ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಮತ್ತೆ ಜನತಾ ಪರಿವಾರಕ್ಕೆ ಬನ್ನಿ: ಕುಮಾರಸ್ವಾಮಿ ಕರೆ (Kumaraswmay | JDS | Deve gowda | Congress | BJP)
Bookmark and Share Feedback Print
 
ಜನತಾ ಪರಿವಾರವನ್ನು ಬಿಟ್ಟು ಹೋದ ಎಲ್ಲ ನಾಯಕರು ಮರಳಿ ಜೆಡಿಎಸ್‌ಗೆ ಬರುವಂತೆ ಮಾಜಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಮುಕ್ತ ಆಹ್ವಾನ ನೀಡಿದ್ದಾರೆ.

ಜನತಾ ಪರಿವಾರದಲ್ಲಿದ್ದಾಗ ನಿಷ್ಠೆಯಿಂದ ಕೆಲಸ ಮಾಡಿದ ಅನೇಕರು ಜನ ನಾಯಕರಾಗಿದ್ದಾರೆ. ಅನಿವಾರ್ಯ ಕಾರಣಗಳಿಂದ ಪಕ್ಷ ಬಿಟ್ಟು ಕಾಂಗ್ರೆಸ್ ಮತ್ತು ಬಿಜೆಪಿ ಸೇರಿದ್ದಾರೆ. ಆದರೆ ಆ ಪಕ್ಷಗಳಲ್ಲಿ ಇವರ ಕೆಲಸ ಮತ್ತು ಪಕ್ಷ ನಿಷ್ಠೆಯನ್ನು ಮೆಚ್ಚಿಕೊಳ್ಳುವ ಜನರಿಲ್ಲ, ಇದೆಲ್ಲವನ್ನು ಅರಿತು ಎಲ್ಲ ನಾಯಕರು ಮತ್ತೆ ಜೆಡಿಎಸ್‌ಗೆ ಬರುವುದು ಸೂಕ್ತ ಎಂದರು.

ಗುಲ್ಬರ್ಗ ದಕ್ಷಿಣ ಕ್ಷೇತ್ರದಲ್ಲಿ ಜೆಡಿಎಸ್ ಜಯಗಳಿಸಿದ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಜೆಡಿಎಸ್ ಅನ್ನು ರಾಜ್ಯದಲ್ಲಿ ಬಲಿಷ್ಠಗೊಳಿಸೋಣ, ಎಲ್ಲ ಅಭಿವೃದ್ದಿ ಕಾರ್ಯಗಳನ್ನು ಮಾಡೋಣ ಎಂದು ಅವರು ಮನವಿ ಮಾಡಿದರು.

ಜನತಾ ಪರಿವಾರ ಅಧಿಕಾರದಲ್ಲಿದ್ದಾಗ ರಾಜ್ಯದಲ್ಲಿ ಆಗಿರುವಷ್ಟು ಅಭಿವೃದ್ಧಿ ಕಾರ್ಯಗಳು ಇನ್ನಾವುದೇ ಸರಕಾರದಲ್ಲಿ ಆಗಿಲ್ಲ. ಅಭಿವೃದ್ಧಿ ಕಾರ್ಯದಲ್ಲಿ ಜನತಾ ಪರಿವಾರ ಬಿಟ್ಟು ಹೋದ ನಾಯಕರ ಪಾತ್ರವೂ ಇದೆ. ಅಂತಲೇ ಇವರೆಲ್ಲ ಮತ್ತೆ ಜೆಡಿಎಸ್‌ಗೆ ಬಂದರೆ ಅಭಿವೃದ್ದಿಯ ಪ್ರವಾಹವನ್ನು ಹರಿಸಬಹುದು ಎಂದು ಅವರು ಹೇಳಿದರು.

ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಒಟ್ಟು 15 ಕ್ಷೇತ್ರಗಳಿಗೆ ಮರು ಚುನಾವಣೆ ನಡೆದಿದೆ. ಅದರಲ್ಲಿ ಎಂಟು ಸ್ಥಾನಗಳನ್ನು ಬಿಜೆಪಿ ಮತ್ತು ಆರು ಸ್ಥಾನಗಳನ್ನು ಜೆಡಿಎಸ್ ಗಳಿಸಿವೆ. ಕಾಂಗ್ರೆಸ್ ಒಂದೇ ಒಂದು ಸ್ಥಾನ ಗಳಿಸಿದೆ. ಇದನ್ನು ನೋಡಿದರೆ ಜೆಡಿಎಸ್ ಬಲಿಷ್ಟ ಪಕ್ಷ ಎನ್ನುವುದನ್ನು ಈ ಜನನಾಯಕರು ಅರಿತುಕೊಂಡು ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.ಕೋರಿದರು.
ಸಂಬಂಧಿತ ಮಾಹಿತಿ ಹುಡುಕಿ