ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಉದ್ಯಾನನಗರಿಯಲ್ಲಿ 77ನೇ ಕನ್ನಡ ಸಾಹಿತ್ಯ ಸಮ್ಮೇಳನ: ನಲ್ಲೂರು (Sahithya sammelana | Nalluru prasad | Ashok | National college)
Bookmark and Share Feedback Print
 
77ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನವನ್ನು ಬೆಂಗಳೂರಿನ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಆಯೋಜಿಸಲು ತೀರ್ಮಾನಿಸಲಾಗಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ.ನಲ್ಲೂರು ಪ್ರಸಾದ್ ತಿಳಿಸಿದ್ದಾರೆ.

ಸುದ್ದಿಗಾರರ ಜತೆ ಮಾತನಾಡಿದ ಅವರು, ಸಮ್ಮೇಳನವನ್ನು ಡಿಸೆಂಬರ್ ಅಂತ್ಯದೊಳಗೆ ನಡೆಸಲು ಉದ್ದೇಶಿಸಲಾಗಿದೆ. 45 ವರ್ಷಗಳ ಹಿಂದೆ ಬೆಂಗಳೂರಿನ ಕೋಟೆ ಹೈಸ್ಕೂಲ್ ಮೈದಾನದಲ್ಲಿ ಸಮ್ಮೇಳನ ನಡೆದಿತ್ತು. ಆಗ ದೇಜಗೌ ಅಧ್ಯಕ್ಷತೆ ವಹಿಸಿದ್ದರು. ಈಗ ಈ ಮೈದಾನ ಸಮೀಪದ ನ್ಯಾಷನಲ್ ಕಾಲೇಜು ಬಳಿ ಕಾರ್ಯಕ್ರಮ ಆಯೋಜಿಸುತ್ತಿರುವುದು ವಿಶೇಷ ಎಂದರು.

ನ್ಯಾಷನಲ್ ಕಾಲೇಜು ಸುತ್ತಮುತ್ತ ಜೈನ್ ಭವನ, ನರಸಿಂಹಯ್ಯ ಭವನ, ಸುಮಾರು 20 ಕಲ್ಯಾಣ ಮಂಟಪಗಳಿರುವುದರಿಂದ ವಸತಿ ವ್ಯವಸ್ಥೆಗೆ ಅನುಕೂಲವಾಗುತ್ತದೆ. ಕೋಟೆ ಶಾಲೆ ಮೈದಾನವನ್ನು ಊಟದ ವ್ಯವಸ್ಥೆಗೆ ಬಳಸಿಕೊಳ್ಳಲು ಉದ್ದೇಶಿಸಲಾಗಿದೆ ಎಂದ ಅವರು, ಸಾರಿಗೆ ಸಚಿವ ಆರ್.ಅಶೋಕ್ ಸ್ವಾಗತ ಸಮಿತಿ ಅಧ್ಯಕ್ಷರಾಗಿದ್ದು, ಸಿದ್ಧತೆಗೆ ಕ್ರಮ ಕೈಗೊಳ್ಳಲಾಗಿದೆ. ಈ ಸಂಬಂಧ ಸಚಿವರು, ಶಾಸಕರು, ಸಂಸದರು, ಜನಪ್ರತಿನಿಧಿಗಳು, ಸಂಘ ಸಂಸ್ಥೆ ಪ್ರತಿನಿಗಳೊಂದಿಗೆ ಶೀಘ್ರ ಸಭೆ ನಡೆಸಲಾಗುವುದು ಎಂದರು.

ಚಿತ್ರದುರ್ಗ ಮತ್ತು ಗದಗ ಸಾಹಿತ್ಯ ಸಮ್ಮೇಳನಗಳಲ್ಲಿ ಆದ ಲೋಪ ಸರಿಪಡಿಸಿಕೊಂಡು, ವಿಭಿನ್ನವಾಗಿ ಸಮ್ಮೇಳನ ನಡೆಸಬೇಕೆಂಬ ಸಲಹೆಯನ್ನು ಪರಿಷತ್ ಸ್ವಾಗತಿಸಿದೆ. ಗುಣಮಟ್ಟದ ಗೋಷ್ಠಿಗಳನ್ನು ಆಯೋಜಿಸಲು ತೀರ್ಮಾನಿಸಲಾಗಿದೆ ಎಂದ ಅವರು, ಬೆಂಗಳೂರು ಸಮ್ಮೇಳನಕ್ಕೆ ಐಟಿ, ಬಿಟಿ ಉದ್ಯಮದ ಕನ್ನಡಾಸಕ್ತರನ್ನೂ ಪಾಳ್ಗೊಳ್ಳುವಂತೆ ಮಾಡಲಾಗುವುದು. ಹೊರನಾಡಿನ ಕನ್ನಡ ಪರಿಷತ್ ಮತ್ತು ಸಂಘಟನೆಗಳನ್ನೂ ಆಹ್ವಾನಿಸಲಾಗುವುದು ಎಂದರು.
ಸಂಬಂಧಿತ ಮಾಹಿತಿ ಹುಡುಕಿ