ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಗುಲ್ಬರ್ಗ ದಕ್ಷಿಣದಲ್ಲಿ ಬಿಜೆಪಿಗೆ ಗೆಲುವು: ಕೆ.ಎಸ್.ಈಶ್ವರಪ್ಪ (Ishwarappa | Yeddyurappa | BJP | Dharam sing | Congress)
Bookmark and Share Feedback Print
 
ಗುಲ್ಬರ್ಗ ದಕ್ಷಿಣ ಹಾಗೂ ಕಡೂರು ವಿಧಾನಸಭೆ ಕ್ಷೇತ್ರಗಳ ಉಪ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳೇ ಗೆಲುವು ಸಾಧಿಸಲಿದ್ದಾರೆ ಎಂದು ಪಕ್ಷದ ರಾಜ್ಯಾಧ್ಯಕ್ಷ ಕೆ.ಎಸ್.ಈಶ್ವರಪ್ಪ ವಿಶ್ವಾಸವ್ಯಕ್ತಪಡಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾಜಿ ಮುಖ್ಯಮಂತ್ರಿ ಧರಂಸಿಂಗ್ ಪುತ್ರ ಡಾ.ಅಜಯ್ ಸಿಂಗ್ ಅವರನ್ನು ವಿಧಾನಸಭೆ ಚುನಾವಣೆಗೆ ಕಣಕ್ಕಿಳಿಸಿರುವುದನ್ನು ವಿರೋಧಿಸಿದ ಅವರು, ಧರಂಸಿಂಗ್ ಕುಟುಂಬ ಪ್ರೇಮವನ್ನು ಟೀಕಿಸಿದರು.

8 ಬಾರಿ ಶಾಸಕರಾಗುವ ಜತೆಗೆ ಸಂಸದರಾಗಿ, ಸಚಿವರಾಗಿ, ಮುಖ್ಯಮಂತ್ರಿಯಾಗಿ ಧರ್ಮಸಿಂಗ್ ಕಾರ್ಯನಿರ್ವಹಿಸಿದರೂ ಸ್ವಂತ ಜಿಲ್ಲೆಗೇನೂ ಮಾಡಿಲ್ಲ. ಬೆಣ್ಣೆತೊರೆ ನೀರಾವರಿ ಯೋಜನೆ, ಗಂಡೂರಿ ನಾಲಾ ಯೋಜನೆಯೂ ಹಿಂದಿನ ಸರಕಾರಗಳ ನಿರಾಸಕ್ತಿಯಿಂದ ಹಾಗೆಯೇ ಉಳಿದಿದ್ದವು. ಬಿಜೆಪಿ ಸರಕಾರ ಆಡಳಿತಕ್ಕೆ ಬಂದ ನಂತರ ಈ ಎಲ್ಲ ಕಾಮಗಾರಿಗಳಿಗೆ ಚಾಲನೆ ನೀಡಿ ಅನುಷ್ಠಾನಗೊಳಿಸಲಾಗಿದೆ ಎಂದರು.

ಬೆಣ್ಣೆತೊರೆ ನೀರಾವರಿ ಯೋಜನೆಯಲ್ಲಿ ಅಂದಾಜು 21 ಕೋಟಿ ರೂ. ಅವ್ಯವಹಾರ ಆಗಿದೆ. ನಿವೃತ್ತ ನ್ಯಾಯಾಧೀಶ ಕಣವಿ ನೇತೃತ್ವದ ತಂಡದ ತನಿಖೆಯಿಂದ ದೃಢಪಟ್ಟಿದೆ. ಇದರಲ್ಲಿ 26 ಅಕಾರಿಗಳು ತಪ್ಪಿತಸ್ಥರಿದ್ದರೂ ಕಾಂಗ್ರೆಸ್ ಸರಕಾರ ಯಾವುದೇ ಕ್ರಮ ಕೈಗೊಂಡಿರಲಿಲ್ಲ. ತಮ್ಮ ಸರಕಾರ ಅಂಥವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಿದೆ ಎಂದರು.

ಕೇಂದ್ರ ಸಚಿವ ಮಲ್ಲಿಕಾರ್ಜುನ ಖರ್ಗೆ ಅವರೂ ಪುತ್ರ ವ್ಯಾಮೋಹಕ್ಕೆ ಒಳಗಾಗಿ ಮಗನನ್ನು ಚಿತ್ತಾಪುರ ಕ್ಷೇತ್ರದಿಂದ ಕಣಕ್ಕಿಳಿಸಿದಾಗ ಅಲ್ಲಿಯ ಜನತೆ ಸೋಲಿಸುವ ಮೂಲಕ ತಕ್ಕ ಪಾಠ ಕಲಿಸಿದ್ದಾರೆ. ಗುಲ್ಬರ್ಗ ಉಪ ಚುನಾವಣೆಯಲ್ಲಿಯೂ ಧರಂಸಿಂಗ್ ಪುತ್ರನಿಗೆ ಇದೇ ಉತ್ತರ ನೀಡಲಿದ್ದಾರೆ ಎಂದರು.
ಸಂಬಂಧಿತ ಮಾಹಿತಿ ಹುಡುಕಿ