ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಮುಖ್ಯಮಂತ್ರಿಯಿಂದ ಚಿಲ್ಲರೆ ರಾಜಕೀಯ:ಕುಮಾರ ಸ್ವಾಮಿ (Kumar swamy | ,B.S.yudiyurappa | Jds)
Bookmark and Share Feedback Print
 
ರೇವೂರು ಕುಟುಂಬವನ್ನು ಒಡೆದು ಮನೆಯ ಹೆಣ್ಣುಮಕ್ಕಳನ್ನು ಬೀದಿಗೆ ತಂದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಚಿಲ್ಲರೆ ರಾಜಕೀಯ ಮಾಡುತ್ತಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಜೆಡಿಎಸ್ ರಾಜ್ಯಾಧ್ಯಕ್ಷ ಕುಮಾರ ಸ್ವಾಮಿ ಕಿಡಿಕಾರಿದ್ದಾರೆ.

ಉಪಚುನಾವಣೆಯಲ್ಲಿನ ಸೋಲಿನ ಭಯದಿಂದಾಗಿ ಮುಖ್ಯಮಂತ್ರಿಗಳು ಒಡೆದು ಆಳುವ ಜಾತಿ ರಾಜಕಾರಣ ಮಾಡುತ್ತಿದ್ದಾರೆ. ಆದರೆ, ಜನತೆಗೆ ಬಿಜೆಪಿ ಸರಕಾರ ಅಯೋಗ್ಯ ಸರಕಾರ ಎಂದು ಮಾಜಿ ಮುಖ್ಯಮಂತ್ರಿ ಕುಮಾರ ಸ್ವಾಮಿ ಆರೋಪಿಸಿದ್ದಾರೆ.

ಕಡೂರು ಮತ್ತು ಗುಲ್ಬರ್ಗಾದಲ್ಲಿ ಜೆಡಿಎಸ್ ಪಕ್ಷ ಗೆಲುವು ಸಾಧಿಸಲಿದೆ ಎನ್ನುವ ವರದಿಗಳಿಂದಾಗಿ ಮಾನಸಿಕ ಸಮತೋಲನ ಕಳೆದುಕೊಂಡ ಮುಖ್ಯಮಂತ್ರಿ ಯಡಿಯೂರಪ್ಪ ಮನಬಂದಂತೆ ಹೇಳಿಕೆ ನೀಡುತ್ತಿದ್ದಾರೆ ಎಂದು ಕಟುವಾಗಿ ಟೀಕಿಸಿದ್ದಾರೆ.

ಚುನಾವಣೆಯಲ್ಲಿ ಗೆಲ್ಲಲೇಬೇಕೆಂಬ ದೃಷ್ಟಿಯಿಂದ ಹಣ, ಹೆಂಡ ಮತ್ತು ಅಧಿಕಾರದ ಬಲವನ್ನು ಪ್ರಯೋಗಿಸಲು ಮುಂದಾಗಿರುವುದು ಸರಕಾರಕ್ಕೆ ನಾಚಿಕೆಗೇಡಿತನದ ಸಂಗತಿಯಾಗಿದೆ.ಸರಕಾರದಲ್ಲಿರುವ ಮಂತ್ರಿಗಳು ಗುಲ್ಬರ್ಗಾ ಮತ್ತು ಕಡೂರಿನಲ್ಲಿ ವಾಸ್ತವ್ಯ ಹೂಡಿ ತಮ್ಮ ಅಭ್ಯರ್ಥಿಗಳ ಗೆಲುಗಾಗಿ ಆಕ್ರಮ ನಡೆಸುತ್ತಿದ್ದಾರೆ ಎಂದರು.

ಸರಕಾರದಿಂದ ರಾಜ್ಯದ ಅಭಿವೃದ್ಧಿಯಲ್ಲಿ ಶೂನ್ಯವಾಗಿರುವುದರಿಂದ, ಮುಖ್ಯಮಂತ್ರಿಗಳು ಸುಳ್ಳುಗಳನ್ನು ಹೇಳಿ ಜನತೆಯನ್ನು ವಂಚಿಸುವ ಹುನ್ನಾರ ನಡೆಸುತ್ತಿದ್ದಾರೆ. ಉಪಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳು ಧೂಳಿಪಟವಾಗಲಿವೆ ಎಂದು ಕುಮಾರ ಸ್ವಾಮಿ ಭವಿಷ್ಯ ನುಡಿದರು.
ಸಂಬಂಧಿತ ಮಾಹಿತಿ ಹುಡುಕಿ