ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಬಿಜೆಪಿ ಏನು ಅಭಿವೃದ್ಧಿ ಮಾಡಿದೆ: ಬಂಡೆಪ್ಪ ಕಾಶಂಪೂರ್ (JDS | Bandeppa kashampur | BJP | Yeddyurappa | Namoshi)
Bookmark and Share Feedback Print
 
'ನಮ್ಮ ಕೆಲಸ ನೋಡಿ ಮತ ನೀಡಿ' ಎನ್ನುವ ಬಿಜೆಪಿ ಆಡಳಿತದ ಯಾವ ಅಭಿವೃದ್ಧಿಯ ಸಾಧನೆಗೆ ಮತ ನೀಡಬೇಕು ಎಂದು ಮಾಜಿ ಮಂತ್ರಿ ಬಂಡೆಪ್ಪ ಕಾಂಶಪುರ ಪ್ರಶ್ನಿಸಿದ್ದಾರೆ.

ಉಪ ಚುನಾವಣೆ ಪ್ರಕ್ರಿಯೆ ಆರಂಭವಾದ ನಂತರ ಬಿಜೆಪಿ ನಮ್ಮ ಕೆಲಸ ನೋಡಿ ಮತ ನೀಡಿ ಎಂಬ ಮಂತ್ರ ಜಪಿಸುತ್ತಿದೆ. ಆದರೆ ಮತದಾರರು ಯಾವ ಕೆಲಸ ನೋಡಿ ಮತ ನೀಡಬೇಕು ಎಂಬ ಗೊಂದಲದಲ್ಲಿದ್ದಾರೆ ಎಂದು ವ್ಯಂಗ್ಯವಾಡಿದರು.

ಗುಲ್ಬರ್ಗ ದಕ್ಷಿಣ ಕ್ಷೇತ್ರದಲ್ಲಿ ಈಗಾಗಲೇ ಸಂಚರಿಸಿ ಪ್ರಚಾರ ಕೈಗೊಂಡಿದ್ದು, ಜೆಡಿಎಸ್ ಅಭ್ಯರ್ಥಿ ಅರುಣಾ ಪಾಟೀಲ ರೇವೂರ ಪರ ಅಪಾರ ಬೆಂಬಲ ವ್ಯಕ್ತವಾಗಿದೆ ಎಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಪ್ರಾದೇಶಿಕ ಅಸಮಾನತೆ ನಿವಾರಣೆಗೆ ನಂಜುಂಡಪ್ಪ ವರದಿ ಅನುಷ್ಠಾನ ಸಮಿತಿ ಅಧ್ಯಕ್ಷರೂ ಆಗಿರುವ ಬಿಜೆಪಿ ಅಭ್ಯರ್ಥಿ ಶಶೀಲ ನಮೋಶಿ ಏನು ಮಾಡಿದ್ದಾರೆ ಎಂದು ಪ್ರಶ್ನಿಸಿದ ಅವರು, ನಂಜುಂಡಪ್ಪ ವರದಿ ಮೂಲೆ ಗುಂಪಾಗಿತ್ತು. ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಬೆಳಗಾವಿ ಅಧಿವೇಶನದಲ್ಲಿ ವರದಿ ಜಾರಿಗೊಳಿಸಿ ಮೊದಲ ಹಂತವಾಗಿ 1,500 ಕೋಟಿ ರೂ. ಬಿಡುಗಡೆ ಮಾಡಿದರು. ನಂತರ ಅಧಿಕಾರಕ್ಕೆ ಬಂದ ಬಿಜೆಪಿ 1,800 ಕೋಟಿ ರೂ. ಹಾಗೂ 2,500 ಕೋಟಿ ರೂ. ಬಿಡುಗಡೆ ಮಾಡಿದೆ. ಇದೇನೂ ವಿಶೇಷ ಅನುದಾನವಲ್ಲ ಎಂದರು.

ಆದರೆ ಈ ಎಲ್ಲ ಹಣ ಎಲ್ಲಿದೆ. ಯಾವ ಅಭಿವೃದ್ದಿಯಾಗಿದೆ ಎನ್ನುವುದನ್ನು ಮುಖ್ಯಮಂತ್ರಿಯವರು ಇಲ್ಲವೇ ನಮೋಶಿ ತೋರಿಸಲಿ. ಇನ್ನು ಈ ಭಾಗದ ಅನೇಕ ಹಳ್ಳಿಗಳಿಗೆ ಕುಡಿಯುವ ನೀರಿಲ್ಲ. ರಸ್ತೆ ಸೌಲಭ್ಯವಿಲ್ಲ. ವಿದ್ಯುತ್ ಇಲ್ಲ. ಈ ಮೂಲ ಸೌಲಭ್ಯಗಳೇ ಕಲ್ಪಿಸಲು ಸಾಧ್ಯವಾಗಿಲ್ಲ ಎಂದಾದಲ್ಲಿ ಈ ಅಸಮಾನತೆ ನಿವಾರಣೆ ಯಾವಾಗ? ವರದಿಯನ್ನು ಯಥಾವತ್ತಾಗಿ ಜಾರಿ ಮಾಡಿದ್ದಲ್ಲಿ ಈ ಭಾಗದ ಜನತೆಯ ತಲಾ ಆದಾಯ ಬೆಂಗಳೂರಿನ ಜನತೆಯಷ್ಟೆಯಾಗುತ್ತದೆ. ಆದರೆ ವಾಸ್ತವವೇ ಬೇರೆ ಎಂದು ವಿವರಿಸಿದರು.
ಸಂಬಂಧಿತ ಮಾಹಿತಿ ಹುಡುಕಿ