ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಸಚಿವರ ಹಗರಣಕ್ಕೆ ಹೊಣೆ ಯಾರು?: ಚಲುವರಾಯಸ್ವಾಮಿ (Chaluvaraya swamy | BJP | Congress | JDS | Kumarswamy)
Bookmark and Share Feedback Print
 
ರಾಜ್ಯ ಸರಕಾರದ ಒಬ್ಬೊಬ್ಬರೇ ಸಚಿವರು ಹಗರಣದಲ್ಲಿ ಸಿಲುಕಿ ರಾಜೀನಾಮೆ ನೀಡುತ್ತಿದ್ದಾರೆ. ಇದಕ್ಕೆ ಹೊಣೆ ಯಾರು ಎಂದು ಸಂಸದ ಎನ್. ಚಲುವರಾಯಸ್ವಾಮಿ ಪ್ರಶ್ನಿಸಿದರು.

ಎಲ್ಲರೂ ತಪ್ಪು ಮಾಡಿ ನಂತರ ರಾಜೀನಾಮೆ ನೀಡಿದರೆ ಅದಕ್ಕೇನು ಅರ್ಥ. ಇದರಲ್ಲಿ ಮುಖ್ಯಮಂತ್ರಿಯವರ ಜವಾಬ್ದಾರಿ ಎಷ್ಟಿದೆ ಎಂಬುದನ್ನು ಪ್ರಶ್ನಿಸುವಂತಾಗಿದೆ ಎಂದು ಪತ್ರಿಕಾಗೋಷ್ಠಿಯಲ್ಲಿ ದೂರಿದರು.

ರಾಜ್ಯ ಸಚಿವ ಸಂಪುಟದ ಸಚಿವರೊಬ್ಬರು (ಜನಾರ್ದನ ರೆಡ್ಡಿ) ವಿವಿಧ ಪ್ರಕರಣಗಳಿಗೆ ಸಂಬಂಧಿಸಿದಂತೆ ನ್ಯಾಯಾಲಯದಿಂದ 10 ವಾರಂಟ್ ಪಡೆದಿದ್ದರೂ ಕೋರ್ಟ್‌ಗೆ ಹಾಜರಾಗುತ್ತಿಲ್ಲ. ಹೀಗೆ ನೈತಿಕ ಮೌಲ್ಯವನ್ನು ಕಳೆದುಕೊಳ್ಳುತ್ತಿದ್ದಾರೆ ಎಂದು ಟೀಕಿಸಿದರು.

ಬಿಜೆಪಿ ಶಿಸ್ತುಬದ್ಧ ಪಕ್ಷ ಎಂದು ಹೆಸರಾಗಿತ್ತು. ಆದರೆ, ರಾಜ್ಯದಲ್ಲಿ ಆಡಳಿತದ ಚುಕ್ಕಾಣಿ ಹಿಡಿದಿರುವ ಬಿಜೆಪಿಯನ್ನು ನೋಡಿದರೆ ಹಾಗೆನ್ನಲಾಗದು. ರಾಷ್ಟ್ರದಲ್ಲೇ ಕರ್ನಾಟಕ ಸರಕಾರ ಭ್ರಷ್ಟಾಚಾರ ಮತ್ತು ಅವ್ಯವಹಾರದಲ್ಲಿ ನಂ.1 ಸ್ಥಾನದಲ್ಲಿದೆ ಎಂದು ಆಪಾದಿಸಿದರು.

ಮೈಸೂರು, ಹಾಸನ ವೈದ್ಯಕೀಯ ಕಾಲೇಜುಗಳಲ್ಲಿ ಅಕ್ರಮ ನೇಮಕ ಬಯಲಾದ ಬೆನ್ನಲ್ಲೇ ಮಂಡ್ಯ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಲ್ಲೂ ಅಕ್ರಮ ನಡೆದಿರುವುದು ಬೆಳಕಿಗೆ ಬಂದಿದೆ. ಮೂರು ಕಾಲೇಜುಗಳ ಅವ್ಯವಹಾರದ ಪರಿಣಾಮ ಈಗಾಗಲೇ ವೈದ್ಯಕೀಯ ಸಚಿವ ರಾಮಚಂದ್ರಗೌಡ ರಾಜೀನಾಮೆ ನೀಡಿದ್ದಾರೆ.

ಸೂಕ್ತ ತನಿಖೆ ನಡೆಸುವುದಾಗಿ ಮುಖ್ಯಮಂತ್ರಿಯೂ ತಿಳಿಸಿದ್ದಾರೆ. ಈ ನಡುವೆ ನ್ಯಾಯಾಲಯವೂ ಮಧ್ಯೆ ಪ್ರವೇಶ ಮಾಡಿರುವುದರಿಂದ ಸಮಸ್ಯೆ ಶೀಘ್ರದಲ್ಲೇ ಬಗೆಹರಿಯುವ ವಿಶ್ವಾಸವಿದೆ. ಈಗಲಾದರೂ ಸರಕಾರ ಎಚ್ಚೆತ್ತು ಸರಿಯಾಗಿ ಹೆಜ್ಜೆ ಇಡಬೇಕೆಂದು ಸಲಹೆ ನೀಡಿದರು.
ಸಂಬಂಧಿತ ಮಾಹಿತಿ ಹುಡುಕಿ