ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಕೂಡಲೇ ಈಶ್ವರಪ್ಪನನ್ನು ಬಂಧಿಸಿ: ಜನಾರ್ದನ ಪೂಜಾರಿ (Ishwarappa | Janardana Poojary | Congress | BJP | Yeddurappa)
Bookmark and Share Feedback Print
 
ತಮ್ಮದು ಶಿಸ್ತಿನ ಪಕ್ಷ, ಬದ್ದತೆ ಇರುವ ಪಕ್ಷ ಎಂದು ಬಡಾಯಿ ಕೊಚ್ಚಿಕೊಳ್ಳುತ್ತಿರುವ ಬಿಜೆಪಿ ರಾಜ್ಯಾಧ್ಯಕ್ಷ ಕೆ.ಎಸ್.ಈಶ್ವರಪ್ಪ ಬಹಿರಂಗವಾಗಿ ಕೈ ಕಡಿಯುತ್ತೇನೆ. ನಾಲಿಗೆ ಸೀಳುತ್ತೇನೆ, ಮುಗಿಸಿ ಬಿಡುತ್ತೇನೆ ಎಂದು ಉಗ್ರಗಾಮಿಯಂತೆ ಮಾತನಾಡುತ್ತಿದ್ದಾರೆ. ಅವರ ವಿರುದ್ಧ ಈಗಾಗಲೇ ದೂರು ನೀಡಿದ್ದು, ರಾಜ್ಯದಲ್ಲಿ ಶಾಂತಿ ಕಾಪಾಡುವ ಸಲುವಾಗಿ ಅವರನ್ನು ಮೊದಲು ಬಂಧಿಸಿ ಎಂದು ಮಾಜಿ ಸಚಿವ ಜನಾರ್ದನ ಪೂಜಾರಿ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಜಾಪ್ರಭುತ್ವ, ಸಂವಿಧಾನದ ಬಗ್ಗೆ ಗೌರವ ಇಲ್ಲದ ಈಶ್ವರಪ್ಪ ಅವಿವೇಕಿಯಂತೆ ಮಾತನಾಡುತ್ತಿರುವುದು ಅವರ ಪಕ್ಷದ ಶಿಸ್ತನ್ನು ತೋರಿಸುತ್ತದೆ ಎಂದು ವ್ಯಂಗ್ಯವಾಡಿದರು.

ಅಕ್ರಮ ಗಣಿ ವಿಚಾರದಲ್ಲಿ ಇತರರ ವಿರುದ್ಧ ಗೂಬೆ ಕೂರಿಸುವ ಬದಲು ತಾಕತ್ತಿದ್ದರೆ ನಿಮ್ಮ ಸಂಪುಟದಲ್ಲೇ ಇರುವ ರೆಡ್ಡಿ ಸಹೋದರರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಿ ಎಂದು ಪೂಜಾರಿ ಸವಾಲು ಹಾಕಿದರು.

ಹರತಾಳು ಹಾಲಪ್ಪ ಹಾಗೂ ರೇಣುಕಾಚಾರ್ಯ ಪ್ರಕರಣದಿಂದ ಇಡೀ ರಾಜ್ಯ ತಲೆತಗ್ಗಿಸುವಂತೆ ಮಾಡಿರುವುದು ಬಿಜೆಪಿ ಪಕ್ಷದ ಸಾಧನೆಯಾಗಿದೆ ಎಂದು ವ್ಯಂಗ್ಯವಾಡಿದರು.
ಸಂಬಂಧಿತ ಮಾಹಿತಿ ಹುಡುಕಿ