ರಾಜಕಾರಣಿಗಳು ಸುಳ್ಳನ್ನು ಸತ್ಯದ ತಲೆ ಮೇಲೆ ಹೊಡೆದಂತೆ ಯಾವ ರೀತಿಯಲ್ಲಿ ಹೇಳುತ್ತಾರೆಂಬುದಕ್ಕೆ ಬಿಬಿಎಂಪಿ ಮೇಯರ್ ಎಸ್.ಕೆ.ನಟರಾಜ್ ಅವರು ಮತ್ತೊಂದು ಸೇರ್ಪಡೆ. ಹೊಸ ಕಾರು ಖರೀದಿಸುವುದಿಲ್ಲ ಎಂದು ಬಹಿರಂಗವಾಗಿ ಹೇಳುತ್ತಿದ್ದ ಮೇಯರ್ ಇದೀಗ ಹೊಸ ಟೊಯೊಟಾ ಕರೋಲಾ ಆಲ್ಟಿಸ್ ಕಾರು ಖರೀದಿಸಿದ್ದಾರೆ.
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಪ್ರಥಮ ಮೇಯರ್ ಆಗಿ ಅಧಿಕಾರ ವಹಿಸಿಕೊಂಡಿದ್ದ ಕೆಲವು ವಾರಗಳಲ್ಲೇ ಹೊಸ ಕಾರು ಖರೀದಿಗೆ ಮುಂದಾಗಿದ್ದರು. ಈ ಬಗ್ಗೆ ಆಯುಕ್ತರಿಗೆ ಪ್ರಸ್ತಾಪವನ್ನೂ ಕಳುಹಿಸಿದ್ದರು. ಆದರೆ ಇದು ಸಾಕಷ್ಟು ವಿವಾದಕ್ಕೆ ಎಡೆಮಾಡಿಕೊಟ್ಟಿತ್ತು. ನಂತರ ತನಗೆ ಹೊಸ ಕಾರು ಖರೀದಿಯ ಮನಸ್ಸಿಲ್ಲ ಈಗಿರುವ ಟೊಯೊಟಾ ಕರೋಲಾ ಕಾರನ್ನೇ ಬಳಸುವುದಾಗಿ ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದ್ದರು.
ಇದೀಗ ಕಾರು ಖರೀದಿಸುವುದಿಲ್ಲ ಎಂದು ಬೊಗಳೆ ಬಿಡುತ್ತಿದ್ದ ಮೇಯರ್ ನಟರಾಜ್ ಅವರು ಸದ್ದಿಲ್ಲದೆ ಸುಮಾರು 15 ಲಕ್ಷ ರೂಪಾಯಿ ಮೌಲ್ಯದ ಟೊಯೊಟಾ ಕರೋಲಾ ಆಲ್ಟಿಸ್ ಕಾರು ಖರೀದಿಸಿ ಓಡಾಡುತ್ತಿದ್ದಾರೆ.