ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಕಾಂಗ್ರೆಸ್, ಜೆಡಿಎಸ್ ಯಾವುದೇ ತಂತ್ರ ಫಲಿಸದು: ಶಾಣಪ್ಪ (Congress | Yeddyurappa | BJP | Shanappa | Namoshi | Karnataka)
Bookmark and Share Feedback Print
 
ಗುಲ್ಬರ್ಗ ದಕ್ಷಿಣ ಕ್ಷೇತ್ರದ ಉಪ ಚುನಾವಣೆಗೆ ಸಂಬಂಧಿಸಿದಂತೆ ಸಮರ್ಥ ಅಭ್ಯರ್ಥಿ ಕೊರತೆಯಲ್ಲಿದ್ದ ಜಾತ್ಯತೀತ ಜನತಾದಳ ಕೊನೆ ಹಂತದಲ್ಲಿ ಬಿಜೆಪಿಯಲ್ಲಿದ್ದ ಸದಸ್ಯರಿಗೆ ಟಿಕೆಟ್ ನೀಡಿದೆ ಎಂದು ಸಂಸದ ಕೆ.ಬಿ.ಶಾಣಪ್ಪ ದೂರಿದರು.

ಆ ಪಕ್ಷದಲ್ಲಿ ಅಭ್ಯರ್ಥಿಗಳಿದ್ದರೆ ಬಿಜೆಪಿ ಟಿಕೆಟ್ ಅಂತಿಮ ಮಾಡುವವರೆಗೂ ಕಾಯುವ ಅಗತ್ಯವಾದರೂ ಏನಿತ್ತು ? ಇದೊಂದು ಬಹಿರಂಗ ಸತ್ಯ ಎಂದು ಹೇಳಿದರು.

ಕಾಂಗ್ರೆಸ್, ಜೆಡಿಎಸ್ ಯಾವುದೇ ತಂತ್ರ ಮಾಡಿದರೂ ಎದುರಿಸಲು ಬಿಜೆಪಿ ಸಮರ್ಥವಾಗಿದೆ. ಗುಲ್ಬರ್ಗ ದಕ್ಷಿಣದಲ್ಲಿ ಬಿಜೆಪಿ ಅಭ್ಯರ್ಥಿ ಶಶೀಲ್ ನಮೋಶಿ ಗೆಲುವು ಖಚಿತ. ಗೆಲ್ಲುವ ಅಭ್ಯರ್ಥಿಗೆ ಅವಕಾಶ ನೀಡುವುದು ಅನಿವಾರ್ಯವಾಗಿತ್ತು. ರಾಜಕೀಯ, ಸಾಮಾಜಿಕ ಜೀವನದಲ್ಲಿ ಅನುಭವ ಹೊಂದಿರುವ ನಮೋಶಿ ಸೂಕ್ತ ಎಂದು ತೀರ್ಮಾನಿಸಿ ಪಕ್ಷದ ವರಿಷ್ಠರು ಅವಕಾಶ ಕಲ್ಪಿಸಿದ್ದಾರೆ.

ಪಕ್ಷದಲ್ಲಿ ಎಲ್ಲರೂ ಒಗ್ಗಟ್ಟಿನಿಂದ ಕೆಲಸ ಮಾಡುತ್ತಿದ್ದಾರೆ. ಈ ಚುನಾವಣೆ ಜಾತಿ, ಉಪ ಜಾತಿಗಳ ಲೆಕ್ಕಾಚಾರ ಕೆಲಸ ಮಾಡೋದಿಲ್ಲ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಎರಡು ವರ್ಷಗಳಲ್ಲಿ ಮಾಡಿದ ಸಾಧನೆ ಮುಂದಿಟ್ಟುಕೊಂಡು ಚುನಾವಣೆಗೆ ಹೊರಟಿದ್ದೇವೆ. ಈ ಕ್ಷೇತ್ರದ ಜನ ಪ್ರಜ್ಞಾವಂತರು, ಬುದ್ದಿವಂತರಾಗಿದ್ದು ಎಲ್ಲ ಪಕ್ಷಗಳ ಸಾಧಕ-ಬಾಧಕ ತುಲನೆ ಮಾಡಿ ಮತ ಚಲಾಯಿಸಲಿದ್ದಾರೆ ಎಂದು ವಿಶ್ವಾಸವ್ಯಕ್ತಪಡಿಸಿದರು.

ಮುಖ್ಯಮಂತ್ರಿಯಾದ ನಂತರ ಯಡಿಯೂರಪ್ಪ ಗುಲ್ಬರ್ಗಕ್ಕೆ 20ಕ್ಕೂ ಹೆಚ್ಚು ಬಾರಿ ಭೇಟಿ ಮಾಡಿದ್ದಾರೆ. ಅನೇಕ ಅಭಿವೃದ್ಧಿ ಕೆಲಸ ಕೈಗೆತ್ತಿಕೊಂಡಿದ್ದಾರೆ. ಯಾದಗಿರಿ ಜಿಲ್ಲೆ ಘೋಷಣೆ ಮಾಡಿ ಅಗತ್ಯ ಮೂಲ ಸೌಲಭ್ಯ ಕಲ್ಪಿಸಿದ್ದಾರೆ. ಪಾಲಿಕೆಗೆ ವಿಶೇಷ ಪ್ಯಾಕೇಜ್ ನೀಡಿದ್ದಾರೆ. ಈವರೆಗಿನ ಸರಕಾರಗಳು ನಗರದ ಅಭಿವೃದ್ಧಿಗೆ ಇಷ್ಟೊಂದು ಪ್ಯಾಕೇಜ್ ನೀಡಿವೆಯಾ? ಎಂದರು.

ಬಿಜೆಪಿಯಲ್ಲಿರುವ ಕೆಲವರು ಜನತಾ ಪರಿವಾರದಿಂದ ಬಂದವರು. ಯಾವ ಪಕ್ಷದಲ್ಲಿರುತ್ತೇವೆಯೋ ಆ ಪಕ್ಷಕ್ಕೆ ನಿಷ್ಠೆಯಿಂದ ಇರಬೇಕಾದದ್ದು ನಮ್ಮ ಧರ್ಮ. ಆದರೆ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ದೂರವಾಣಿ ಕರೆ ಮಾಡಿ ನಿಮ್ಮ ಆಶೀರ್ವಾದ ಇರಲಿ ಅಂತಾರೆ. ಹಾಗಂತ ಬಿಜೆಪಿ ನಿಷ್ಠಾವಂತ ಕಾರ್ಯಕರ್ತನಾಗಿರುವ ತಾವು ಪಕ್ಷಕ್ಕೆ ದ್ರೌಹ ಮಾಡೋಕೆ ಆಗೋದಿಲ್ಲ. ಚುನಾವಣಾ ಸಂದರ್ಭದಲ್ಲಿ ಈ ತರಹದ ತಂತ್ರ ಫಲಿಸದು ಎಂದು ಟೀಕಿಸಿದರು.
ಸಂಬಂಧಿತ ಮಾಹಿತಿ ಹುಡುಕಿ