ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಚುನಾವಣಾ ಬಹಿರಂಗ ಪ್ರಚಾರಕ್ಕೆ ತೆರೆ: ಗೆಲುವು ಯಾರಿಗೆ? (BJP | Congress | JDS | kaduru | Gulbarga | By election)
Bookmark and Share Feedback Print
 
ಆಡಳಿತಾರೂಢ ಬಿಜೆಪಿ ಮತ್ತು ವಿಪಕ್ಷಗಳಾದ ಕಾಂಗ್ರೆಸ್ ಮತ್ತು ಜೆಡಿಎಸ್‌ಗೆ ಪ್ರತಿಷ್ಠೆಯ ಕಣವಾಗಿರುವ ಕಡೂರು ಮತ್ತು ಗುಲ್ಬರ್ಗ ವಿಧಾನ ಕ್ಷೇತ್ರಗಳ ಉಪ ಚುನಾವಣೆಗೆ ಎರಡು ದಿನ ಬಾಕಿ ಇದ್ದು, ಶನಿವಾರ ಬಹಿರಂಗ ಪ್ರಚಾರಕ್ಕೆ ಅಧಿಕೃತವಾಗಿ ತೆರೆ ಬಿದ್ದಿದ್ದು, ಮತದಾರರ ಒಲೈಕೆಗಾಗಿ ಅಂತಿಮ ಹಂತದ ಕಸರತ್ತಿಗೆ ಮೂರು ಪಕ್ಷಗಳು ಸಜ್ಜಾಗಿವೆ.

ಇಂದು ಬಹಿರಂಗ ಪ್ರಚಾರ ಅಂತ್ಯಗೊಂಡಿದೆ, ಆ ನಿಟ್ಟಿನಲ್ಲಿ ಶನಿವಾರ ರಾತ್ರಿ ಹಾಗೂ ಭಾನುವಾರ ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳು ನಡೆಸುವ ಕೊನೆ ಹಂತದ ಗಿಮಿಕ್‌ಗಾಗಿ ಮುಂದಾಗಿವೆ. ಸೋಮವಾರ ಕಡೂರು ಮತ್ತು ಗುಲ್ಬರ್ಗಾ ದಕ್ಷಿಣ ಕ್ಷೇತ್ರದಲ್ಲಿ ಮತದಾನ ನಡೆಯಲಿದೆ.

ಕಡೂರು ಮತ್ತು ಗುಲ್ಬರ್ಗಾ ಕ್ಷೇತ್ರದಲ್ಲಿ ಮೂರು ಪಕ್ಷದ ಘಟಾನುಘಟಿಗಳು ಚುನಾವಣಾ ಪ್ರಚಾರ ನಡೆಸಿ ಜಿದ್ದಾ ಜಿದ್ದಿನ ಹೋರಾಟ ನೀಡಿದ್ದಾರೆ. ಮತದಾರರ ಮನವೊಲಿಕೆಗಾಗಿ ನಾನಾ ತರದ ಕಸರತ್ತು ನಡೆಸಿದ್ದಾರೆ.

ಗುಲ್ಬರ್ಗಾ ದಕ್ಷಿಣ ಕ್ಷೇತ್ರಕ್ಕೆ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಮಾಜಿ ಮುಖ್ಯಮಂತ್ರಿ ಧರಂಸಿಂಗ್ ಪುತ್ರ ಅಜಯ ಸಿಂಗ್, ಬಿಜೆಪಿ ಅಭ್ಯರ್ಥಿಯಾಗಿ ಶಿಶಿಲ್ ನಮೋಶಿ ಹಾಗೂ ಜೆಡಿಎಸ್‌ನಿಂದ ಅರುಣಾ ಪಾಟೀಲ ರೇವೂರ ಕಣದಲ್ಲಿದ್ದಾರೆ.

ಗುಲ್ಬರ್ಗ ದಕ್ಷಿಣ ಕ್ಷೇತ್ರದಲ್ಲಿ ಪುರುಷರ ಮತ 1,07, 057 ಹಾಗೂ ಮಹಿಳೆಯರ 1,03,141 ಮತಗಳಿವೆ. ಒಟ್ಟು 212 ಮತಗಟ್ಟೆಗಳು, ಅತಿ ಸೂಕ್ಷ್ಮ 171 ಹಾಗೂ 41 ಸೂಕ್ಷ್ಮ ಮತಗಟ್ಟೆಗಳಿವೆ.

ಇನ್ನುಳಿದಂತೆ ಕಡೂರು ಕ್ಷೇತ್ರದಲ್ಲಿಯೂ ಕೂಡ ಬಿಜೆಪಿ, ಕಾಂಗ್ರೆಸ್ ಮತ್ತು ಜೆಡಿಎಸ್ ಬಿರುಸಿನ ಪ್ರಚಾರ ನಡೆಸಿತ್ತು. ಜೆಡಿಎಸ್ ಅಭ್ಯರ್ಥಿ ವೈ.ಎಸ್.ವಿ.ದತ್ತ, ಬಿಜೆಪಿಯ ಡಾ.ವಿಶ್ವನಾಥ್ ಹಾಗೂ ಕಾಂಗ್ರೆಸ್‌ನಿಂದ ಕೆ.ಎಂ.ಕೆಂಪರಾಜು ಅಖಾಡದಲ್ಲಿದ್ದಾರೆ.

2008ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ನ ಕೆ.ಎಂ.ಕೃಷ್ಣಮೂರ್ತಿ 39,226, ಜೆಡಿಎಸ್‌ನ ವೈಎಸ್‌ವಿ ದತ್ತ 35,874 ಹಾಗೂ ಬಿಜೆಪಿಯ ಡಾ.ವೈ.ಸಿ.ವಿಶ್ವನಾಥ್ 31,614 ಮತಗಳನ್ನು ಗಳಿಸಿದ್ದರು. ಈ ಬಾರಿಯೂ ಕಡೂರು ಕ್ಷೇತ್ರದಲ್ಲಿ ತ್ರಿಕೋನ ಸ್ಪರ್ಧೆ ಏರ್ಪಟ್ಟಿದ್ದು ಮತದಾರ ಪ್ರಭು ಯಾರಿಗೆ ಒಲಿಯುತ್ತಾನೆ ಎಂಬುದನ್ನು ಕಾದು ನೋಡಬೇಕಾಗಿದೆ.
ಸಂಬಂಧಿತ ಮಾಹಿತಿ ಹುಡುಕಿ