ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ದಲಿತ ಕ್ರಿಶ್ಚಿಯನ್‌ರನ್ನು ಪೋಪ್ ಮಾಡ್ತೀರಾ?: ಪೇಜಾವರಶ್ರೀ (Pejavara shree | Dalith | Udupi muta | Mysore | Christan | Cast)
Bookmark and Share Feedback Print
 
ಯಾವುದೇ ಜಾತಿ ಇರಲಿ ತಮ್ಮ ಮಠಕ್ಕೆ ಬೇರೆಯವನ್ನು ಪೀಠಾಧಿಪತಿಯನ್ನಾಗಿ ನೇಮಕ ಮಾಡುವುದಿಲ್ಲ. ಹಾಗಾಗಿ ಪೇಜಾವರ ಮಠದಲ್ಲಿಯೂ ದಲಿತರನ್ನ ಉತ್ತರಾಧಿಕಾರಿಯನ್ನಾಗಿ ನೇಮಕ ಮಾಡುವ ಪ್ರಶ್ನೆಯೇ ಇಲ್ಲ ಎಂದು ಉಡುಪಿ ಪೇಜಾವರಶ್ರೀ ಅಭಿಪ್ರಾಯವ್ಯಕ್ತಪಡಿಸಿದ್ದಾರೆ.

ಅವರು ಮೈಸೂರು ಜಿಲ್ಲಾ ಪತ್ರಕರ್ತರ ಸಂಘ ಆಯೋಜಿಸಿದ್ದ ಸಂವಾದದಲ್ಲಿ ಮಾತನಾಡುತ್ತ, ದಲಿತ ಕ್ರಿಶ್ಚಿಯನ್‌ರನ್ನು ಪೋಪ್ ಆಗಿ ಮಾಡುತ್ತಾರೆಯೇ ಎಂದು ಪ್ರಶ್ನಿಸಿದ ಶ್ರೀಗಳು ಕೇವಲ ಬ್ರಾಹ್ಮಣ ಪೀಠಾಧಿಪತಿಗಳಿಗೆ ಮಾತ್ರ ಬೇರೆ ಜಾತಿಯವರನ್ನು ಪೀಠಾಧಿಪತಿಗಳನ್ನಾಗಿ ಮಾಡಿ ಎಂದು ಸವಾಲು ಹಾಕುವುದು ಸರಿಯಲ್ಲ ಎಂದರು.

ಹಾಗೇ ಸಾಧ್ಯವಾಗುವುದಾದರೆ ದಲಿತ ಕ್ರಿಶ್ಚಿಯನ್‌ರನ್ನು ಪೋಪ್ ಆಗಿ ಮಾಡಲಿ ಎಂದು ಸವಾಲು ಹಾಕಿದರು. ನಾನು ಯಾವುದೇ ಜಾತಿ ವ್ಯವಸ್ಥೆ ಪರವಾಗಿ ಮಾತನಾಡುತ್ತಿಲ್ಲ. ಸಮಾಜದಲ್ಲಿ ಎಲ್ಲರಿಗೂ ಸಮಾನತೆ ಇರಬೇಕು. ನಾನೇನು ಇಸ್ಲಾಮ್ ದ್ವೇಷಿಯಲ್ಲ. ಆದರೆ ಅಲ್ಪಸಂಖ್ಯಾತರಿಗೆ ಹೆಚ್ಚಿನ ಅನುದಾನ ನೀಡಿರುವ ಬಗ್ಗೆ ಆಕ್ಷೇಪ ಇದೆ ಎಂದು ಹೇಳಿದರು.

ಪ್ರಗತಿಪರರು, ಚಿಂತಕರು ದಲಿತರನ್ನು ಪೀಠಾಧಿಪತಿಗಳನ್ನಾಗಿ ಮಾಡಿ ಎಂದು ಸವಾಲು ಹಾಕುತ್ತಾರೆ. ಹಾಗಾದರೆ ಅದೇ ಸವಾಲನ್ನು ಕ್ರಿಶ್ಚಿಯನ್‌ರಿಗೆ ಹಾಕಲಿ ಎಂದು ತಿರುಗೇಟು ನೀಡಿದರು. ಇದೆಲ್ಲ ಸೋಗಲಾಡಿತನ. ವಾಸ್ತವವನ್ನು ಅರಿತು ಮಾತನಾಡಬೇಕು ಎಂದು ಸಲಹೆ ನೀಡಿದರು.

ನಾನು ಈವರೆಗೂ ಸಹಪಂಕ್ತಿ ಭೋಜನ ಮಾಡಿಲ್ಲ. ಆದರೆ ನಮ್ಮ ಮಠದಲ್ಲಿ ಸಹಪಂಕ್ತಿ ಭೋಜನದ ವ್ಯವಸ್ಥೆ ಇದೆ. ಸಮಾಜದಲ್ಲಿನ ಮೇಲು-ಕೀಳು ಅಸ್ಪಶ್ರ್ಯತೆ ಭಾವನೆ ತೊಡೆದು ಹಾಕಲು ಶ್ರಮಿಸಬೇಕಾದದ್ದು ಅತ್ಯಗತ್ಯ ಎಂದು ಸಂವಾದದಲ್ಲಿ ತಿಳಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ