ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ವೈದ್ಯ ಕಾಲೇಜಿನ ಪ್ರಾಂಶುಪಾಲರನ್ನು ವಜಾಗೊಳಿಸಿ: ಸಿಎಂಗೆ ರೇವಣ್ಣ (Revanna | JDS | BJP | Yeddyurappa | Congress | Hassana)
Bookmark and Share Feedback Print
 
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ತಾಕತ್ತಿದ್ದರೆ ಅಕ್ರಮ ನೇಮಕಕ್ಕೆ ಕಾರಣರಾದ ಹಾಸನ ವೈದ್ಯ ಕಾಲೇಜು ಪ್ರಾಂಶುಪಾಲರನ್ನು ವಜಾಗೊಳಿಸಿ, ಕ್ರಿಮಿನಲ್ ಪ್ರಕರಣ ದಾಖಲಿಸಲಿ ಎಂದು ಜೆಡಿಎಸ್ ಶಾಸಕಾಂಗ ನಾಯಕ ರೇವಣ್ಣ ಸವಾಲು ಹಾಕಿದ್ದಾರೆ.

ಸುದ್ದಿಗಾರರ ಜತೆ ಮಾತನಾಡಿದ ಅವರು, ವೈದ್ಯ ಕಾಲೇಜು ಪ್ರಾಂಶುಪಾಲರ ನೇಮಕ ಕುರಿತಂತೆ ನ್ಯಾಯಾಲಯಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂದು ಆರೋಪಿಸಿದರು.

ಅಕ್ರಮ ಗಣಿಗಾರಿಕೆ ಕುರಿತಂತೆ ಸ್ವತಃ ಯಡಿಯೂರಪ್ಪ ಆರೋಪಿ ಸ್ಥಾನದಲ್ಲಿದ್ದಾರೆ. ಹೀಗಿದ್ದೂ ಕಾಲ್ನಡಿಗೆ ಜಾಥಾ ಮಾಡಿದ ಕಾಂಗ್ರೆಸಿಗರನ್ನು ತುಂಬಲು ಜೈಲು ಕಟ್ಟಿಸುವುದಾಗಿ ಹೇಳಿಕೆ ನೀಡಿರುವ ಮುಖ್ಯಮಂತ್ರಿ ವಿರುದ್ಧ ಕಾಂಗ್ರೆಸ್‌ನವರು ತನಿಖೆ ಮಾಡಿಸುವ ಧೈರ್ಯ ತೋರುತ್ತಿಲ್ಲ ಎಂದು ಟೀಕಿಸಿದರು.

ಮುಖ್ಯಮಂತ್ರಿ ಯಡಿಯೂರಪ್ಪ ಅವರ ಪುತ್ರ, ಸಂಸದ ರಾಘವೇಂದ್ರ ಶಿವಮೊಗ್ಗದಲ್ಲಿ ಜನಸೇವೆ ಮಾಡುವ ಬದಲು ಬೆಂಗಳೂರಿನಲ್ಲಿ ಮನೆ, ಸೈಟು ಮಾಡುವತ್ತ ಗಮನ ಹರಿಸಿದ್ದಾರೆ ಎಂದು ಆರೋಪಿಸಿದ ರೇವಣ್ಣ, ಕಾಮಗಾರಿ ಮಾಡಿದ ಗುತ್ತಿಗೆದಾರರಿಗೆ ಲೋಕೋಪಯೋಗಿ ಇಲಾಖೆಯಿಂದ ಕೊಡಬೇಕಾದ ಕೋಟ್ಯಂತರ ರೂ. ಹಣ ಬಾಕಿಯಿದೆ. ಕುಡಿವ ನೀರು ಯೋಜನೆಗಳಿಗೆ ಜಿ.ಪಂ.ನಲ್ಲಿ ಹಣವಿಲ್ಲ. ಗ್ರಾ.ಪಂ. ಕಾಮಗಾರಿಗಳಿಗೂ ದುಡ್ಡಿಲ್ಲ. ಎಲ್ಲ ಹಣವನ್ನೂ ಬಿಜೆಪಿಯವರು ಲೂಟಿ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸಂಬಂಧಿತ ಮಾಹಿತಿ ಹುಡುಕಿ