ಬೆಂಗಳೂರು, ಭಾನುವಾರ, 19 ಸೆಪ್ಟೆಂಬರ್ 2010( 16:15 IST )
ಲಂಚ ಸ್ವೀಕಾರ ಪ್ರಕರಣದಲ್ಲಿ ಅಮಾನತುಗೊಂಡಿದ್ದ ಬಿಬಿಎಂಪಿ ಸದಸ್ಯ ಎಲ್. ಗೋವಿಂದರಾಜು ಅಮಾನತು ಆದೇಶವನ್ನು ಸರ್ಕಾರ ಹಿಂದಕ್ಕೆ ಪಡೆದುಕೊಂಡಿದೆ.
ಬಿಬಿಎಂಪಿ ಸದಸ್ಯ ಎಲ್ ಗೋವಿಂದರಾಜು ಲಂಚ ಸ್ವೀಕಾರ ಪ್ರಕರಣದಲ್ಲಿ ಸಿಕ್ಕಿಬಿದ್ದಿದ್ದರು. ಅಲ್ಲದೆ ಪಾಲಿಕೆಯ ಇತಿಹಾಸದಲ್ಲಿ ಸದಸ್ಯರೊಬ್ಬರನ್ನು ಅಮಾನತು ಮಾಡಿರುವ ಮೊದಲ ಪ್ರಕರಣ ಇದಾಗಿತ್ತು.
ಗಣೇಶ ಮಂದಿರ ವಾರ್ಡಿನ ಸದಸ್ಯರಾಗಿದ್ದ ಗೋವಿಂದರಾಜು ಜುಲೈ 12 ರಂದು 2 ಲಕ್ಷ ರುಪಾಯಿ ಲಂಚ ಪಡೆಯುತ್ತಿರುವಾಗ ಲೋಕಾಯುಕ್ತರ ಬಲೆಗೆ ಬಿದ್ದಿದ್ದರು. ನಂತರ ಅವರು ಜಾಮೀನಿನ ಮೇಲೆ ಬಿಡುಗಡೆ ಹೊಂದಿದ್ದರು.