ಜೆ.ಎಚ್.ಪಟೇಲ್, ಎಂ.ಪಿ.ಪ್ರಕಾಶ್ ಅವರಂತಹ ರಾಜಕಾರಣಿಗಳಿಗೆ ನಾಚಿಕೆ ಇತ್ತು. ಆದರೆ ಇಂದಿನ ರಾಜಕಾರಣಿಗಳಲ್ಲಿ ನಾಚಿಕೆ ಎಂಬುದೇ ಇಲ್ಲ ಎಂದು ಅಭಿಪ್ರಾಯವ್ಯಕ್ತಪಡಿಸಿದ್ದಾರೆ.
ರವೀಂದ್ರ ಕಲಾಕ್ಷೇತ್ರದಲ್ಲಿ ಅವರು ಮಹಾರಾಣಿ ಮಹಿಳಾ ವಿಜ್ಞಾನ ಕಾಲೇಜಿನ ಸಾಂಸ್ಕೃತಿಕ, ಕ್ರೀಡಾ ಹಾಗೂ ಎನ್ಎಸ್ಎಸ್ ಚಟುವಟಿಕೆಗಳನ್ನು ಉದ್ಘಾಟಿಸಿ ಮಾತನಾಡಿದ ಅವರು, ಮಹಿಳೆಯರಿಗೆ ನಾಚಿಕೆ ಸ್ವಭಾವ ಹುಟ್ಟಿನಿಂದಲೇ ಬಂದಿದೆ. ಪುರುಷರಿಗೆ ನಾಚಿಕೆಗೇಡಿತನ ಹುಟ್ಟಿನಿಂದಲೇ ಬರುತ್ತದೆ ಎಂದು ಅಭಿಪ್ರಾಯವ್ಯಕ್ತಪಡಿಸಿದರು.
ರಾಜಕಾರಣದಲ್ಲಿ ಶೇ.35ರಷ್ಟು ಮಹಿಳಾ ಮೀಸಲಾತಿ ಜಾರಿಯಾದರೆ ಭ್ರಷ್ಟಾಚಾರ ಕಡಿಮೆಯಾಗಬಹುದು. ಏಕೆಂದರೆ ಮಹಿಳೆಯರಿಗಿರುವ ನಾಚಿಕೆ ಸ್ವಭಾವ ಭ್ರಷ್ಟಾಚಾರಕ್ಕೆ ಅಡ್ಡಿಯಾಗಲಿದೆ ಎಂದರು.
ಅದೇ ರೀತಿ ಸರಕಾರಿ ಕಾಲೇಜುಗಳು ಅತ್ಯುತ್ತಮ ಕಾಲೇಜುಗಳಾಗಬೇಕು ಎಂಬುದು ನನ್ನ ಬಯಕೆ. ಸರಕಾರಿ ಕಾಲೇಜುಗಳಲ್ಲೇ ಬಡವ, ಶ್ರೀಮಂತ ಒಟ್ಟಿಗೆ ಕಲಿತು ಜೀವನ ರೂಪಿಸಿಕೊಳ್ಳುವುದು ಉತ್ತಮ ಎಂದ ಅನಂತಮೂರ್ತಿ, ನಾನೇನಾದರೂ ಅಧಿಕಾರದಲ್ಲಿದ್ದರೆ ಖಾಸಗಿ ಶಾಲೆಗಳನ್ನು ಸಂಪೂರ್ಣವಾಗಿ ರದ್ದುಪಡಿಸಿ ಸರಕಾರಿ ಕಾಲೇಜುಗಳಲ್ಲಿ ಕಲಿಯುವುದನ್ನು ಕಡ್ಡಾಯ ಮಾಡುತ್ತಿದ್ದೆ ಎಂದು ತಿಳಿಸಿದರು.