ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಮಳೆ ಮುಂದುವರಿದರೆ ತಮಿಳುನಾಡಿಗೆ ನೀರು: ಯಡಿಯೂರಪ್ಪ (BS Yeddyurappa | Karnataka | Cauvery water | Tamil Nadu)
Bookmark and Share Feedback Print
 
ರಾಜ್ಯದ ಕಾವೇರಿ ಜಲಾನಯನ ಪ್ರದೇಶಗಳಲ್ಲಿ ಮತ್ತಷ್ಟು ದಿನ ಮಳೆ ಉತ್ತಮವಾಗಿ ಮುಂದುವರಿದಲ್ಲಿ ನೆರೆರಾಜ್ಯ ತಮಿಳುನಾಡಿಗೆ ನೀರು ಬಿಡಲಾಗುತ್ತದೆ ಎಂದು ಕರ್ನಾಟಕ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದ್ದಾರೆ.

ಪ್ರಸಕ್ತ ಕರ್ನಾಟಕದ ಕಾವೇರಿ ಜಲಾನಯನ ಪ್ರದೇಶಗಳಲ್ಲಿ ಅತ್ಯುತ್ತಮ ಮಳೆ ಬೀಳುತ್ತಿದೆ. ಇದೇ ರೀತಿ ಕೆಲವು ದಿನಗಳ ಕಾಲ ಮುಂದುವರಿದಲ್ಲಿ ತಮಿಳುನಾಡಿಗೆ ನೀರು ಬಿಡುಗಡೆ ಮಾಡುವ ಬಗ್ಗೆ ನಾವು ಪರಿಗಣಿಸುತ್ತೇವೆ ಎಂದು ನಾಗಪಟ್ಟಿಣಂನಲ್ಲಿ ಪತ್ರಕರ್ತರೊಂದಿಗೆ ಮಾತನಾಡುತ್ತಾ ಹೇಳಿದರು.

ಅವರ ಭೇಟಿಯ ಕುರಿತು ಪ್ರಶ್ನಿಸಿದಾ ಉತ್ತರಿಸಿದ ಯಡಿಯೂರಪ್ಪ, ಅತ್ಯುತ್ತಮ ಮಳೆಯಾಗಬೇಕು ಮತ್ತು ಎರಡೂ ರಾಜ್ಯಗಳ ಜನತೆಗೆ ಒಳಿತಾಗಬೇಕು ಎಂದು ಬೇಡಿಕೊಳ್ಳಲು ತಮಿಳುನಾಡಿನ 'ನವಗ್ರಹ' ದೇವಸ್ಥಾನಗಳಿಗೆ ಯಾತ್ರೆ ಮಾಡುತ್ತಿರುವುದಾಗಿ ತಿಳಿಸಿದರು.

ನಾಗಪಟ್ಟಿಣಂ ಜಿಲ್ಲೆಯ ವೈಥೀಶ್ವರನ್ ದೇವಳದಲ್ಲಿ ವೈದ್ಯನಾಥ ಸ್ವಾಮಿಯ ದರ್ಶನ ಮಾಡಿದ ನಂತರ ಕಾರೇಕಲ್ ಜಿಲ್ಲೆಯ ತಿರುನಲ್ಲಾರ್ ಮತ್ತು ಶನೇಶ್ವರ ದೇವಸ್ಥಾನಗಳಿಗೂ ಭೇಟಿ ನೀಡಿದರು.

ತಿರುನಲ್ಲಾರ್‌ಗೆ ಮುಖ್ಯಮಂತ್ರಿಯವರ ಭೇಟಿಗೂ ಮೊದಲು ಎಲ್‌ಟಿಟಿಇ ಪರ ಒಲವು ತೋರಿಸುತ್ತಾ ಬಂದಿರುವ ನಿರ್ದೇಶಕ ಸೀಮನ್ ಅಸ್ತಿತ್ವಕ್ಕೆ ತಂದಿದ್ದ 'ನಾಮ್ ತಮಿಳರ್ ಇಯಕ್ಕಂ' ಸಂಘಟನೆಯ ನಾಲ್ವರು ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದ್ದಾರೆ. ಅವರು ಯಡಿಯೂರಪ್ಪ ವಿರುದ್ಧ ಕಪ್ಪು ಬಾವುಟ ಪ್ರದರ್ಶಿಸಲು ಯತ್ನಿಸಿದ್ದರು.
ಸಂಬಂಧಿತ ಮಾಹಿತಿ ಹುಡುಕಿ