ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ರಾಷ್ಟ್ರ ರಕ್ಷಕರನ್ನು ಭಯೋತ್ಪಾದಕರೆಂದರೆ ಹುಷಾರ್: ಈಶ್ವರಪ್ಪ (Ishwarappa | Chidambaram | Davana gere | BJP | Congress)
Bookmark and Share Feedback Print
 
ಕೇಂದ್ರ ಗೃಹ ಸಚಿವ ಚಿದಂಬರಂಗೆ ಏನಾಗಿದೆ? ರಾಷ್ಟ್ರ ರಕ್ಷಕರನ್ನು ಹಿಂದೂ ಭಯೋತ್ಪಾದಕರೆಂದು ಕರೆದರೆ ಅವರ ನಾಲಿಗೆಯಲ್ಲಿ ಹುಳ ಬೀಳುತ್ತದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಕೆ.ಎಸ್. ಈಶ್ವರಪ್ಪ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ದಾವಣಗೆರೆ ಗುಂಡಿ ಮಹಾದೇವಪ್ಪ ಕಲ್ಯಾಣ ಮಂದಿರದಲ್ಲಿ ಬಿಜೆಪಿ ರಾಜ್ಯ ಯುವ ಮೋರ್ಚಾ ಕಾರ್ಯಕಾರಿಣಿ ಉದ್ಘಾಟಿಸಿ ಅವರು ಮಾತನಾಡಿದರು.

ಈ ಹಿಂದೆ ಸರ್ದಾರ್ ವಲ್ಲಭಬಾಯ್ ಪಟೇಲ್ ಯಾವುದೇ ಜಾತೀಯತೆ ತೋರದೆ ಸೋಮನಾಥ ದೇವಾಲಯ ರಕ್ಷಿಸಿದರು. ನಾವದನ್ನು ಸ್ಮರಿಸುತ್ತೇವೆ. ಈಗ ದೇಶದ್ರೋಹಿಗಳಿಗೆ ಎಚ್ಚರಿಕೆ ನೀಡುವ ಹಿಂದೂ ಸಂಘಟನೆಗಳನ್ನೇ ಭಯೋತ್ಪಾದಕರೆಂದು ಗುರುತಿಸುವ ಗೃಹ ಸಚಿವರು ನಮ್ಮ ದೇಶಕ್ಕಿದ್ದಾರೆ ಎಂದು ಕಿಡಿಕಾರಿದರು.

ಜಮ್ಮು ಕಾಶ್ಮೀರದಲ್ಲಿ ಪಾಕ್ ಭಯೋತ್ಪಾದನೆ, ಬಾಂಗ್ಲಾ ನುಸುಳುಕೋರರ ಸಮಸ್ಯೆ ಹೆಚ್ಚಿದ್ದರೂ ಕೇಂದ್ರ ಸರಕಾರ ಕಣ್ಣು ಮುಚ್ಚಿ ಕುಳಿತಿದೆ. ಗಾಂಧೀಜಿ ಇದ್ದಾಗ ಸೇವಾಪರವಾಗಿದ್ದ ಕಾಂಗ್ರೆಸ್ ಈಗ ಸ್ವಾರ್ಥಿಗಳ ಕೂಟವಾಗಿದೆ ಎಂದು ವ್ಯಂಗ್ಯವಾಡಿದರು. ಗೋ ಹತ್ಯೆ ವಿಷಯಕ್ಕೆ ಸಂಬಂಧಿಸಿದಂತೆ ರಾಜ್ಯಪಾಲರ ವಿರುದ್ಧ ಒಮ್ಮೆ ಏಕವಚನ, ಮತ್ತೊಮ್ಮೆ ಬಹುವಚನ ಬಳಸಿ ಈಶ್ವರಪ್ಪ ವಾಗ್ದಾಳಿ ನಡೆಸಿದರು.

ದೇಶದ 7 ರಾಜ್ಯಗಳಲ್ಲಿ ಗೋ ಹತ್ಯೆ ನಿಷೇಧ ಕಾಯಿದೆ ಇದೆ. ಅಲ್ಪಸಂಖ್ಯಾತರು ಅಧಿಕವಾಗಿರುವ ಕಾಶ್ಮೀರದಲ್ಲೂ ಈ ಕಾಯಿದೆ ಇದೆ. ರಾಜ್ಯಪಾಲರು ಗೋ ಹತ್ಯೆ ನಿಷೇಧ ಮಸೂದೆಯನ್ನು ರಾಷ್ಟ್ರಪತಿಗೆ ಕಳುಹಿಸುವ ಅಗತ್ಯವೇನಿತ್ತು ಎಂದು ಪ್ರಶ್ನಿಸಿದರು.

ದಲಿತರು ಕೂಡ ಗೋವು ಪೂಜಿಸುತ್ತಾರೆ. ಆದರೆ ಕಾಂಗ್ರೆಸಿಗರು ದಲಿತರ ಆಹಾರ ಕಸಿದುಕೊಳ್ಳಲಾಗುತ್ತಿದೆ ಎಂದು ಹುಯಿಲು ಎಬ್ಬಿಸುತ್ತಿದ್ದಾರೆ. ರಾಜ್ಯಪಾಲರ ಹುದ್ದೆ ಅಪವಿತ್ರ ಮಾಡಬೇಡಿ. ಬಿಜೆಪಿ ಜನಾಂದೋಲನಕ್ಕೆ ಮುಂದಾಗುವ ಮುನ್ನ ರಾಷ್ಟ್ರಪತಿಗಳಿಂದ ಮಸೂದೆ ವಾಪಸ್ ತರಿಸಿಕೊಂಡು ಅಂಕಿತ ಹಾಕಿ ಎಂದು ಸಲಹೆ ನೀಡಿದರು.
ಸಂಬಂಧಿತ ಮಾಹಿತಿ ಹುಡುಕಿ