ಬೆಂಗಳೂರು, ಭಾನುವಾರ, 19 ಸೆಪ್ಟೆಂಬರ್ 2010( 17:19 IST )
ರಾಜ್ಯ ಸಚಿವ ಸಂಪುಟ ಪುನರಾಚನೆ ಸಂಬಂಧಿಸಿದ ವಿಚಾರವು ಇದೀಗ ದೆಹಲಿನಲ್ಲಿರುವ ಹೈಕಮಾಂಡ್ ಕೋರ್ಟ್‌ಗೆ ತಲುಪಿದೆ. ಇಂದು ಸಿಎಂ ನಿವಾಸದಲ್ಲಿ ನಡೆದ ಸಭೆ ಅಂತ್ಯಗೊಂಡಿದ್ದು, ಬಿಜೆಪಿ ರಾಜ್ಯ ಘಟಕದಿಂದ ಅಂತಿಮ ಪಟ್ಟಿ ತಯಾರಿಸಲಾಗಿದೆ.
ಈ ಬಗ್ಗೆ ಹೈಕಮಾಂಡ್ ಜತೆ ಚರ್ಚಿಸಲು ಮುಖ್ಯಮಂತ್ರಿ ಬಿ. ಎಸ್ ಯಡ್ಡಿಯೂರಪ್ಪ ದೆಹಲಿಗೆ ಪಯಾಣಿಸಿದ್ದಾರೆ. ಸಿಎಂ ಜತೆ ಗೃಹ ಸಚಿವ ವಿ ಎಸ್ ಆಚಾರ್ಯ ಕೂಡಾ ದೆಹಲಿಗೆ ದೌಡಾಯಿಸಲಿದ್ದಾರೆ. ದೆಹಲಿಯಲ್ಲಿ ಹೈಕಮಾಂಡ್ ಜತೆ ನಡೆಯಲಿರುವ ಚರ್ಚೆ ಬಳಿಕ ಪಟ್ಟಿ ಬಿಡುಗಡೆ ಮಾಡಲಾಗುತ್ತಿದೆ.
ಇಂದು ಬೆಂಗಳೂರಿನ ರೇಸ್‌ಕೋರ್ಸ್ ರಸ್ತೆಯ ಸಿಎಂ ನಿವಾಸಕ್ಕೆ ಭೇಟಿ ನೀಡಿದ ಈಶ್ವರಪ್ಪ ಮತ್ತು ರಾಜ್ಯಸಭಾ ಸದಸ್ಯ ವೆಂಕಯ್ಯನಾಯ್ಡು ಸಂಪುಟ ವಿಸ್ತರಣೆಯ ಬಗ್ಗೆ ಸುದೀರ್ಘ ಚರ್ಚೆ ನಡೆಸಿದರು. ಹೊಸ ಶಾಸಕರಿಗೂ ಅವಕಾಶ ಕಲ್ಪಿಸುವ ನಿಟ್ಟಿನಲ್ಲಿಯೂ ಪಟ್ಟಿ ಸಿದ್ದಗೊಳಿಸಲಾಗಿದೆ ಎಂದು ತಿಳಿದು ಬಂದಿದೆ.
ಮೂಲಗಳ ಪ್ರಕಾರ ಬಿಜೆಪಿ ರಾಜ್ಯ ಘಟಕ ತಯಾರಿಸಿರುವ ಪಟ್ಟಿಯಲ್ಲಿ ಶೋಭಾ ಕರಂದ್ಲಾಜೆ, ಆನೇಕಲ್ ನಾರಾಯಣಸ್ವಾಮಿ, ವಿ. ಸೋಮಣ್ಣ, ಸಿ. ಸಿ ಪಾಟೀಲ್ ಎ. ರಾಮದಾಸ್ ಮತ್ತು ಸಿ. ಎಚ್ ವಿಜಯ್ ಶಂಕರ್ ಕಾಣಿಸಿಕೊಂಡಿದ್ದಾರೆ. ಅದೇ ಹೊತ್ತಿಗೆ ಮುಮ್ತಾಜ್ ಅಲಿಕಾಲ್, ಅರವಿಂದ ಲಿಂಬಾವಳಿ, ಶಿವನಗೌಡ ನಾಯಕ್, ಗೂಳಿಹಟ್ಟಿ ಶೇಖರ್‌ರನ್ನು ಕೈಬಿಡಲಾಗಿದೆ ಎಂದು ಹೇಳಲಾಗುತ್ತಿದೆ.