ಯಾವುದೇ ವಿಚಾರದಲ್ಲಿ ಕೊರತೆಯಾದರೂ ಕೂಡ ರಾಜಕಾರಣಿಗಳು ಹಾಲಿಯಾಗಲಿ ಅಥವಾ ಮಾಜಿಯಾಗಲಿ ಅವರ ಭದ್ರತೆ ಮಾತ್ರ ಬಿಗಿಯಾಗಿಯೇ ಇರುತ್ತದೆ. ಅದಕ್ಕೆ ಈಗ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸೇರ್ಪಡೆಗೊಂಡಿದ್ದು, ಸದ್ಯದಲ್ಲೇ ಅವರಿಗೆ ಅತ್ಯಾಧುನಿಕ ಗುಂಡು ನಿರೋಧಕ ವಾಹನ ಬರಲಿದೆ.
ಮುಖ್ಯಮಂತ್ರಿ ಯಡಿಯೂರಪ್ಪ ಅವರ ಭದ್ರತೆಗಾಗಿಯೇ ಮೀಸಲಾದ ಅತ್ಯಾಧುನಿಕ ಗುಂಡು ನಿರೋಧಕ ಕಾರಿನಲ್ಲಿ ಓಡಾಟ ನಡೆಸಲಿದ್ದಾರೆ. ಅದಕ್ಕಾಗಿ ಜಪಾನ್ ಮೂಲದ ಮಿಟ್ಸುಬಿಷಿ ಕಂಪನಿಯ ಮೂರು ಪಜೆರೊ ವಾಹನಗಳು ನಗರಕ್ಕೆ ಬಂದಿದೆ. ಈ ವಾಹನ ವೆಚ್ಚ 40ಲಕ್ಷ ರೂಪಾಯಿ.
ಪಜೆರೊ ವಾಹನದ ವಿಶೇಷತೆ ಅಂದರೆ ಕಾರಿನ ಚಕ್ರಕ್ಕೆ ಅಳವಡಿಸಿರುವ ಟಯರ್ ಸಹಿತ ಎಲ್ಲಾ ಭಾಗಗಳೂ ಗುಂಡು ನಿರೋಧಕವಾಗಿದೆ. ಆ ನಿಟ್ಟಿನಲ್ಲಿ ಇನ್ಮುಂದೆ ಮುಖ್ಯಮಂತ್ರಿ ಯಡಿಯೂರಪ್ಪ ಗುಂಡು ನಿರೋಧಕ ಕಾರಿನಲ್ಲಿ ಓಡಾಟ ನಡೆಸಲಿದ್ದಾರೆ.