ಬೆಂಗಳೂರು, ಭಾನುವಾರ, 19 ಸೆಪ್ಟೆಂಬರ್ 2010( 10:20 IST )
ದಕ್ಷಿಣ ಭಾರತದ ಪ್ರಥಮ ಬಿಜೆಪಿ ಸರಕಾರದ ಮೊದಲ ಸಚಿವ ಸಂಪುಟ ವಿಸ್ತರಣೆಗೆ ಕರ್ನಾಟಕ ಆಣಿಯಾಗುತ್ತಿದೆ. ಈ ಸಂಬಂಧ ಸಿಎಂ ಬಿಎಸ್ ಯಡಿಯೂರಪ್ಪ ಜತೆ ಬಿಜೆಪಿ ರಾಜ್ಯಧ್ಯಕ್ಷ ಕೆ. ಎಸ್. ಈಶ್ವರಪ್ಪ ಮತ್ತೊಂದು ಸುತ್ತಿನ ಮಾತುಕತೆ ಇಂದು (ಭಾನುವಾರ) ನಡೆಸಲಿದ್ದಾರೆ.
ಇಂದು ಬೆಳಿಗ್ಗೆ ಬೆಂಗಳೂರಿನ ರೇಸ್‌ಕೋರ್ಸ್ ರಸ್ತೆಯ ಸಿಎಂ ನಿವಾಸಕ್ಕೆ ಭೇಟಿ ನೀಡಿದ ಈಶ್ವರಪ್ಪ, ಸಚಿವ ಸಂಪುಟ ಪುನರಾಚಣೆ ವಿಷಯದ ಬಗ್ಗೆ ಚರ್ಚೆ ಆರಂಭಿಸಿದ್ದಾರೆ.
ಇದರೊಂದಿಗೆ ಆಡಳಿತ ಪಕ್ಷದ ಸಚಿವ ಸಂಪುಟ ಪುನರಾಚನೆ ಕಸರತ್ತು ಮುಂದುವರಿದಂತಾಗಿದೆ. ಈ ಹಿಂದೆ ಉಪ ಚುನಾವಣೆ ಮುಗಿಯವರೆಗೂ ಸಚಿವ ಸಂಪುಟ ಪುನರಾಚನೆ ವಿಷಯವನ್ನು ತಡೆ ಹಿಡಿಯಲಾಗಿತ್ತು.
ಈಗಗಾಲೇ ಮೂರು ಸಚಿವ ಸ್ಥಾನಗಳು ತೆರವಾಗಿದ್ದರಿಂದೆ ಬೇಗನೆ ನೇಮಕ ಮಾಡಬೇಕು ಎಂಬುದು ಮುಖ್ಯುಮಂತ್ರಿಗಳ ಬಯಕೆಯಾಗಿದೆ. ಅಲ್ಲದೆ ಈ ವಿಷಯದಲ್ಲಿ ಆರ್‌ಎಸ್ಸೆಸ್ ಮುಖಂಡರ ಮನವೊಳಿಸಲು ಸಿಎಂ ಯತ್ನಿಸಲಿದ್ದಾರೆ.
ನಿನ್ನೆ ಮಧ್ಯಾಹ್ನದಿಂದ ಆರಂಭವಾದ ಚರ್ಚೆ ಇದೀಗಲೂ ಮುಂದುವರಿಯುತ್ತಿದೆ. ಯಾವೆಲ್ಲಾ ಶಾಸಕರನ್ನು ಮಂತ್ರಿ ಮಂಡಲದಲ್ಲಿ ಸೇರಿಸಬೇಕು ಎಂಬುದರ ಬಗ್ಗೆ ಚರ್ಚೆ ನಡೆಯಲಿದೆ. ಆದರೆ ಸ್ಪಷ್ಟವಾದ ತಿರ್ಮಾನಕ್ಕೆ ಮುಖಂಡರು ಬಂದಿಲ್ಲ. ಹೊಸಬರಿಗೆ ಅವಕಾಶ ನೀಡುವಂತೆ ಈಶ್ವರಪ್ಪ ಪಟ್ಟು ಹಿಡಿದ್ದಿದ್ದಾರೆ ಎಂದು ತಿಳಿದು ಬಂದಿದೆ.
ಸಂಜೆಯ ವೇಳೆಗೆ ಅಂತಿಮ ತೀರ್ಮಾನ ಹೊರಬೀಳುವ ನಿರೀಕ್ಷೆಯಿದೆ. ನಂತರ ವರದಿಯನ್ನು ಹೈಕಮಾಂಡ್‌ಗೂ ಸಲ್ಲಿಸಲಾಗುತ್ತದೆ.