ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಕಣ್ಮುಚ್ಚುವ ಮೊದಲು ಸತ್ಯ ಬಹಿರಂಗಪಡಿಸುವೆ: ದೇವೇಗೌಡ (Deve Gowda | Kumaraswamy | Sonia Gandhi | JDS | Siddharamayya)
Bookmark and Share Feedback Print
 
PTI
ಬೆಂಗಳೂರು: ನನ್ನ ಜೀವನದ ಅಂತಿಮ ಕ್ಷಣಗಳಲ್ಲಿ ಸುಳ್ಳು ಹೇಳಿ ನಾನು ಸಾಧಿಸಬೇಕಿರುವುದು ಏನೂ ಇಲ್ಲ. ರಾಜ್ಯದ ಜನತೆಗೆ ತಿಳಿಸಬೇಕಿರುವ ಸತ್ಯ ಇನ್ನೂ ಬೇಕಾದಷ್ಟಿದೆ. ಅವೆಲ್ಲ ಸಂಗತಿಗಳನ್ನು ತಿಳಿಸಿಯೇ ನಾನು ಕಣ್ಣು ಮುಚ್ಚುತ್ತೇನೆ ಎಂದು ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಹೇಳಿದ್ದಾರೆ.

ಪತ್ರಕರ್ತರನ್ನು ಉದ್ದೇಶಿಸಿ ಮಾತನಾಡಿದ ಅವರು, ನನ್ನನ್ನು ಪುತ್ರ ವ್ಯಾಮೋಹಿ ಎಂದು ಸಿದ್ಧರಾಮಯ್ಯ ಅವರು ಟೀಕಿಸಿದ್ದಾರೆ. ನಾನು ನಿಜಕ್ಕೂ ಪುತ್ರ ವ್ಯಾಮೋಹಿಯೇ ಆಗಿರುತ್ತಿದ್ದರೆ, ಸಿದ್ಧರಾಮಯ್ಯ ಅವರನ್ನು ಯಾಕೆ ಬೆಳೆಸುತ್ತಿದ್ದೆ ಹೇಳಿ ಎಂದು ಮರುಪ್ರಶ್ನೆ ಹಾಕಿದರು ದೇವೇಗೌಡ.

ಅಂದೊಮ್ಮೆ ಸಿದ್ಧರಾಮಯ್ಯ ಅವರನ್ನು ಉಪಮುಖ್ಯಮಂತ್ರಿಯನ್ನಾಗಿಸಲು ನಾನು ಸೋನಿಯಾ ಗಾಂಧಿ ಅವರ ಕೈಕಾಲು ಹಿಡಿದಿದ್ದೆ ಎಂದ ದೇವೇಗೌಡ, ರಾಜ್ಯದ ಜನತೆಗೆ ನಾನು ತಿಳಿಸಬೇಕಿರುವ ಸತ್ಯಗಳು ಸಾಕಷ್ಟಿವೆ. ಅವೆಲ್ಲವನ್ನೂ ಖಂಡಿತ ತಿಳಿಸುವೆ. ನಾನು ಕಣ್ಮುಚ್ಚುವ ಮೊದಲು ಅವೆಲ್ಲವುಗಳನ್ನೂ ಬಹಿರಂಗ ಪಡಿಸಲಿದ್ದೇನೆ ಎಂದು ದೇವೇಗೌಡ ಹೇಳಿದರು.
ಸಂಬಂಧಿತ ಮಾಹಿತಿ ಹುಡುಕಿ