ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಬಿಜೆಪಿ ದುಡ್ಡಿನಿಂದ ಗೆಲುವು ಸಾಧಿಸಲು ಹೊರಟಿದೆ: ಸಿದ್ದರಾಮಯ್ಯ (Yeddyurappa | BJP | By poll | Kempa raju | JDS | Congress)
Bookmark and Share Feedback Print
 
ಉಪ ಚುನಾವಣೆಯಲ್ಲಿ ಗೆಲುವು ಸಾಧಿಸುವ ನಿಟ್ಟಿನಲ್ಲಿ ಬಿಜೆಪಿ ಗೋಣಿ ಚೀಲಗಳಲ್ಲಿ ದುಡ್ಡು ತಂದು ಕ್ಷೇತ್ರದಲ್ಲಿ ಕುಳಿತಿದೆ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಆರೋಪಿಸಿದ್ದಾರೆ.

ಚುನಾವಣೆ ಪ್ರಚಾರಕ್ಕೆ ಇಲ್ಲಿಗೆ ಆಗಮಿಸಿರುವ ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸಚಿವ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ನೇತೃತ್ವದಲ್ಲಿ ದುಡ್ಡಿನಿಂದ ಗೆಲ್ಲಲು ಬಿಜೆಪಿ ಮುಖಂಡರು ಹೊರಟಿದ್ದಾರೆ. ಇಲ್ಲಿನ ಜನ ದುಡ್ಡಿಗೆ ಯಾವತ್ತೂ ಬೆಲೆ ಕೊಡುವುದಿಲ್ಲ. ಕ್ಷೇತ್ರದ ಜನರ ವಿಶ್ವಾಸ ಗಳಿಸಿದ್ದ ಕೆ.ಎಂ.ಕೃಷ್ಣಮೂರ್ತಿ ಅವರ ಸೇವೆ, ಅಭಿವೃದ್ಧಿ ಕೆಲಸ, ಪಕ್ಷದ ಅಭ್ಯರ್ಥಿ ಕೆ.ಎಂ.ಕೆಂಪರಾಜು ಗೆಲುವಿಗೆ ಸಹಾಯವಾಗಲಿದೆ ಎಂದ ಅವರು , ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ನೇರ ಹಣಾಹಣಿ ಇದೆ ಎಂದರು.

ಬಿಜೆಪಿ ವೈಫಲ್ಯ ಉಪ ಚುನಾವಣೆ ಪ್ರಮುಖ ವಿಷಯ. ಅದರ ವಚನ ಭ್ರಷ್ಟತೆ, ರೈತರಿಗೆ ಎಸಗಿದ ದ್ರೋಹ, ಅಭಿವೃದ್ದಿ ಕುಂಠಿತ, ಬೊಕ್ಕಸ ಬರಿದು ಮಾಡಿರುವುದು ಹಾಗೂ ಬಿಜೆಪಿಯ ವ್ಯಾಪಕ ಭ್ರಷ್ಟಾಚಾರ, ವೈಫಲ್ಯಗಳನ್ನು ಜನರ ಮುಂದಿಡಲಾಗುವುದು ಎಂದರು.

ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಈಗಲೂ ಹಳ್ಳಿಗಳಿಗೆ 2-3 ಗಂಟೆ ವಿದ್ಯುತ್ ಕೊಡಲಾಗಿಲ್ಲ. ಪ್ರತಿದಿನ ಒಂದು ಸಾವಿರ ಮೆಗಾವ್ಯಾಟ್ ವಿದ್ಯುತ್ ಖರೀದಿಸಿ ಹಳ್ಳಿಗೆ ಕೊಡುವುದಾಗಿ ಹೇಳಿದ್ದಾರೆ. ಈವರೆಗೆ ಒಂದು ದಿನವೂ ಕೊಟ್ಟಿಲ್ಲ. ಸೆಪ್ಟೆಂಬರ್‌ನಲ್ಲಿ ಈ ಗತಿಯಾದರೆ ಮಾರ್ಚ್, ಏಪ್ರಿಲ್‌ನಲ್ಲಿ ಪರಿಸ್ಥಿತಿಯನ್ನು ಊಹಿಸಲೂ ಸಾಧ್ಯವಿಲ್ಲ. ಕನಿಷ್ಠ 6 ಗಂಟೆ 3 ಫೇಸ್ ವಿದ್ಯುತ್ ಕೊಡುವ ಭರವಸೆ ಈಡೇರಿಲ್ಲ. ಇವರು ಅಧಿಕಾರ ನಡೆಸಲು ಯೋಗ್ಯರೇ ಅಲ್ಲ ಎಂದು ಹರಿಹಾಯ್ದರು.

ಈ ಸರಕಾರ ಜನರ ಕಷ್ಟಕ್ಕೆ ಸ್ಪಂದಿಸುತ್ತಿಲ್ಲ. ಬೆಂಗಳೂರಿಂದ ಬಳ್ಳಾರಿವರೆಗಿನ ಕಾಂಗ್ರೆಸ್ ಪಾದಯಾತ್ರೆ ಜನಾಂದೋಲನವಾಗಲು ಬಿಜೆಪಿ ಬಗ್ಗೆ ಜನರಿಗೆ ಇರುವ ಅಸಮಾಧಾನವೇ ಕಾರಣ ಎಂದರು.
ಸಂಬಂಧಿತ ಮಾಹಿತಿ ಹುಡುಕಿ