.

ಲಾಡ್ ಗಣಿ ಕಂಪನಿ ದಾಳಿ ಹಿಂದೆ ನನ್ನ ಕೈವಾಡವಿಲ್ಲ-ರೆಡ್ಡಿ: ಇತ್ತೀಚೆಗಷ್ಟೇ ರಾಜ್ಯಸಭಾ ಸದಸ್ಯ ಅನಿಲ್ ಲಾಡ್ ಒಡೆತನದ ವಿ.ಎಸ್.ಲಾಡ್ ಗಣಿ ಕಂಪನಿ ಮೇಲೆ ದಾಳಿ ನಡೆದ ಪ್ರಕರಣದ ಹಿಂದೆ ನನ್ನ ಕೈವಾಡ ಇಲ್ಲ ಎಂದು ಪ್ರವಾಸೋದ್ಯಮ ಸಚಿವ ಜನಾರ್ದನ ರೆಡ್ಡಿ ಸ್ಪಷ್ಟಪಡಿಸಿದ್ದಾರೆ.

ಗಣಿ ಕಂಪನಿ ಮೇಲಿನ ದಾಳಿಯ ಹಿಂದೆ ಜನಾರ್ದನ ರೆಡ್ಡಿ ಕೈವಾಡ ಇರುವುದಾಗಿ ಅನಿಲ್ ಲಾಡ್ ಬಹಿರಂಗವಾಗಿ ಆರೋಪಿಸಿದ್ದರು. ಅದಕ್ಕೆ ಪ್ರತಿಕ್ರಿಯೆ ನೀಡಿದ ರೆಡ್ಡಿ, ನನ್ನ ಹೇಳಿಕೆಯಿಂದಾಗಲಿ, ಸಿಎಂ ನಿರ್ದೇಶನದ ಮೇಲೆ ಲಾಡ್ ಕಂಪನಿ ಮೇಲೆ ದಾಳಿ ನಡೆಸಿಲ್ಲ. ಲೋಕಾಯುಕ್ತರ ವರದಿ ಆಧಾರದ ಮೇಲೆ ಅರಣ್ಯ ಮತ್ತು ಗಣಿ ಇಲಾಖೆ ಅಧಿಕಾರಿಗಳು ಲಾಡ್ ಕಂಪನಿ ಮೇಲೆ ದಾಳಿ ನಡೆಸಿರುವುದಾಗಿ ತಿಳಿಸಿದರು.
ಸಂಬಂಧಿತ ಮಾಹಿತಿ ಹುಡುಕಿ