ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಸಾಕ್ಷರತೆ ಇಲ್ಲದ ಪ್ರದೇಶ ಅಭಿವೃದ್ದಿಗೆ ಮಾರಕ: ಉಮೇಶ್ ಕತ್ತಿ (Umesh kathi | Rama nagar | Ambedkar | Zilla panchayath | Devaraju Arasu)
Bookmark and Share Feedback Print
 
ಸಾಕ್ಷರತೆ ಇಲ್ಲದ ಪ್ರದೇಶ ಅಭಿವೃದ್ಧಿಗೆ ಮಾರಕ ಎಂದು ಜಿಲ್ಲಾ ಉಸ್ತುವಾರಿ ಸಚಿವ ಉಮೇಶ್ ಕತ್ತಿ ಅಭಿಪ್ರಾಯವ್ಯಕ್ತಪಡಿಸಿದ್ದಾರೆ.

ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯಿತಿ ಸಹಭಾಗಿತ್ವದೊಂದಿಗೆ ಡಿ.ದೇವರಾಜು ಅರಸುರವರ 95ನೇ ಜನ್ಮ ದಿನಾಚರಣೆ ಮತ್ತು ಸಾಕ್ಷರತಾ ಭಾರತ್ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಸಾಕ್ಷರತೆ ಇಲ್ಲದಿದ್ದರೆ ದೇಶ ಮತ್ತು ರಾಜ್ಯದ ಪ್ರಗತಿ ಅಸಾಧ್ಯ ಎಂದು ಮನಗಂಡ ಕೇಂದ್ರ ಮತ್ತು ರಾಜ್ಯ ನಾನಾ ಕಾರ್ಯಕ್ರಮಗಳನ್ನು ಅನುಷ್ಠಾನಪಡಿಸಿ ಸಾಕ್ಷರತೆಗಾಗಿ ಹತ್ತು ಹಲವು ಕಾರ್ಯಕ್ರಮಗಳನ್ನು ರೂಪಿಸಿದ್ದು, ಈ ಪೈಕಿ ಸಾಕ್ಷರತಾ ಭಾರತ್ ಕೂಡ ಒಂದು ಎಂದು ವಿಶ್ಲೇಷಿಸಿದರು.

2010ರ ಜನಗಣತಿ ಪ್ರಕಾರ ಜಿಲ್ಲೆಯಲ್ಲಿ ಶೇ.60.71 ಸಾಕ್ಷರಸ್ಥರಿದ್ದಾರೆ ಎಂದು ಅಂಕಿ ಅಂಶಗಳಲ್ಲಿ ನಮೂದಿಸಲಾಗಿದ್ದು, ಈ ಪೈಕಿ 69.88 ಪುರುಷರು ಮತ್ತು ಶೇ.52.22 ಸಾಕ್ಷರತಾ ಪ್ರಮಾಣದಲ್ಲಿ ಮಹಿಳೆಯರಿದ್ದಾರೆ. ಜನಗಣತಿಯಲ್ಲಿ ನಮೂದಿಸಿದ್ದಂತೆ ಸಾಕ್ಷರತಾ ಪ್ರಮಾಣ ಶೇ.99ಕ್ಕೆ ದಾಟಬೇಕಿದ್ದು, ಅಧಿಕಾರಿಗಳು ಮತ್ತು ಚುನಾಯಿತ ಜನಪ್ರತಿನಿಗಳು ಸಹಕರಿಸಬೇಕು ಎಂದರು.

ಜಿಲ್ಲೆಯ ಬಹುತೇಕ ಭಾಗವು ಬೆಂಗಳೂರು ನಗರ ಹಾಗೂ ನಗರೀಕರಣಕ್ಕೆ ಒಳಪಟ್ಟ ಭಾಗಗಳ ಸಮೀಪದಲ್ಲಿರುವುದರಿಂದ ಜನರ ಜೀವನ ಮಟ್ಟ ಸುಧಾರಣೆಗೆ ಸಾಕ್ಷರತಾ ಸೂಚ್ಯಂಕವು ಅಭಿವೃದ್ದಿಯಾಗಬೇಕಿದೆ ಎಂದು ಅಭಿಪ್ರಾಯವ್ಯಕ್ತಪಡಿಸಿದರು.
ಸಂಬಂಧಿತ ಮಾಹಿತಿ ಹುಡುಕಿ